ಜೂನ್ 27ರಿಂದ 29ರವರೆಗೆ ಫೋಟೋ ಟುಡೇ ವಸ್ತು ಪ್ರದರ್ಶನ
ಬೆಂಗಳೂರು: ಕರ್ನಾಟಕ ವಿಡಿಯೊ ಮತ್ತು ಫೋಟೋ ಅಸೋಸಿಯೇಷನ್ ನ 25ನೇ ವರ್ಷದ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಕರ್ನಾಟಕ ವಿಡಿಯೊ ಮತ್ತು ಫೋಟೋ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಕೃಷ್ಣಪ್ಪ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಡಿಯೊ ಮತ್ತು ಫೋಟೋ ಅಸೋಸಿಯೇಷನ್ ಮತ್ತು ಬೈಸೇಲ್ ಇನ್ ಟ್ರಾಕ್ಟನ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಗ್ರಾಹಕರ ಸಂಘದ ಸಹಯೋಗದಲ್ಲಿ ಜೂನ್ 27ರಿಂದ 29ರವರಗೆ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಫೋಟೋ ಟುಡೇ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ವಿಡಿಯೊ ಕ್ಯಾಮರ ಮತ್ತು ಕ್ಯಾಮರಗಳ ಕುರಿತು ಮಾಹಿತಿ ಮತ್ತು ಕ್ಯಾಮರ ಸಮಗ್ರ ಮಾಹಿತಿ ನೀಡಲಾಗುತ್ತದೆ. ಕ್ಯಾಮರಗಳ ಮಹತ್ವ ಮತ್ತು ಅದನ್ನ ಬಳಕೆ ಮಾಡುವ ಕುರಿತು ಕ್ಯಾಮರ ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ನೀಡಲಾಗುವುದು. 250ಕ್ಕೂ ಮಳಿಗೆಗಳು ಇರುತ್ತವೆ ಎಂದರು.
ಸಾರ್ವಜನಿಕರು ಮತ್ತು ವಿಡಿಯೊ ಮತ್ತು ಕ್ಯಾಮರ ಬಳಕೆದಾರರು ಮತ್ತು ವಿಡಿಯೊ, ಕ್ಯಾಮರದಲ್ಲಿ ಉದ್ಯಮದಲ್ಲಿ ಇರುವ ಮತ್ತು ವಿಡಿಯೊಗ್ರಾಫರ್, ಪೋಟೋಗ್ರಾಫರ್ ಗಳು ಇದರ ಸದುಪಯೋಗ ಪಡೆಯಬಹುದು. ಕ್ಯಾಮರದಲ್ಲಿ ದಿನದಿಂದ ಹೊಸ ತಂತ್ರಜ್ಞಾನ ಬರುತ್ತಿದೆ ಹಾಗೂ ಕ್ಯಾಮರದಲ್ಲಿ ಅದ್ಭುತ ಬದಲಾವಣೆ ಬರುತ್ತಿದೆ ಇದರ ಮಾಹಿತಿ ಪಡೆಯಬಹುದು ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕರು, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯ ಪ್ರಸಾದ್ ಉದ್ಘಾಟನೆ ಕಾರ್ಯಕ್ರಮ ನೆರವೇರಿಸುವರು ಮತ್ತು ಇದೇ ವೇಳೆ ಪತ್ರಿಕಾ ಛಾಯಗ್ರಾಹಕರು, ಛಾಯಗ್ರಾಹಕರು ಮತ್ತು ಮಹಿಳಾ ಛಾಯಗ್ರಾಹಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಕರ್ನಾಟಕ ಫೋಟೋ ಆಂಡ್ ವಿಡಿಯೊ ಅಸೋಸಿಯೇಷನ್ ಅಧ್ಯಕ್ಷ ಬೆಂಜಮಿನ್, ಕಾರ್ಯದರ್ಶಿ ಜಗದೀಶ್, ಕರ್ನಾಟಕ ಪತ್ರಿಕಾ ಛಾಯಗ್ರಾಹಕರ ಸಂಘದ ಅಧ್ಯಕ್ಷ ವಿಶ್ವೇಶ್ವರಪ್ಪ ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದರು.




