ಧಾರವಾಡ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಧಾರವಾಡ ವಲಯದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಿದ ವಸತಿ ನಿವೇಶನಗಳಿಗೆ ಈಗಾಗಲೇ ಹಣ ಸಂದಾಯ ಮಾಡಿದ ಕೈಗಾರಿಕೋದ್ಯಮಿಗಳಿಗೆ, ಅರ್ಜಿದಾರರಿಗೆ ಜನೆವರಿ 21, 2026 ರಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಪೋಲಿಸ್ ಠಾಣೆ ಹತ್ತಿರದ ಡಾ.ಬಿ.ಎಸ್. ಕರ್ಕಿ ಕನ್ನಡ ಸಭಾ ಭವನದಲ್ಲಿ ಚೀಟಿ ಎತ್ತುವ (Lottery System) ಮುಖಾಂತರ ನಿವೇಶನ ಸಂಖ್ಯೆಯನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಜನವರಿ 21, 2026 ರಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಪೋಲಿಸ್ ಠಾಣೆ ಹತ್ತಿರದ ಡಾ. ಡಿ.ಎಸ್. ಕರ್ಕಿ ಕನ್ನಡ ಸಭಾ ಭವನದಲ್ಲಿ ಹಣ ಸಂದಾಯ ಮಾಡಿದ ಕೈಗಾರಿಕೋದ್ಯಮಿಗಳು, ಅರ್ಜಿದಾರರರು ಹಾಜರಿರಬೇಕು. ತಮ್ಮ ಅನುಪಸ್ಥಿತಿಯಲ್ಲಿ ಲಿಖಿತವಾಗಿ ತಮ್ಮಿಂದ ಪ್ರತಿನಿಧಿಯನ್ನು ನಿಯೋಜಿಸಿ ನಿವೇಶನದ ಸಂಖ್ಯೆಯನ್ನು ಅಂತಿಮಗೊಳಿಸಿಕೊಳ್ಳಲು ತಿಳಿಸಿದೆ. ಇಲ್ಲವಾದಲ್ಲಿ ಮಂಡಳಿಯಿಂದ ನಿವೇಶನವನ್ನು ಅಂತಿಮಗೊಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಲಕ್ಕಮ್ಮನಹಳ್ಳಿ ಕೈ.ಪ್ರ. ಧಾರವಾಡ ಕಚೇರಿಗೆ ಸಂಪರ್ಕಿಸಬಹುದು.




