ಧಾರವಾಡ: ಧೈರ್ಯ, ದೇಶಭಕ್ತಿ ಮತ್ತು ಸ್ತ್ರೀಶಕ್ತಿಯ ಪ್ರತೀಕವಾದ ವೀರವನಿತೆ ಒನಕೆ ಓಬವ್ವ ಅವರ ತ್ಯಾಗ ಮತ್ತು ಸಾಹಸವನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾದ ವೀರವನಿತೆ ಒನಕೆ ಓಬವ್ವ ಜಯಂತಿಯ ಅಂಗವಾಗಿ ಒನಕೆ ಓಬವ್ವಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಒನಕೆ ಓಬವ್ವ ಅವರು ತಮ್ಮ ಬುದ್ದಿಶಕ್ತಿ ಮತ್ತು ಧೈರ್ಯದಿಂದ ತಮ್ಮ ಕಾಲದ ಆಕ್ರಮಣಕಾರರಿಗೆ ತಕ್ಕ ಪ್ರತಿರೋಧ ನೀಡಿದರು. ಅವರಂತಹ ಮಹಿಳೆಯರನ್ನು ನಾವು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಶಾಲೆ-ಕಾಲೇಜುಗಳಲ್ಲಿ ಅವರ ಜೀವನದ ಕುರಿತು ವಿಶೇಷ ಚರ್ಚೆಗಳನ್ನು ನಡೆಸಿದರೆ ಮಕ್ಕಳಿಗೂ ಅವರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಒನಕೆ ಓಬವ್ವ ಅವರ ಸಾಹಸ ಕೇವಲ ಇತಿಹಾಸದ ಒಂದು ಘಟನೆ ಅಲ್ಲ, ಅದು ಮಹಿಳಾ ಶಕ್ತಿಯ ಶಾಶ್ವತ ಚಿಹ್ನೆ. ಒನಕೆ ಓಬವ್ವ ಅವರು ನಮಗೆ ತೋರಿಸಿದ ಮಾರ್ಗ ದಿವ್ಯದೃಷ್ಟಿಯದ್ದಾಗಿದೆ. ನಾವೆಲ್ಲರೂ ಅವರ ಧೈರ್ಯ, ನಿಷ್ಠೆ ಮತ್ತು ದೇಶಭಕ್ತಿಯ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದರು.
ಪ್ರಗತಿಪರ ಚಿಂತಕ ಹಾಗೂ ಸಾಹಿತಿ ಡಾ. ಸದಾಶಿವ ಮರ್ಜಿ ವಿಶೇಷ ಉಪನ್ಯಾಸವನ್ನು ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಸುಶೀಲಮ್ಮ ಚಲವಾದಿ ಅವರು ಕಾರ್ಯಕ್ರಮ ಉದ್ದೇಶಿಸಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡರ್, ಸಮಾಜದ ಮುಖಂಡರುಗಳಾದ ಆನಂದ ಮುಶನ್ನವರ, ಮೇಘರಾಜ ಗುಡಿಮನಿ, ಯಲ್ಲಪ್ಪ ಮಂಟೂರ, ದೇವಾನಂದ ರತ್ನಾಕರ, ಶಿವಪುತ್ರಪ್ಪ ಚಿಕ್ಕಪ್ಪ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಆರತಿ ದೇವಶಿಖಾಮಣಿ, ಸಮಾಜದ ಮುಖಂಡರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.



