ಕರ್ನಾಟಕಕ್ಕೂ ಇಂದಿರಾಗಾಂಧಿ ಕುಟುಂಬಕ್ಕೆ ಅವಿನಾಭವ ಸಂಬಂಧ: ಡಿ.ಕೆ.ಶಿವಕುಮಾರ್

4 years ago

ಭಾರತದ ಇಂದಿರಾ ಚಿತ್ರ ಪ್ರದರ್ಶನ

ಬೆಂಗಳೂರು: ಕಾಂಗ್ರೆಸ್ ಭವನ ಆವರಣದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 104ನೇ ಜಯಂತಿ ಅಂಗವಾಗಿ ಇಂದಿರಾ ಜೀವನ ಚರಿತ್ರೆ ಫೋಟೋ ಗ್ಯಾಲರಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರದರ್ಶನ ಉದ್ಘಾಟನೆ ಮಾಡಿದರು. ಅಖಿಲ ಭಾರತ ಯುವ ಕಾಂಗ್ರೆಸ್ ಕಾರ್ಯದರ್ಶಿ ಸುರಭಿ ದ್ವಿವೇದಿ, ಎನ್.ಎಸ್.ಯು.ಐ. ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಕಾಂಗ್ರೆಸ್ ಯುವ ಮುಖಂಡರು ಪಾಲ್ಗೊಂಡಿದ್ದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ನಡೆದು ಬಂದ ಹಾದಿ ಮತ್ತು ಜೀವನ ಚರಿತ್ರೆ ತಿಳಿಯಲು ಚಿತ್ರ ಪ್ರದರ್ಶವನ್ನು ಒಂದು ವಾರದ ಕಾಲ ನಡೆಯುವುದು. ಸಾರ್ವಜನಿಕರು ಇಂದಿರಾ ಗಾಂಧಿಯವರ ಸಾಧನೆ, ಹೋರಾಟ ತಿಳಿಯಲು ಚಿತ್ರ ಪ್ರದರ್ಶನಕ್ಕೆ ಬರಬೇಕು. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಯುವ ಕಾಂಗ್ರೆಸ್ ಮಾಹಿತಿ ನೀಡುತ್ತಾರೆ ಎಂದರು.

ಇಂದಿರಾ ಗಾಂಧಿಯವರ ಕುಟುಂಬಕ್ಕೂ ಮತ್ತು ಕರ್ನಾಟಕ ರಾಜ್ಯಕ್ಕೂ ಅವಿನಾಭವ ಸಂಬಧವಿದೆ. ಇಂದಿರಾ ಗಾಂಧಿರವರಿಗೆ ರಾಜಕೀಯ ಮರುಹುಟ್ಟು ನೀಡಿದ್ದು ನಮ್ಮ ಕರ್ನಾಟಕ. ಸೋನಿಯ ಗಾಂಧಿಯವರು ಒಳ್ಳಾರಿ ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು ಎಂದರು.

Leave a Reply