ಕಾರವಾರ: ಪ್ರವಾಸೋದ್ಯಮ ಇಲಾಖೆ ವತಿಯಿಂದ ಫೆ.26 ರಿಂದ 28 ರವರೆಗೆ ಬೆಂಗಳೂರಿನಲ್ಲಿ “2nd Edition of the Karnataka International Travel Expo (KITE) 2025”ನ್ನು ಆಯೋಜಿಸಲಾಗಿದ್ದು, ಸದರಿ ಪ್ರತಿಷ್ಠಿತ ಕಾರ್ಯಕ್ರಮವು ರಾಜ್ಯದ ರೋಮಾಂಚಕ ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರದರ್ಶಿಸಲು, ವ್ಯಾಪಾರ ಅವಕಾಶಗಳನ್ನು ಆಕರ್ಷಿಸಲು ಮತ್ತು ಪ್ರಮುಖ ಜಾಗತಿಕ ಪ್ರವಾಸ ತಾಣವಾಗಿ ಕರ್ನಾಟಕದ ಸ್ಥಾನವನ್ನು ಬಲಪಡಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು Hosted Buyers, ಭಾರತ ಹಾಗೂ 30ಕ್ಕೂ ಹೆಚ್ಚು ದೇಶಗಳಿಂದ 50 ಮಾಧ್ಯಮಗಳು ಭಾಗವಹಿಸಲಿದ್ದು, ಇಂತಹ ಒಂದು ವಿಶೇಷವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ಸ್ಥಳಗಳು, ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳು, ಸಾಂಸ್ಕ್ರತಿಕ ಪರಂಪರೆ, ಅನನ್ಯ ಪರಂಪರೆಗಳನ್ನು ಬಿಂಬಿಸುವಂತಹ ಪ್ರವಾಸಿ ಯೋಜನೆಗಳನ್ನು ಪ್ರಚುರಪಡಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಹಾಗೂ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶ್ವಸಿಗೊಳಿಸಲು ಜಿಲ್ಲೆಯ ಎಲ್ಲಾ ಆಸಕ್ತ ಪ್ರವಾಸೋದ್ಯಮ ಪಾಲುದಾರರು, ಸ್ಥಳೀಯ ರೇಸಾರ್ಟ್ ಮಾಲೀಕರು, ಟ್ರಾವೆಲ್ ಆಪರೇಟರ್ಗಳು, ಹೋಟೆಲ್ ಮಾಲೀಕರು ಹಾಗೂ ಇತರ ಉದ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಕಾರ್ಯಕ್ರಮದ ಹೆಚ್ಚುವರಿ ಮಾಹಿತಿಗಾಗಿ https://www.karnatakatravelexpo.org/ ಅಥವಾ For Stand Booking ದೂ. ಸಂ. 8722277132 ಅಥವಾ ಪೊವಪ್ಪ ದೂ. ಸಂ. 9845215387 ಅಥವಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ ಹೆಚ್.ವಿ. ದೂ. ಸಂ. 8553629978 ರವರನ್ನು ಸಂಪರ್ಕಿಸಬಹುದು.




