ಹಿಂದಿಗೆ ರೀಮೇಕ್ ಆಗಲಿದೆ ಕನ್ನಡದ ಆಕ್ಟ್-1978

5 years ago

ಬೆಂಗಳೂರು: ಕನ್ನಡದಲ್ಲಿ ಲಾಕ್ ಡೌನ್ ನಂತರ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದ ಮನ್ಸೋರೆ ನಿರ್ದೇಶನದ ಚಿತ್ರ ಆಕ್ಟ್-1978 ಹಿಂದೆ ರೀಮೇಕ್ ಆಗಲಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಮನ್ಸೋರೆ ಹಂಚಿಕೊಂಡಿದ್ದಾರೆ.

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿ, ಈಗ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ವಿಶ್ವದಾದ್ಯಂತ ಕನ್ನಡಿಗರನ್ನೊಳಗೊಂಡು ಎಲ್ಲ ಭಾಷೆಯ ಸಿನಿಮಾ ಪ್ರೇಮಿಗಳ ಮನಸ್ಸು ಗೆಲ್ಲುತ್ತಿರುವ “ಆಕ್ಟ್-1978” ಕನ್ನಡ ಸಿನೆಮಾ ಈಗ ಹಿಂದಿ ಭಾಷೆಗೆ ರೀಮೇಕ್ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅಧಿಕೃತವಾಗಿ ರೀಮೇಕ್ ಹಕ್ಕುಗಳು ಮಾರಾಟವಾಗಿದ್ದು, ಅತಿ ಶೀಘ್ರದಲ್ಲೇ ಹಿಂದಿ ಅವತರಣಿಕೆಯ ಶೀರ್ಷಿಕೆಯ ಅನಾವರಣವಾಗಲಿದೆ. “ಆಕ್ಟ್-1978” ಹಿಂದಿ ಭಾಷೆಯಲ್ಲಿ ಹೆಸರಾಂತ ನಟಿಯೊಬ್ಬರು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ದೊಡ್ಡ ಬಡ್ಜೆಟ್‌ನಲ್ಲಿ ನಿರ್ಮಾಣವಾಗಲಿದೆ. ತಾರಾಗಣ, ತಂತ್ರಜ್ಞರ ವರ್ಗ, ಮತ್ತಿತ್ಯಾದಿ ವಿವರಗಳು ನಿರ್ಮಾಣ ಸಂಸ್ಥೆಯ ಕಡೆಯಿಂದಲೇ ಅಧಿಕೃತವಾಗಿ ಹೊರಬರಲಿದೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಈ ಮೂಲಕ ಕನ್ನಡ ಚಿತ್ರವೊಂದು ಹಿಂದಿಗೆ ರೀಮೇಕ್ ಆಗುವ ಸಾಧನೆ ಮಾಡಿದಂತಾಗಿದೆ. ಎರವಲು ವಿಷಯ ಮತ್ತು ಕತೆ, ರೀಮೇಕ್ ಗಳಿಂದ ಬೇಸತ್ತಿದ್ದ ಕನ್ನಡದ ಪ್ರೇಕ್ಷಕರಿಗೆ ಹೊಸ ರೀತಿಯ ಕತೆ, ವಿಷಯಗಳನ್ನು ನೀಡಿದ ಚಿತ್ರತಂಡ ಅಭಿನಂದನಾರ್ಹ.

Leave a Reply