ಫೋಟೋ ಇಲ್ಲದ ಜಗತ್ತು ಊಹಿಸಿಕೊಳ್ಳಲು ಸಾಧ್ಯವಿಲ್ಲ: ಕೆ.ವಿ.ಪ್ರಭಾಕರ್

8 months ago

ವಿಶ್ವ ಛಾಯಾಗ್ರಾಹಕರ ದಿನಾಚರಣೆ

ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು ವತಿಯಿಂದ ಆಯೋಜನೆ

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪೋಟೋ ಜರ್ನರ್ಲಿಸ್ಟ್ ಅಸೋಸಿಯೇಷನ್ ಬೆಂಗಳೂರು ವತಿಯಿಂದ ವಿಶ್ವ ಛಾಯಗ್ರಾಹಕ ದಿನ ಆಚರಣೆ ಆಯೋಜಿಸಲಾಗಿತ್ತು.

ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆಯಿಷಾ ಖಾನಂ ಮತ್ತು ಸಂಪಾದಕ ಶಾಂತಕುಮಾರ್, ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ಶೈಲೇಂದ್ರ ಬೋಜಕ್, ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಸದಾಶಿವ ಶೆಣೈ, ಹಿರಿಯ ಪತ್ರಿಕಾ ಛಾಯಗ್ರಾಹಕ ಭಾಗ್ಯಪ್ರಕಾಶ್ ದೀಪ ಬೆಳಗಿಸಿ ವಿಶ್ವ ಛಾಯಗ್ರಾಹಕರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೆ.ವಿ.ಪ್ರಭಾಕರ್ ಮಾತನಾಡಿ, ಕ್ಯಾಮೆರಾ ಎದುರು ಎಲ್ಲರು ನಗುತ್ತಾರೆ ಮತ್ತು ಕ್ಯಾಮರಮ್ಯಾನ್ ಎಷ್ಟೆ ನೋವು ಇದ್ದರು ನಗಿ ಎಂದು ಎದುರುಗಡೆ ಇದ್ದವರಿಗೆ ಹೇಳುತ್ತಾರೆ. ಕೋಲಾರ ಜಿಲ್ಲೆಯ ಪತ್ರಕರ್ತನಾಗಿ ಸೇವೆ ಆರಂಭಿಸಿದೆ. ಫೋಟೋ ಇಲ್ಲದ ಜಗತ್ತು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪೋಟೋ ಇರುವುದರಿಂದ ಸಾಕ್ಷ್ಮಿಯಾಗಿ, ಅವಿಭಾಜ್ಯ ಅಂಗವಾಗಿ ಉಳಿದಿದೆ ಎಂದರು.

ಪೋಟೋ ಎಲ್ಲ ವಿಷಯಗಳನ್ನು ತಿಳಿಸುತ್ತದೆ. ಪೋಟೋಗ್ರಫಿ ಬಹಳ ಮುಖ್ಯ. ಕ್ಯಾಮರ ಹಿಡಿದವರೆಲ್ಲ ಅದ್ಬುತ ಛಾಯಗ್ರಾಹಕ ಆಗುವುದಿಲ್ಲ. ಹೃದಯಾಂತರಾಳದಿಂದ ಪೋಟೋ ತೆಗೆಯಬೇಕು. ಸೂಡಾನ್ ನಲ್ಲಿ ಕೆವಿಯನ್ ಕಾರ್ಟನ್ ರವರು ತೆಗೆದ ಮಗುವಿನ ಚಿತ್ರ ವಿಶ್ವಕ್ಕೆ ಹೊಸ ಸಂದೇಶ ರವಾನಿಸಿದೆ. ಪ್ರಶ್ನೆಗಳನ್ನು ಹುಟ್ಟಿಸಿತು. ಶಕ್ತಿ ಯೋಜನೆ ಫಲಾನುಭವಿ ಸಂಗವ್ವ ಬಸ್ ನಿಲ್ದಾಣದ ಮೆಟ್ಟಲುಗಳಿಗೆ ನಮಸ್ಕಾರ ಮಾಡಿರುವ ಚಿತ್ರ ವಿಶೇಷವಾಗಿತ್ತು. ರೀಲ್ ಕ್ಯಾಮರದಿಂದ ಡಿಜಿಟಲ್ ಕ್ಯಾಮೆರಾವರೆಗೆ ಕ್ಯಾಮೆರಾ ತಂತ್ರಜ್ಞಾನ ಬೆಳೆದಿದೆ ಎಂದರು.

ಶಾಂತಕುಮಾರ್ ಮಾತನಾಡಿ, ವಿಶ್ವ ಛಾಯಗ್ರಾಹಕ ದಿನದ ಶುಭಶಯಗಳು. ಪೋಟೋ ಜರ್ನಲಿಸ್ಟ್ ಗಳು ಹುರುಪು, ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಂಬಾ ಕಷ್ಟದ ಕೆಲಸ ಪೋಟೋ ಜರ್ನಲಿಸ್ಟ್ ಗಳದ್ದು. ಪೋಟೋ ಜರ್ನಲಿಸ್ಟ್ ಗಳ ಕ್ರೀಯಟಿವ್ ಆಗಿ ಇರಬೇಕು. ಭೋಪಾಲ್ ನಲ್ಲಿ ನಡೆದ ದುರಂತದ ಕುರಿತು  ಪೋಟೋಗಳು ಇಂದು ನೋಡಿದಾಗ ಆಗಿನ ಘಟನೆ ಕಣ್ಣುಮುಂದೆ ನಿಲ್ಲುತ್ತದೆ. ಮೊದಲು ಪತ್ರಕರ್ತ ನಂತರ ಪೋಟೋ ಜರ್ನಲಿಸ್ಟ್ ಪತ್ರಿಕೋದ್ಯಮ ಸಿದ್ಧಾಂತ ಮರೆಯಬಾರದು ಎಂದರು.

ಆಯಿಷಾ ಖಾನಂ ಮಾತನಾಡಿ, ವಿಷಯದ ಜೊತೆಯಲ್ಲಿ ಪೋಟೋ ಇದ್ದಾಗ ಅರ್ಥಪೂರ್ಣವಾಗಿ ಇರುತ್ತದೆ.  ಪೋಟೋಗ್ರಫಿ ಕುರಿತು ತಿಳಿದುಕೊಳ್ಳಿ, ಅರ್ಥಮಾಡಿಕೊಂಡು ಪೋಟೋ ತೆಗೆಯಿರಿ ಎಂದರು.

ಸದಾಶಿವಶೆಣೈ ಮಾತನಾಡಿ, ಪೋಟೋ ಗ್ರಾಫರ್ ಗಳು ಮೈಯೆಲ್ಲಾ ಕಣ್ಣಾಗಿ ಇಟ್ಟುಕೊಂಡಿರಬೇಕು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಡಿನ ಪ್ರತಿಷ್ಟಿತ ಪತ್ರಿಕೆಯಲ್ಲಿ ಬಸ್ ಮೇಲಿನ ಚಿತ್ರ  ಪ್ರಕಟನೆಯಾಗಿ ದೊಡ್ಡ ಸುದ್ದಿಯಾಗಿ ರಾಜ್ಯದಲ್ಲಿ ಪ್ರಚಾರವಾಗಿತ್ತು. ಫೋಟೋಗ್ರಾಫರ್ ಗಳು ಕಠಿಣ ಶ್ರಮ ಪಡಬೇಕು. ರಾಜಕಾರಣಿಗಳು, ನಟ, ನಟಿಯರ ಪೋಟೋ ತೆಗೆಯವುದು ಸುಲಭ. ಅದರೆ ಯುದ್ಧ ಸಂದರ್ಭದ ಪೋಟೋ ತೆಗೆಯುವುದು ಬಹಳ ಕಷ್ಟ ಎಂದರು.

ಮೋಹನ್ ಮಾತನಾಡಿ, ಪೋಟೋಗ್ರಾಫರ್ ಗಳು ಬಹಳ ಸಂಕಷ್ಟದಲ್ಲಿ ಪ್ರತಿದಿನ ಕೆಲಸ ಮಾಡುತ್ತಾರೆ. ವಸತಿ ಇಲಾಖೆ ವತಿಯಿಂದ ಪತ್ರಿಕಾ ಛಾಯಾಗ್ರಾಹಕರಿಗೆ ನಿವೇಶನ ನೀಡಬೇಕು ಮತ್ತು ಮಾಧ್ಯಮ ಅಕಾಡೆಮಿಯಲ್ಲಿ ಪತ್ರಿಕಾ ಛಾಯಗ್ರಾಹಕರಿಗೆ ಪ್ರಶಸ್ತಿ ನೀಡಬೇಕು ಎಂದರು.

ಸಂಘದ ಪದಾಧಿಕಾರಿಗಳಾದ ಅಕ್ರಮ್, ಸುಧಾಕರ್, ಪುಷ್ಕರ್, ರಾಬರ್ಟ್ ಮತ್ತು ಪತ್ರಿಕಾ ಛಾಯಗ್ರಾಹಕರು,  ಪತ್ರಿಕಾ ಛಾಯಗ್ರಾಹಕರು, ಸುರಾನ ಕಾಲೇಜು, ಮೌಂಟ್ ಕಾರ್ಮಲ್, ಜೈನ್ ಪತ್ರಿಕಾ ವಿಭಾಗ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

Leave a Reply