ಸರ್ಕಾರದ ಯೋಜನೆಯೊಂದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರುತ್ತಿದೆ ಎಂದಾದರೆ, ಅದು ಅಭಿವೃದ್ಧಿ ಎಂಬ ಪದಕ್ಕೆ ನೈಜ ಅರ್ಥ ಕೊಡುತ್ತದೆ. ಜನ ಕೇಂದ್ರಿತ ಅಭಿವೃದ್ಧಿಯಿಂದ ಮಾತ್ರ ಸಮೃದ್ಧ ಸಮಾಜ ಕಟ್ಟಲು ಸಾಧ್ಯ. ನರೇಗಾ ಯೋಜನೆ ಜನ ಕೇಂದ್ರಿತ ಅಭಿವೃದ್ಧಿಯಲ್ಲಿ ಕ್ರಾಂತಿ ಉಂಟುಮಾಡುತ್ತಿದೆ.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ಲಕ್ಕಮನಹಳ್ಳಿ ಗ್ರಾಮ ಪಂಚಾಯಿತಿಯ ಸಿರಬಾಡಿಗೆ ಗ್ರಾಮದ ರೈತ ರುದ್ರಪ್ಪರವರು ನರೇಗಾ ಯೋಜನೆಯ ಸಹಾಯ ಪಡೆದು ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. 2,400 ಸಸಿಗಳನ್ನು ನೆಟ್ಟಿರುವ ಇವರು ಇದುವರೆಗೂ ಮೂರು ಬಾರಿ ಕಟಾವು ಮಾಡಿ, ಸುಮಾರು 2 ಲಕ್ಷ ಆದಾಯ ಗಳಿಸಿದ್ದೇನೆಂದು ಸಂತಸದಿಂದ ಹೇಳಿಕೊಳ್ಳುತ್ತಾರೆ.
ಸಮುದಾಯ ಯೋಜನೆಗಳಲ್ಲದೆ ಕೃಷಿ ಕ್ಷೇತ್ರದಲ್ಲಿನ ವೈಯುಕ್ತಿಕ ನರೇಗಾ ಕಾಮಗಾರಿಗಳು ಗ್ರಾಮೀಣ ಜನರ ಪರಿಸ್ಥಿತಿಯನ್ನು ಉನ್ನತಿಯತ್ತ ಕೊಂಡೊಯ್ಯುತ್ತಿದೆ. ರೈತರಲ್ಲಿ ಹೊಸ ಉತ್ಸಾಹ ನೀಡುತ್ತಿದೆ.
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ



