ವಾರ್ಷಿಕ ₹15,000 – ₹25,000 ಶುಲ್ಕ ಮರುಪರಿಶೀಲನೆಗೆ ಸಿಎಂಗೆ ಪತ್ರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಬದಿಯ ವಾಹನ ನಿಲುಗಡೆಗೆ (Street Parking) ವಾರ್ಷಿಕ ₹15,000 ದಿಂದ ₹25,000 ವರೆಗೆ ಶುಲ್ಕ ವಿಧಿಸುವ ಪ್ರಸ್ತಾಪಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಚಿವ ರಾಮಲಿಂಗಾರೆಡ್ಡಿ ಅವರು ಈ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
- ಬೆಂಗಳೂರಿನಲ್ಲಿ ಪಾರ್ಕಿಂಗ್ ಶುಲ್ಕ ಪ್ರಸ್ತಾಪಕ್ಕೆ ಸಚಿವ ರಾಮಲಿಂಗಾರೆಡ್ಡಿ ಅಪಸ್ವರ
- ಸ್ಕಾಲರ್ಶಿಪ್ ಪಡೆಯಲು ಆದಾಯ ಪ್ರಮಾಣ ಪತ್ರದ ವಿಚಾರದ ಗೊಂದಲ ಸರಿಪಡಿಸಿ
- ನಿಘಂಟು ಬ್ರಹ್ಮ ಜಿ.ವೆಂಕಟಸುಬ್ಬಯ್ಯ
- ದಾವಣಗೆರೆ ನಗರದ ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆ
- ಸೋಮನಾಥ ದೇಗುಲದ ಲೂಟಿಯಿಂದ ಅಯೋಧ್ಯೆಯ ‘ಚಂದಾಗಳವು’ವರೆಗೆ
ಬೆಂಗಳೂರಿನ ಹಳೆಯ ಬಡಾವಣೆಗಳು ಹಾಗೂ ಸೀಮಿತ ಸ್ಥಳಾವಕಾಶವಿರುವ ಮನೆಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಕುಟುಂಬಗಳ ವಾಸ್ತವ ಸ್ಥಿತಿಯನ್ನು ಪರಿಗಣಿಸಿ, ಈ ದುಬಾರಿ ಪಾರ್ಕಿಂಗ್ ನೀತಿಯಿಂದ ಜನಸಾಮಾನ್ಯರಿಗೆ ವಿನಾಯಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪತ್ರದಲ್ಲಿರುವ ಪ್ರಮುಖ ಅಂಶಗಳು:
ಮಧ್ಯಮ ವರ್ಗದ ಮೇಲೆ ಆರ್ಥಿಕ ಹೊರೆ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ದರ ಹಾಗೂ ದಿನನಿತ್ಯದ ಖರ್ಚುಗಳಿಂದ ಈಗಾಗಲೇ ಕಂಗಾಲಾಗಿರುವ ಮಧ್ಯಮ ವರ್ಗದ ಜನರ ಮೇಲೆ ವಾರ್ಷಿಕ ₹15,000 ದಿಂದ ₹25,000 ಹೆಚ್ಚುವರಿ ಶುಲ್ಕ ವಿಧಿಸುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಸ್ಥಳಾವಕಾಶದ ಕೊರತೆ: ನಗರದ ಹಳೆಯ ಕಟ್ಟಡಗಳು ಮತ್ತು ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ತಮ್ಮ ವಾಹನಗಳನ್ನು ಕಾಂಪೌಂಡ್ ಒಳಗೆ ನಿಲ್ಲಿಸಲು ಜಾಗವಿಲ್ಲ. ಅನಿವಾರ್ಯವಾಗಿ ರಸ್ತೆ ಬದಿ ನಿಲ್ಲಿಸುವ ಅಂತಹ ಕುಟುಂಬಗಳ ಮೇಲೆ ದಂಡದ ರೂಪದಲ್ಲಿ ಶುಲ್ಕ ಹೇರುವುದು ಸರಿಯಲ್ಲ.
ಗ್ಯಾರಂಟಿ ಆಶಯಕ್ಕೆ ಧಕ್ಕೆ: ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ಆರ್ಥಿಕ ನೆರವು ನೀಡುತ್ತಿರುವಾಗ, ಇಂತಹ ಅನಿವಾರ್ಯ ಶುಲ್ಕಗಳ ಮೂಲಕ ನಗರವಾಸಿಗಳ ಮೇಲೆ ಹೊರೆ ಬೀಳದಂತೆ ಎಚ್ಚರಿಕೆ ವಹಿಸುವುದು ಸೂಕ್ತ.
ವ್ಯಾಪಕ ಸಮಾಲೋಚನೆಗೆ ಆಗ್ರಹ: ಅಕ್ರಮ ಹಾಗೂ ದೀರ್ಘಾವಧಿಯ ಅಸಮರ್ಪಕ ಪಾರ್ಕಿಂಗ್ ನಿಯಂತ್ರಿಸುವುದು ಅಗತ್ಯವಾಗಿದ್ದರೂ, ನಿಯಮಿತ ವಾಹನ ಬಳಕೆದಾರರಿಗೆ ವಿನಾಯಿತಿ ನೀಡಬೇಕು. ಈ ಕುರಿತು ಬೆಂಗಳೂರಿನ ಶಾಸಕರು, ಸಾರ್ವಜನಿಕ ಸಂಘ-ಸಂಸ್ಥೆಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈಗಾಗಲೇ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಈ ಪ್ರಸ್ತಾಪಕ್ಕೆ ಸ್ವತಃ ಸರ್ಕಾರದ ಹಿರಿಯ ಸಚಿವರೇ ಆಕ್ಷೇಪ ವ್ಯಕ್ತಪಡಿಸಿರುವುದು ನಗರದ ವಾಹನ ಮಾಲೀಕರಲ್ಲಿ ನಿರಾಳತೆ ಮೂಡಿಸಿದ್ದು, ಸರ್ಕಾರದ ಮುಂದಿನ ನಡೆ ಕುತೂಹಲ ಮೂಡಿಸಿದೆ.

