ಒಂದು ಫೋಟೋ ಆಧಾರದ ಮೇಲೆ ವ್ಯಕ್ತಿಗಳ ವ್ಯಕ್ತಿತ್ವವನ್ನ ಪ್ರಶ್ನಿಸಬಾರದು

2 years ago

ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಂಗ ಕ್ಷೇತ್ರದಲ್ಲಿ ಜನಸಾಮಾನ್ಯರಲ್ಲಿ ನಂಬಿಕೆ ಮತ್ತು ಭರವಸೆಯನ್ನು ಮೂಡಿಸಿರುವುದು ಸರ್ವೋಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ವೈವಿ ಚಂದ್ರಚೂಡರವರ ನಡವಳಿಕೆ ಮತ್ತು ವ್ಯಕ್ತಿತ್ವ‌.

ಕಳೆದ ವಾರ ದೇಶದ ಪ್ರಧಾನ ಮಂತ್ರಿಗಳು ಅವರ ಮನೆಯ ಗಣೇಶನ ಪೂಜೆಯಲ್ಲಿ ಪಾಲ್ಗೊಂಡಿರುವ ಫೋಟೋ  ಪತ್ರಿಕೆಗಳಲ್ಲಿ ಪ್ರಕಟಣೆಗೊಂಡ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಅವರ ಬದ್ಧತೆ ಮತ್ತು ಕಾಳಜಿಯ ಬಗ್ಗೆ ಅನುಮಾನವನ್ನ ವ್ಯಕ್ತಪಡಿಸುವ ರೀತಿಯಲ್ಲಿ ಅಭಿಪ್ರಾಯಗಳನ್ನು ಪ್ರಕಟಿಸುತ್ತಿರುವುದು ಸರಿಯಾದಂತಹ ಲಕ್ಷಣವಲ್ಲ.

ತಮ್ಮ ಬದುಕಿನ ಉದ್ದಕ್ಕೂ ಇಲ್ಲಿಯ ತನಕ ನ್ಯಾಯಾಂಗ ಕ್ಷೇತ್ರದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಹಾಗೂ ಬದ್ಧತೆಯ ನಡವಳಿಕೆಯನ್ನ ಎಂತಹ ಸಂದರ್ಭದಲ್ಲಿ ಬಿಟ್ಟುಕೊಡದೆ ನಡೆದುಕೊಂಡಿರುವಂತಹ ಇವರ ವಿಚಾರದಲ್ಲಿ ಕೇವಲ ಒಂದು ಫೋಟೋ ಮುಂದೆ ಮಾಡಿಕೊಂಡು ಚರ್ಚಿಸುವುದು ಅವರ ವ್ಯಕ್ತಿತ್ವಕ್ಕೆ ಮಾಡುವಂತಹ ಕಳಂಕವಾಗುತ್ತದೆ.

ಪರಸ್ಪರ ಸ್ನೇಹಕ್ಕೂ ಮತ್ತು ವಿಚಾರ ಗಳಿಗೆ ಸಂಬಂಧಗಳನ್ನ ಪೊಣಿಸಬಾರದು ಸ್ನೇಹವೇ ಬೇರೆ ನಂಬಿಕೆ ವಿಚಾರಗಳೇ ಬೇರೆ ಆಗಿರುತ್ತದೆ.

ಸಂದರ್ಭ ಸನ್ನಿವೇಶ ಇವುಗಳನ್ನ ಅರಿತುಕೊಳ್ಳದೆ ಯಾವುದೇ ವ್ಯಕ್ತಿಯ ಬಗ್ಗೆ ಒಂದು ಕಾರಣಕ್ಕಾಗಿ  ಆತುರದಿಂದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ದುಡಿಕಿನ ನಿರ್ಧಾರಗಳಾಗುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply