ಹೊಸವರ್ಷಾಚರಣೆ ವೇಳೆ ಒಡಕು: ಕೊಲೆಯಾದ ಯುವಕ

3 years ago

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಪಾರ್ಟಿ ಮಾಡಿ ಪಾನಮತ್ತ ಸ್ನೇಹಿತರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಹನುಮಂತನಗರದ ಶ್ರೀನಿವಾಸನಗರ ಬಸ್ ನಿಲ್ದಾಣದ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಬನಶಂಕರಿಯ ವಿಜಯ(21)ಕೊಲೆಯಾದವರು, ವಿಜಯ್ ಹಾಗೂ ಆತನ ಗೆಳೆಯರು ಹೊಸ ವರ್ಷಾಚರಣೆ ಮಾಡಿ ಮದ್ಯಪಾನ ಮಾಡಿದ್ದಾರೆ. ಕಂಠಮಟ್ಟ ಕುಡಿದು ಮನೆಗೆ ತೆರಳುವಾಗ ವಿಜಯ್ ಹಾಗೂ ಆತನ ಗೆಳೆಯರ ನಡುವೆ ಗಲಾಟೆ ಆರಂಭವಾಗಿದೆ. ಆಟೋದಲ್ಲಿ ತೆರಳುತ್ತಿದ್ದಾಗ ಈ ಗಲಾಟೆ ಅತಿರೇಕಕ್ಕೆ ಹೋಗಿದ್ದು, ವಿಜಯ್ ಎದೆಗೆ ಚಾಕುವಿನಿಂದ ಇರಿದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.

ಬಳಿಕ ಶ್ರೀನಿವಾಸನಗರ ಬಸ್ ನಿಲ್ದಾಣದ ಬಳಿ ಆತನನ್ನು ಆಟೋದಿಂದ ಹೊರತಳ್ಳಿ ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ವಿಜಯ್ ಸಾವನ್ನಪ್ಪಿದ್ದಾರೆ.

Leave a Reply