ಧಾರವಾಡ: ನಿಗದಿತ ಅವಧಿಗಿಂತ ಮುಂಚಿತವಾಗಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯವನ್ನು ಗಣತಿದಾರರಾದ ಪಿ.ಎಫ್. ಗುಡೇನಕಟ್ಟಿ ಪೂರೈಸಿದ್ದಾರೆ. ಅವರಿಗೆ ವಾರ್ಡ್ ನಂ. 7 ರ 129 ಮನೆಗಳ ಗುರಿ ನೀಡಲಾಗಿತ್ತು. ಅದರಂತೆ ಮಹಾವೀರ ನಗರ, ರಾಮರಹೀಮ್ ಕಾಲನಿಯ ಕರವೀರ ಕಾಲನಿ, ಆಜಾದ ಕಾಲನಿ, ಸಾಯಿ ಲೇಔಟ್, ಚರಂತಿಮಠ ಗಾರ್ಡನ್ ಹತ್ತಿರದ ಬ್ಲಾಕ್ನಾಲ್ಲಿ ಒಟ್ಟು 134 ಮನೆಗಳ ಗಣತಿಯನ್ನು ಪೂರ್ಣಗೊಳಿಸಿ, ಶೇ.100 ರಷ್ಟು ಸಾಧನೆ ಮಾಡಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಅವರ ಈ ಸಾಧನೆಗೆ ಮಹಾನಗರಪಾಲಿಕೆ ಧಾರವಾಡದ ಅಮೃತಮಹೋತ್ಸವ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ತಹಶೀಲ್ದಾರ್ ಡಾ.ಡಿ.ಎಚ್. ಹೂಗಾರ ಹಾಗೂ ಮಹಾನಗರ ಪಾಲಿಕೆ ವಲಯ ಸಹಾಯಕ ಆಯುಕ್ತ ಶಂಕರ ಪಾಟೀಲ, ಬಿಇಓ ಅಶೋಕ ಸಿಂದಗಿ, ಸಮನ್ವಯಾಧಿಕಾರಿ ಮಂಜು ಅಡವೇರ್ ಹಾಗೂ ಮೇಲ್ವಿಚಾರಕ ಜಿ.ಬಿ. ಶೆಟ್ಟರ್, ಸುಮಿತಾ ಹಿರೇಮಠ, ಎಸ್.ಬಿ.ಅರಮನಿ, ಎಂ.ಆರ್. ಕಬ್ಬೇರ, ಮಹೇಶ ಬಾಳಗಿ, ಆಸಿಫ್ ಸವಣೂರ ಹಾಗೂ ವಿ.ಎಂ. ಪಾಟೀಲ, ಇರ್ಫಾನ್ ಕವಲಗೇರಿ ಹಾಗೂ ಇತರರು ಹಾಜರಿದ್ದರು.




