ಧಾರವಾಡ: ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜನೆವರಿ 12, 2025 ರಿಂದ ಜನೆವರಿ 18, 2026 ರವರೆಗೆ ಬೆಳಿಗ್ಗೆ 6:30 ಗಂಟೆಯಿಂದ 9 ಗಂಟೆಯವರೆಗೆ ಧಾರವಾಡ ಪೊಲೀಸ್ ಕವಾಯತು ಮೈದಾನ ಡಿ.ಎ.ಆರ್ ಘಟಕದಲ್ಲಿ ನಾಗರಿಕ ಬಂದೂಕು ತರಬೇತಿಯನ್ನು ಆಯೋಜಿಸಲಾಗಿದೆ.
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
- ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ
- ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕಗಳ ಪಟ್ಟಿ
- ಕನ್ನಡ ಪರ ನೀತಿ ನಿರೂಪಣೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧತೆ
ನಾಗರಿಕ ಬಂದೂಕು ತರಬೇತಿಯನ್ನು ಪಡೆಯಲು ಇಚ್ಛಿಸುವ, ಧಾರವಾಡ ಜಿಲ್ಲಾ ವ್ಯಾಪ್ತಿಯ ನಾಗರಿಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳನ್ನು ಅಥವಾ ಜಿಲ್ಲಾ ಆಯುಧಗಾರರು. ಡಿ.ಎ.ಆರ್. ಧಾರವಾಡ (ವೈ.ಎಂ. ಕಡೇಮನಿ, ಮೊ.ಸಂ: 872252206) ಅವರನ್ನು ಸಂಪರ್ಕಿಸಬಹುದು.
ನಿಗದಿತ ನಮೂನೆಯಲ್ಲಿ ವಿವರಗಳನ್ನು ತುಂಬಿ, ಇತ್ತೀಚಿನ 03 ಪಾಸ್ ಪೋರ್ಟ ಸೈಜ್ ಪೊಟೋ, ಆಧಾರ ಕಾರ್ಡ ಪ್ರತಿಯೊಂದಿಗೆ ಜನೆವರಿ 09, 2026 ರೊಳಗೆ ಪೊಲೀಸ್ ಠಾಣೆಗೆ ಸಲ್ಲಿಸುವುದು ಹಾಗೂ ನಾಗರಿಕ ಬಂದೂಕು ತರಬೇತಿಗೆ ತಗಲುವ ವೆಚ್ಚವನ್ನು ಅರ್ಜಿದಾರರಿಂದ ಡಿ.ಎ.ಆರ್. ಘಟಕದಲ್ಲಿ ನಗದು ರೂಪದಲ್ಲಿ ಪಡೆದುಕೊಂಡು ಒಟ್ಟು 07 ದಿನಗಳ ತರಬೇತಿಯನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ನಾಗರಿಕ ಬಂದೂಕು ತರಬೇತಿಯ ಷರತ್ತುಗಳಿಗಾಗಿ ತಮ್ಮ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳನ್ನು ಅಥವಾ ಡಿ.ಎ.ಆರ್. ಕೇಂದ್ರ ಕಛೇರಿಯನ್ನು ಸಂಪರ್ಕಿಸಬೇಕು.




