ಹೊಸದಾಗಿ ಖರೀದಿಸಬೇಕಾದದ್ದು ಶವ ಸಾಗಿಸುವ ವಾಹನಗಳು, ಆ್ಯಂಬುಲೆನ್ಸ್ ಗಳು

2 years ago

ಯಾವುದೇ ಸರ್ಕಾರ ಬರಲಿ, ಯಾವುದೇ ಪರಿಸ್ಥಿತಿಯೇ ಇರಲಿ; ಎಲ್ಲ ಸರ್ಕಾರದ ಮೊದಲ ಆದ್ಯತೆ ತಮ್ಮ ಕಛೇರಿಗಳ ನವೀಕರಣ, ತಮ್ಮ ವಾಸದ ಮನೆಗಳ ಸುಂದರಗೊಳಿಸುವ ಪವಿತ್ರ ಕಾರ್ಯ, ಮತ್ತೊಂದು ಮಹತ್ವದ ಯೋಜನೆಯೆಂದರೆ ಹೊಸದಾಗಿ ವಾಹನಗಳನ್ನು ಖರೀದಿಸುವುದು.

ಕೆಲವೇ ಕೆಲವು ತಿಂಗಳು, ವರ್ಷಗಳ ಹಿಂದೆ ಹಿಂದಿನ ಸರ್ಕಾರಗಳು ಮಂತ್ರಿ ಮಹೋದಯರಿಗಾಗಿ ಖರೀದಿಸಿದ್ದ ವಾಹನಗಳು ಹೊಸ ಹೊಸ ಸರ್ಕಾರಗಳು ಬರುತ್ತಿದ್ದಂತೆ ಹಳೆಯದಾಗುತ್ತವೆ. ರಿಪೇರಿಗಳು ಪದೇಪದೇ ಬರುತ್ತವೆ. ಈ ನೆಪದಲ್ಲಿ ಇವುಗಳನ್ನು ಮೂಲೆಗೆ ಹಾಕಿ ಮತ್ತೆ ಹೊಸ ಕಾರುಗಳ ಖರೀದಿಸುವಂತಹ ತೀರ್ಮಾನಕ್ಕೆ ಬರುವುದು ವಾಡಿಕೆಯಾಗಿದೆ.

ನವೀಕರಿಸಿಕೊಳ್ಳಬೇಕಾದದ್ದು ಅಧಿಕಾರದಲ್ಲಿರುವ ಜನರ ಕಛೇರಿಗಳಲ್ಲ ಬಡವರು ವಾಸಿಸುವ ಬಡಾವಣೆಗಳಲ್ಲಿನ ರಸ್ತೆಗಳು, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು. ಆಧುನಿಕರಣಗೊಳ್ಳಬೇಕಾದದ್ದು ಮಂತ್ರಿಗಳ ಮನೆಗಳಲ್ಲ ಜನರ ಸಂಪರ್ಕಕ್ಕೆ ಬರುವ ಸರ್ಕಾರಿ ಕಛೇರಿಗಳು.

ಖರೀದಿಸಬೇಕಾದದ್ದು ಮಂತ್ರಿಗಳ ಕಾರುಗಳನ್ನಲ್ಲ; ಹೆಣಗಳನ್ನು ಸಾಗಿಸುವ ವಾಹನಗಳು, ಸದಾ ಅಲ್ಲಲ್ಲಿ ಕೆಟ್ಟು ನಿಲ್ಲುವ ರೋಗಿಗಳನ್ನು ಹೊತ್ತು ತಿರುಗುವ ಆ್ಯಂಬುಲೆನ್ಸ್‌ ಗಳು, ಜನಸಾಮಾನ್ಯರು ಓಡಾಡುವ ಬಸ್‌ಗಳು. ಆದರೆ ಯಾವುದೇ ಸರ್ಕಾರಕ್ಕೂ ಶಾಲೆಗಳ ನವೀಕರಣ, ಆಸ್ಪತ್ರೆಗಳ ನವೀಕರಣ, ಸರ್ಕಾರಿ ಕಟ್ಟಡಗಳ ರಿಪೇರಿ, ಬಡವರ ಮನೆಯ ಬಡಾವಣೆಗಳ ಸೌಕರ್ಯ, ಸೌಲಭ್ಯ ಇವುಗಳಿಗಿಂತ ತಮ್ಮ ಕಛೇರಿ, ತಮ್ಮ ಮನೆ, ತಾವು ಸಂಚರಿಸುವ ವಾಹನಗಳ ಚಿಂತೆಯಲ್ಲಿ ಹೆಚ್ಚು ಕಾಲವನ್ನು ಕಳೆಯುತ್ತಾರೆ. ಸರ್ಕಾರದ ಬೊಕ್ಕಸವನ್ನು ಯಾವುದೇ ರೀತಿಯ ಹಿಂಜರಿಕೆಯಿಲ್ಲದೆ ಧಾರಳವಾಗಿ ವೆಚ್ಚ ಮಾಡುತ್ತಾರೆ.

  • ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply