ನಿಟ್ಟೆ ಲೆಮಿನಾ ಫೌಂಡ್ರಿ ಸಂಸ್ಥೆ ಕಾರ್ಮಿಕ, CITU ಸದಸ್ಯ ಉಮೇಶ್ ಪೂಜಾರಿ ನಿಧನ

3 years ago

#Nitte #Lemina #Foundry #Institute #worker #CITU #member #UmeshPujari #passesaway

ಮಂಗಳೂರು: ನಿಟ್ಟೆ ಲೆಮಿನಾ ಫೌಂಡ್ರಿ ಸಂಸ್ಥೆಯ ಕಾರ್ಮಿಕ, CITU ಸದಸ್ಯ ಉಮೇಶ್ ಪೂಜಾರಿ 17-07-2023ರಂದು ರಾತ್ರಿ ಪಾಳಯದಲ್ಲಿ ಕಂಪೆನಿಯಲ್ಲಿ ದುಡಿಯುತ್ತಿದ್ದಾಗ, ಅವಘಡ ಸಂಭವಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೊಡಿಸಲಾಯಿತು ಎಂದುಶ್ರದ್ಧಾಂಜಲಿ ಸಭೆಯಲ್ಲಿ ಅಭಿಪ್ರಾಯಪಟ್ಟರು.

ಬಳಿಕ ಮನೆಗೆ ತೆರಳಿದ ಉಮೇಶ್ ಮಂಗಳವಾರ ದಿನವಿಡೀ ಮನೆಯಲ್ಲಿ ವಿಶ್ರಾಂತಿ ಪಡೆದು ಬುಧವಾರ ಮತ್ತೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗುತ್ತಾರೆ. ಕಾಲಿಗೆ ಸಂಪೂರ್ಣವಾಗಿ ಬ್ಯಾಂಡೇಜ್ ಹಾಕಿದ್ದರಿಂದ ಟಾಯ್ಲೆಟ್ ಹೋಗಲು ಕಷ್ಟ ಅಂತ ತಿಳಿದು ಹತ್ತಿರದ ತೋಟಕ್ಕೆ ಹೋಗುತ್ತಾರೆ. ಅಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಕುಸಿದು ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಸಭೆಯಲ್ಲಿ ಹೇಳಿದರು.

ಹೀಗೆ ಅಕಾಲಿಕ ಮರಣವನ್ನಪ್ಪಿದ ಉಮೇಶ್ ಪೂಜಾರಿಯವರು ಕಂಪೆನಿಯಲ್ಲಿ ಅತ್ಯಂತ ನಿಷ್ಟಾವಂತ ಕಾರ್ಮಿಕನಾಗಿದ್ದು, ಎಲ್ಲರ ಪ್ರೀತಿಪಾತ್ರರಾಗಿದ್ದರು. ಇತ್ತೀಚಿಗಷ್ಟೇ ಮದುವೆಯಾಗಿದ್ದ ಉಮೇಶ್ ಮನೆಯಲ್ಲೂ ಆಧಾರಸ್ತಂಭವಾಗಿದ್ದರು. ಹಾಗೂ ಅವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದರು. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಉಮೇಶ್ ಎಲ್ಲರೊಂದಿಗೆ ಬೆರೆತು ಬಾಳುವ ಗುಣವನ್ನು ಸಂಪಾದಿಸಿದ್ದರು. ಅವರ ಅಕಾಲಿಕ ಮರಣವು ಕುಟುಂಬಕ್ಕೆ, ಕಾರ್ಮಿಕರಿಗೆ, ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ ಎಂದು ಇಂದು ನಿಟ್ಟೆ ಲೆಮಿನಾ ಸಂಸ್ಥೆಯ ಹೊರಾಂಗಣದಲ್ಲಿ  ಜರುಗಿದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಸಂಸ್ಥೆಯ ಮುಖ್ಯಸ್ಥರು,ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕರು, ಕಾರ್ಮಿಕ ಸಂಘದ ಮುಖಂಡರು ಉಪಸ್ಥಿತರಿದ್ದರು.

Leave a Reply