ನರೇಂದ್ರಮೋದಿಯವರ 10 ವರ್ಷದ ಆಡಳಿತ ವಿಶ್ವವೆ ನೋಡುವಂತಾಗಿದೆ: ವಿ.ಸೋಮಣ್ಣ

2 years ago

ಬೆಂಗಳೂರು: ನನ್ನ ಮನಸ್ಸಿನಲ್ಲಿ ಏನು ಇದೆ ಎಂಬುದು ಕಾರ್ಯಕರ್ತರಿಗೆ ಅರಿವು ಇದೆ. ಮತದಾರರು ಮತ್ತು ಕಾರ್ಯಕರ್ತರು ನನ್ನ ಜೊತೆಯಲ್ಲಿ ಇದ್ದಾರೆ, ನನ್ನ ತಪ್ಪಿನಿಂದ ನನಗೆ ನೋವಾಗಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.

ಗೋವಿಂದರಾಜನಗರ ಮಂಡಲ ಕಾರ್ಯಕಾರಿಣಿ ಸಭೆಯನ್ನು ವಿಜಯನಗರ ಬಿಜೆಪಿ ಕಛೇರಿಯಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷ 50 ವರ್ಷ ಆಡಳಿತ ನೆಡಸಿದೆ. ಪ್ರಧಾನಿ ನರೇಂದ್ರಮೋದಿಯರ 10 ವರ್ಷದ ಆಡಳಿತ ವಿಶ್ವವೆ ನೋಡುವಂತಾಗಿದೆ. ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆರವರು ಬಿಜೆಪಿ 400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸತ್ಯವನ್ನೆ ನುಡಿದಿದ್ದಾರೆ ಎಂದರು.

ನನಗೆ ಆಗಿರುವ ಅಡೆತಡೆಗಳಿಂದ ನಾನು ದೆಹಲಿಗೆ ಹೋಗಿ ಬಿಜೆಪಿ ಪಕ್ಷದ ರಾಷ್ಟ್ರ ನಾಯಕರನ್ನು ಭೇಟಿ ಮಾಡಿದ್ದೇನೆ. ನನಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಲೋಕಸಭಾ ಚುನಾವಣೆ ಭವ್ಯ ಭಾರತದ ಭವಿಷ್ಯದ ಚುನಾವಣೆಯಾಗಿದೆ. ಸತ್ಯದ ದಾರಿಯಲ್ಲಿ ನಡೆಯೋಣ ಮತ್ತು ಮತದಾರರ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ನೀಡೋಣ ಎಂದರು.

ಲೋಕಸಭಾ ಚುನಾವಣೆ ಕಳೆದ ಬಾರಿ 50 ಸಾವಿರ ಅತ್ಯಧಿಕ ಮತಗಳು ಬಿಜೆಪಿ ಪಕ್ಷಕ್ಕೆ ಬಂದಿದ್ದವು. ಈ ಬಾರಿ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪಡೆಯುವಂತೆ ಹಗಲಿರುಳು ಶ್ರಮಿಸೋಣ ಎಂದರು.

ಫಸಲ್ ಭೀಮಾ, ಉಜ್ವಲ, ವಿಶ್ವಕರ್ಮ, ಮುದ್ರ ಯೋಜನೆಗಳಿಂದ ಕೊಟ್ಯಂತರ ಜನರು ಆರ್ಥಿಕವಾಗಿ ಸಬಲರಾಗುವಂತೆ ಮಾಡಿದೆ. 500 ವರ್ಷದ ಸತತ ಹೋರಾಟದ ಪ್ರತಿಫಲ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆಯಾಗಿದೆ ಎಂದರು.

ಕಾಂಗ್ರೆಸ್ ಪಕ್ಷದವರೆ ಹೇಳುತ್ತಾರೆ ನರೇಂದ್ರಮೋದಿ ಗೆಲ್ಲುತ್ತಾರೆ ಎಂದು. ನಾವು ಚುನಾವಣೆಯಲ್ಲಿ ಮೈಮರೆಯುವುದು ಬೇಡ. ಲೋಕಸಭಾ ಚುನಾವಣೆಯಲ್ಲಿ ಸಿಪಾಯಿಗಳಂತೆ ಕೆಲಸ ಮಾಡಬೇಕು. ಯುವ ನಾಯಕ ವಿಜಯೇಂದ್ರರವರು ರಾಜ್ಯಾಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ಮಿಂಚಿನ ಸಂಚಾರ ಮಾಡಿ ಸಂಘಟನೆ ಮಾಡುತ್ತಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಯುವ ನಾಯಕ ಸಾರಥ್ಯಕ್ಕೆ ಜಯಸಿಗಲಿದೆ. ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡರು ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿಯುವರೆಗೆ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದರು.

ರಾಷ್ಟ್ರಿಯ ಅಧ್ಯಕ್ಷರಾದ ನಡ್ಡಾರವರ ಜೊತೆಯಲ್ಲಿ ಸುಮಾರು 2 ಗಂಟೆ ಉತ್ತಮ ಸಮಾಲೋಚನೆ ನಡೆಯಿತು. ಕಾಂಗ್ರೆಸ್ ಪಕ್ಷ ಮತದಾರರಿಗೆ ಬೆದರಿಕೆ ಹಾಕುವ ಕಾರ್ಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ನಗೆಪಾಟಿಲಿಗೆ ಈಡಾಗಿದೆ. ಗ್ಯಾರಂಟಿ ಭಾಗ್ಯಗಳನ್ನು ಕಾಂಗ್ರೆಸ್ ಸರ್ಕಾರವೆ ನಿಲ್ಲಸಲಿದೆ ಎಂದರು.

ಸೌದೆ ಒಲೆಯಿಂದ ಮುಕ್ತಿಪಡೆದು, ಉಜ್ವಲ ಯೋಜನೆ ಗ್ಯಾಸ್ ನಿಂದ ಅಡುಗೆ ಮಾಡುವುದರಿಂದ ಮಹಿಳೆಯರು ಅತ್ಯಂತ ಋಷಿಯಿಂದ ಇದ್ದಾರೆ. 10 ಕೋಟಿ ಕುಟುಂಬಗಳು ಇದರ ಫಲಾನುಭವಿಗಳು ಇದ್ದಾರೆ. ಭಾರತ್ ರೈಸ್ 29 ರೂಪಾಯಿ 1 ಕೆ.ಜಿ.ನೀಡುತ್ತಿದೆ ಎಂದರು.

ಗ್ರಾಮ ಚಲೋ ಕಾರ್ಯಕ್ರಮದ ಅನ್ವಯ ಪ್ರತಿಯೊಬ್ಬರ ಮನೆಗಳಿಗೆ ಕಾರ್ಯಕರ್ತರು ಭೇಟಿ ಮಾಡಬೇಕು. ಭವ್ಯ ಭಾರತದ ಭವಿಷ್ಯಕ್ಕೆ ನರೇಂದ್ರಮೋದಿರವರ ಕೈಬಲಪಡಿಸೋಣ. ಎಲ್ಲರು ಸಂಘಟನೆ ಮಾಡಿ, ದೇಶದ ಅಭಿವೃದ್ದಿಗೆ ಸಹಕಾರ, ಬೆಂಬಲ ನೀಡೋಣ ಎಂದರು.

ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ರಾಜ್ಯ ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ, ವಿಜಯನಗರ ಮಂಡಲ ಅಧ್ಯಕ್ಷ ಟಿ.ವಿ.ಕೃಷ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ರತ್ಮಮ್ಮ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮೋಹನ್ ಕುಮಾರ್ ದಾಸೇಗೌಡ, ಪಲ್ಲವಿ ಚನ್ನಪ್ಪ, ರೂಪಲಿಂಗೇಶ್ವರ್, ಬಿಜೆಪಿ ಮುಖಂಡರಾದ ಶ್ರೀಧರ್, ನಂಜಪ್ಪ, ಸಿಎಂ.ರಾಜಪ್ಪ, ಕ್ರಾಂತಿರಾಜು, ವೇಣು, ರಮೇಶ್, ಬುಲೆಟ್ ವೆಂಕಟೇಶ್, ನಂಜಪ್ಪ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿಕಲಚೇತನ ಪದ್ಮಶ್ರೀ ಪುರಸ್ಕೃತ ರಾಜಣ್ಣ ಅವರನ್ನು ಸನ್ಮಾನಿಸಲಾಯಿತು.

Leave a Reply