ಎಲ್ಲ ಹೈಸ್ಕೂಲ್ ಗಳಲ್ಲಿ ಹತ್ತನೆ ತರಗತಿಗೆ ನಿರಂತರ ಗೈರು
ಅನಿಯಮಿತ ಹಾಜರಿ ಇರುವ ಮಕ್ಕಳ ಪೋಷಕರ ವಿಶೇಷ ಸಭೆ: ಡಿಸಿ ಆದೇಶ
ಧಾರವಾಡ: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ತರಗತಿಗಳಿಗೆ ಕೆಲವು ವಿದ್ಯಾರ್ಥಿಗಳು ನಿರಂತರ ಗೈರು ಉಳಿಯುತ್ತಿದ್ದಾರೆ ಮತ್ತು ಕೆಲವರು ಅನಿಯಮಿತವಾಗಿ ಹಾಜರು ಆಗುತ್ತಿದ್ದಾರೆ. ಕಳೆದ ಆಗಸ್ಟ್ 28 ರಂದು ಜಿಲ್ಲೆಯಾದ್ಯಂತ ಎಸ್.ಎಸ್.ಎಲ್.ಸಿ ಮಕ್ಕಳ ಓದುವ ಹಾಗೂ ಬರೆಯುವ ಕಲಿಕಾ ಗುಣಮಟ್ಟ ಗುರುತಿಸಲು ಏಕಕಾಲಕ್ಕೆ ಪಬ್ಲಿಕ್ ಪರೀಕ್ಷೆ ಮಾದರಿಯಲ್ಲಿ ಜರುಗಿಸಿದ ಬೆಸ್ಲೈಗನ್ ಪರೀಕ್ಷೆಗೆ 2171 ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದ ಗೈರು ಹಾಜರಾಗಿದ್ದರು. ಇಂತಹ ಎಲ್ಲ ಮಕ್ಕಳ ಪೋಷಕರ ಹಾಗೂ ಪಾಲಕರ ವಿಶೇಷ ಸಭೆಯನ್ನು ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಬರುವ ಸೆ. 28 ರಂದು ಜರುಗಿಸಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ನಿರ್ದೇಶನ ನೀಡಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಜಿಲ್ಲಾಡಳಿತದ ನೇತೃತ್ವದಲ್ಲಿ ತಜ್ಞರ ಸಹಕಾರದೊಂದಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಿಷನ್ ವಿದ್ಯಾಕಾಶಿ ಯೋಜನೆ ಜಾರಿಗೊಳಿಸಲಾಗಿದೆ ಎಂದಿದ್ದಾರೆ.
ಜಿಲ್ಲೆಯ ಅನೇಕ ಪ್ರೌಢಶಾಲೆಗಳಲ್ಲಿ 10 ನೇ ತರಗತಿಯ ಕೆಲವು ಮಕ್ಕಳು ನಿರಂತರವಾಗಿ ಗೈರು ಆಗುತ್ತಿದ್ದಾರೆ ಮತ್ತು ಶಿಕ್ಷಕರು ಮನೆಗೆ ಭೇಟಿ ನೀಡಿದಾಗ ಮಾತ್ರ ಕೆಲವು ಮಕ್ಕಳು ಎರಡು ದಿನ ಶಾಲೆಗೆ ಬಂದು, ಮತ್ತೇ ಗೈರಾಗುತ್ತಾರೆ. ಈ ಕುರಿತು ಸಕಾರಣಗಳನ್ನು ಪರಿಶೀಲಿಸಿ, ವರದಿ ಸಲ್ಲಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರಿಗೆ ಈಗಾಗಲೇ ಸೂಚಿಸಲಾಗಿದೆ ಎಂದಿದ್ದಾರೆ.
ನಿರಂತರ ಗೈರು ಹಾಜರಿಗೆ ಸಕಾರಣ ತಿಳಿಯಲು ಸೆ. 28 ರಂದು ಎಲ್ಲ ಶಾಲಾ ಮುಖ್ಯಸ್ಥರು ಕಡ್ಡಾಯವಾಗಿ ಇಂತಹ ಮಕ್ಕಳ ಎಲ್ಲ ಪಾಲಕರ ಸಭೆ ಜರುಗಿಸಿ, ಇಲಾಖೆಯಿಂದ ನೀಡಿರುವ ನಮೂನೆಯಲ್ಲಿ ವಿವರವಾದ ವರದಿ ಸಲ್ಲಿಸಬೇಕೆಂದು ಎಸ್.ಎಸ್. ಕೆಳದಿಮಠ ಅವರು ಈಗಾಗಲೇ ಸುತ್ತೋಲೆಯನ್ನು ಹೊರಡಿಸಿ, ಎಲ್ಲ ಪ್ರೌಢಶಾಲೆಗಳಿಗೆವ ತಿಳಿಸಿದ್ದಾರೆ. ಈ ಕುರಿತು ಎಲ್ಲ ಮುಖ್ಯ ಶಿಕ್ಷಕರು ಕ್ರಮವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಕ್ಕಳ ಗೈರು ಹಾಜರಿ ಕುರಿತು ಸಕಾರಣ ತಿಳಿದುಕೊಂಡು ಅವರನ್ನು ಮುಖ್ಯವಾಹಿನಿಗೆ ತರುವಂತೆ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.
ಪಾಲಕರ ವಿಶೇಷ ಸಭೆ ಕಡ್ಡಾಯ: ಸೆಪ್ಟೆಂಬರ್ 28, 2024 ರಂದು ಗೈರು ಮಕ್ಕಳ ಪೋಷಕರ ವಿಶೇಷ ಸಭೆಯನ್ನು ಆಯಾ ಶಾಲಾ ಹಂತದಲ್ಲಿ ಆಯೋಜಿಸಲು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಪ್ಪದೇ ಕ್ರಮವಹಿಸಬೇಕು ಎಂದಿದ್ದಾರೆ.
ಮುಖ್ಯ ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಓ, ವಾರ್ಡಿನ ಕಾರ್ಪೋರೇಟರ ಅಥವಾ ಪಂಚಾಯತ ಸದಸ್ಯರನ್ನು ಸಭೆಗೆ ಆಹ್ವಾನಿಸಬೇಕು. ಸಭೆ ಜರುಗಿಸಿ ಗೈರು ಮಕ್ಕಳ ಪೋಷಕರಿಗೆ ಮನವೊಲಿಸಿ ಮಕ್ಕಳು ಶಾಲೆಗೆ ನಿತ್ಯ ಹಾಜರಾಗುವಂತೆ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಸಭೆ ವರದಿ ಅ.03 ರೊಳಗೆ ಸಲ್ಲಿಸಿ: ಗೈರು ಮಕ್ಕಳ ಬಗ್ಗೆ ಹಾಗೂ ಅವರು ನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿರುವ ಕುರಿತು ನಿಗದಿತ ನಮೂನೆಯಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಮುಖ್ಯ ಶಿಕ್ಷಕರು ದೃಢೀಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ತಾಲೂಕುವಾರು ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ದೃಢೀಕರಿಸಿ ಉಪನಿರ್ದೇಶಕರ ಎಸ್.ಎಸ್. ಕೆಳದಿಮಠ ಅವರಿಗೆ ಸಲ್ಲಿಸಬೇಕು. ಡಿಡಿಪಿಐ ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ಜಿಲ್ಲೆಯ ಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಗೈರು ಮಕ್ಕಳ ಪೋಷಕರ ಸಭೆಯನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಜರುಗಿಸಿ, ವರದಿಯನ್ನು ಅಕ್ಟೋಬರ್ 3, 2024 ರೊಳಗಾಗಿ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.
ಶಾಲಾ ಹಾಜರಾತಿಗೆ ವಿಶೇಷ ಅಭಿಯಾನ: ಅಕ್ಟೊಬರ 21 ರಿಂದ 23 ರವರೆಗೆ ಶಾಲೆಯಿಂದ ಹೊರಗುಳಿದ ಅಥವಾ ಗೈರು ಮಕ್ಕಳನ್ನು ಮುಖ್ಯವಾಹಿನಿಗೆ ತರಲು ವಿಶೇಷ ಅಭಿಯಾನ ಆಯೋಜಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.




