ಶಂಕರಮಠ ವಾರ್ಡ್ ನಲ್ಲಿ ಕೊರೋನ ಲಸಿಕಾ ಕೇಂದ್ರ

5 years ago

ಬೆಂಗಳೂರು: ಶಂಕರಮಠ ವಾರ್ಡ್-75ರಲ್ಲಿ ಬಿ.ಬಿ.ಎಂ.ಪಿ. ಯೋಗ ಕೇಂದ್ರ ಕಿರ್ಲೋಸ್ಕರ್ ಕಾಲೋನಿಯಲ್ಲಿ 45ವರ್ಷ ಮೇಲ್ಪಟ್ಟ ಪುರುಷ, ಮಹಿಳೆಯರು ಮತ್ತು ಹಿರಿಯ ನಾಗರಿಕರ ಕೊವಿಡ್-19ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾಜಿ ಆಡಳಿತ ಪಕ್ಷದ ನಾಯಕ ಎಮ್.ಶಿವರಾಜು, ಶಂಕರಮಠ ವಾರ್ಡ್ ನೋಡಲ್ ಅಧಿಕಾರಿ ಸುರೇಶ್, ಸಹಾಯಕ ಇಂಜಿನಿಯರ್ ಪುಟ್ಟಸ್ವಾಮಿ ಮತ್ತು ವೈದ್ಯರು ,ಸಿಬ್ಬಂದಿ ಪಾಲ್ಗೊಂಡಿದ್ದರು. ಇದೇ ವೇಳೆ ಎಮ್.ಶಿವರಾಜು ಕೊವಿಡ್-19 ಲಸಿಕೆ ಪಡೆಯುವ ಮೂಲಕ ಚಾಲನೆ ನೀಡಿದರು.

ನಂತರ ಪ್ರತಿಕ್ರಿಯಿಸಿದ ಶಿವರಾಜು, ಕಳೆದ ಒಂದು ವರ್ಷದಿಂದ ಮಹಾಮಾರಿ ಕೊರೋನ ವೈರಸ್ ನಿಂದ ಜನ ಸಂಕಷ್ಟದಲ್ಲಿ ಇದ್ದರು. ಭಾರತೀಯ ವಿಜ್ಞಾನಿಗಳ ಸತತ ಪರಿಶ್ರಮದಿಂದ ಕೊವಿಡ್-19ವೈರಸ್ ವಿರುದ್ದ ಉತ್ತಮ ಗುಣಮಟ್ಟದ ಲಸಿಕೆ ಕಂಡು ಹಿಡಿದ್ದಿದಾರೆ. ನಮ್ಮ ಸ್ವದೇಶಿ ಲಸಿಕೆಯನ್ನು ಅಂದಾಜು 80 ದೇಶಗಳಲ್ಲಿ ಉಪಯೋಗಿಸುತ್ತಿದ್ದಾರೆ. ಆತಂಕ ಬಿಡಿ ಲಸಿಕೆ ಹಾಕಿಸಿಕೊಳ್ಳಿ. ಕೊರೋನ ವೈರಸ್ ಮುಕ್ತ ಹೋರಾಟದಲ್ಲಿ ಭಾಗಿಯಾಗಿ ಎಂದು ಕರೆ ನೀಡಿದರು.

ಸಾರ್ವಜನಿಕ ಸಂಪರ್ಕಧಿಕಾರಿ ಮತ್ತು ನೋಡಲ್ ಅಧಿಕಾರಿ ಸುರೇಶ್ ಮಾತನಾಡಿ, ಆಯುಕ್ತರು ಮತ್ತು ಆಡಳಿತಾಧಿಕಾರಿಗಳ ನಿರ್ದೇಶನ ಮೇರೆಗೆ ಶಂಕರಮಠ ವಾರ್ಡ್ನನಲ್ಲಿ ಕೊವಿಡ್-19 ಲಸಿಕಾ ಕೇಂದ್ರ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

Leave a Reply