ಕೇಂದ್ರ ದೇಶಭಕ್ತಿಯನ್ನು ಭಾಷಣಕ್ಕೆ ಸೀಮಿತಗೊಳಿಸಬಾರದು: ರಾಮಲಿಂಗಾರೆಡ್ಡಿ

5 years ago

ಬೆಂಗಳೂರು: ಛತ್ತೀಸ್ ಗಢದಲ್ಲಿ 22 ವೀರ ಯೋಧರು ನಕ್ಸಲರ ದಾಳಿಗೆ ಹುತಾತ್ಮರಾದ ಘಟನೆ ಆಘಾತಕಾರಿ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ನಕ್ಸಲರ ದಾಳಿಗೆ ಬಲಿಯಾದ ಯೋಧರ ಕುರಿತು ಸಾಮಾಜಿಕ ಜಾಲತಾಣಗಲ್ಲಿ ಪ್ರತಿಕ್ರಿಯಿಸಿರುವ ಅವರು, ಸುಮಾರು 400 ನಕ್ಸಲರು ನಮ್ಮ ಯೋಧರನ್ನು ಸುತ್ತುವರಿದು ದಾಳಿ ಮಾಡುತ್ತಾರೆ ಎಂದಾದರೆ, ಘಟನೆಯ ತೀವ್ರತೆಯನ್ನು ಸರ್ಕಾರ ಮತ್ತು  ಗೃಹ ಇಲಾಖೆ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಗುಪ್ತಚರ ದಳದ ವೈಫಲ್ಯ ಇದರಿಂದ ಬಯಲಾಗಿದ್ದು, ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾಗಿದ್ದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ದೇಶಭಕ್ತಿಯನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಆಂತರಿಕವಾಗಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುವ ನಕ್ಸಲರನ್ನು ಮಟ್ಟ ಹಾಕುವ ಕೆಲಸ ಮಾಡಬೇಕು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ವೀರ ಯೋಧರಿಗೆ ನ್ಯಾಯ ದೊರಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

Leave a Reply