ಬೆಂಗಳೂರು: ಜಂಗಮ ಕ್ರಿಯೇಷನ್’ ಪ್ರಸ್ತುತಪಡಿಸಿ, ಅನಿಲ ರೇವೂರ ನಿರ್ದೇಶಿಸಿರುವ ‘ನಮ್ ಸಾಲಿ’ ಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಏಷಿಯನ್, ಇಂಡಿಯನ್ ಮತ್ತು ಕನ್ನಡ ಮೂರೂ ಸ್ಪರ್ಧಾ ವಿಭಾಗಳಲ್ಲಿ ಆಯ್ಕೆಯಾಗಿದೆ.
- ಚುನಾವಣೆಯಲ್ಲಿ ಸೋಲುವ ಭಯದಿಂದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ: ಆರ್.ಅಶೋಕ
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
ಈ ಕುರಿತು ಸಂತಸ ಹಂಚಿಕೊಂಡಿರುವ ನಮ್ ಸಾಲಿ ಚಿತ್ರ ತಂಡ’ ಜಂಗಮ ಕ್ರಿಯೇಷನ್’ ಪ್ರಸ್ತುತಪಡಿಸುವ, ಅನಿಲ ರೇವೂರ ನಿರ್ದೇಶನದ ‘ನಮ್ ಸಾಲಿ’ ಚಿತ್ರವು, ಬೆಂಗಳೂರು ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಏಷಿಯನ್, ಇಂಡಿಯನ್ ಮತ್ತು ಕನ್ನಡ ಮೂರೂ ಸ್ಪರ್ಧಾ ವಿಭಾಗಳಲ್ಲಿ ಆಯ್ಕೆಯಾಗಿದೆ. ಇದು ನಮ್ಮ ಇಡೀ ತಂಡಕ್ಕೂ ಸಂತಸ ಮತ್ತು ಹೆಮ್ಮೆಯ ಸಂಗತಿ ಎಂದಿದೆ.
ಈ ದಾರಿಯಲ್ಲಿ ಜೊತೆಯಾದ ನಟನಟಿಯರಿಗೆ ತಂತ್ರಜ್ಞರಿಗೆ, ನಿರ್ಮಾಣದಲ್ಲಿ ಬೆನ್ನಿಗೆ ನಿಂತವರಿಗೆ, ಪೊರೆದ ಎಲ್ಲರಿಗೂ ಪ್ರೀತಿಯ ಶರಣು. ಚಿತ್ರೋತ್ಸವದಲ್ಲಿ ನೀವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಿನಿಮಾ ನೋಡಿ, ಹೆಚ್ಚಿನ ನೋಡುಗರನ್ನು ತಲುಪುವಂತೆ ಮಾಡುವಿರೆಂದು ನಾವು ನಂಬಿದ್ದೇವೆ ಎಂದಿದೆ.





