ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಮಾರುಕಟ್ಟೆ ಕಾರ್ಯಾಗಾರ

2 years ago

#Ornamental #Fish #Production #Marketing #Workshop

ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕೇಂದ್ರ ಸರ್ಕಾರದ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್.ಎಫ್.ಡಿ.ಬಿ) ಹಾಗೂ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ಒಳನಾಡು) ಇವರ ಸಹಯೋಗದಲ್ಲಿ “ಸಿಹಿ ನೀರಿನ ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಮಾರುಕಟ್ಟೆ” ಎಂಬ ವಿಷಯದ ಕುರಿತು ಡಿಸೆಂಬರ್ 14 ರಿಂದ 16 ರವರೆಗೆ ಮೂರು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕಛೇರಿಯ ಪ್ರೊ. ಯು.ಆರ್.ರಾವ್ ವಿಜ್ಞಾನ ಭವನ, ಮೇ.ಸಂದೀಪ್ ಉನ್ನಿಕೃಷ್ಣನ್ ರಸ್ತೆ, ತೋಟಾಗಾರಿಕಾ ವಿಜ್ಞಾನಗಳ ಕಾಲೇಜು ಆವರಣ, ಜಿಕೆವಿಕೆ, ದೊಡ್ಡ ಬೆಟ್ಟಹಳ್ಳಿ ಲೇಯೊಟ್, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು-560097 ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದಲ್ಲಿ ಮೀನು ಕೃಷಿಕರಿಗೆ, ಆಸಕ್ತ ರೈತರಿಗೆ, ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ಮೀನುಗಳ ಉತ್ಪಾದನೆ ಮತ್ತು ಅವುಗಳ ಮಾರುಕಟ್ಟೆ ಬಗ್ಗೆ ರೈತರಿಗೆ ತರಬೇತಿ ಮತ್ತು ಪ್ರಾಥಮಿಕ ಮಾಹಿತಿ ನೀಡಲಾಗುವುದು.

ಕಾರ್ಯಾಗಾರದಲ್ಲಿ ನೋಂದಾಯಿಸಿಕೊಳ್ಳಲು ಇಚ್ಛಿಸುವವರು ಅಕಾಡೆಮಿಯ ವೆಬ್ ಸೈಟ್ http://www.kstacadmemy.in ಹಾಗೂ ವೈಜ್ಞಾನಿಕಾಧಿಕಾರಿ ವಿ.ಕೆ ಶ್ರೀನಿವಾಸು ಮೊಬೈಲ್ ಸಂಖ್ಯೆ: 9620767819 ಇವರನ್ನು ಸಂಪರ್ಕಿಸಬಹುದು.

Leave a Reply