ಬಿ.ಬಿ.ಎಂ.ಪಿ. ನೂತನ ಪಾರ್ಕಿಂಗ್ ಪಾಲಿಸಿ 2.0 ರದ್ದುಗೊಳಿಸಿ

4 years ago

ಬಿ.ಬಿ.ಎಂ.ಪಿ. ನೂತನ ಪಾರ್ಕಿಂಗ್ ಪಾಲಿಸಿ 2.0 ರದ್ದುಗೊಳಿಸಿ

ಬೆಂಗಳೂರು: ವೀಲ್ (WHEEL) ಸಾಮಾಜಿಕ ಸೇವಾ ಸಂಘಟನೆ ವತಿಯಿಂದ ಸಾರ್ವಜನಿಕರಿಗೆ ಪೇ ಆಂಡ್ ಪಾರ್ಕ್ ಮಾಡುವುದರಿಂದ ವಾಹನ ಪಾರ್ಕಿಂಗ್ ಮಾಡುವ ಸವಾರರಿಗೆ ಆಗುವ ತೊಂದರೆಗಳ ಬಗ್ಗೆ ಸಮಗ್ರ ಮಾಹಿತಿಯನ್ನ ವೀಲ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಅಮರೇಶ್ (ಅಂಬರೀಶ್) ತಿಳಿಸಿದರು.

ಬಿ.ಬಿ.ಎಂ.ಪಿ. ಮತ್ತು ಭೂ ಸಾರಿಗೆ ನಿರ್ದೇಶನಾಲಯ ರೂಪಿಸಿದ ಹೊಸ ಪಾರ್ಕಿಂಗ್ ನೀತಿ 2.0 ಅನ್ವಯ ಪಾವತಿಸಿ ವಾಹನ ನಿಲುಗಡೆ ಮಾಡುವ ವ್ಯವಸ್ಥೆ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಬೆಂಗಳೂರಿನಲ್ಲಿ ಬಹುತೇಕ ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್ ಗೆ ಮೀಸಲಿಟ್ಟ ಜಾಗ ಬೇರೆ ಉದ್ದೇಶಕ್ಕಾಗಿ ಬಳಸಿರುವುದರಿಂದ ಮತ್ತು ಕಲ್ಯಾಣ ಮಂಟಪದಲ್ಲಿ ವಾಹನ ಪಾರ್ಕಿಂಗ್ ಸ್ಥಳವನ್ನು ಡೈನಿಂಗ್ ಹಾಲ್ ಮಾಡಿರುವುದರಿಂದ, ವಾಹನ ಪಾರ್ಕಿಂಗ್ ಸಮಸ್ಯೆ ಉಂಟಾಗಿದೆ. ಹಳೆಯ ಮತ್ತು ಕೆಟ್ಟು ನಿಂತ ವಾಹನಗಳನ್ನು ಡಂಪಿಂಗ್ ಯಾರ್ಡ್ ಸ್ಥಾಪನೆ ಮಾಡಬೇಕು ಎಂದರು.

ಖಾಸಗಿಯವರು ದುಬಾರಿ ಪಾರ್ಕಿಂಗ್ ಶುಲ್ಕದಿಂದ ಸಾರ್ವಜನಿಕರು ರಸ್ತೆಯಲ್ಲಿ ವಾಹನ ನಿಲ್ಲಿಸುವಂತೆ ಆಗಿದೆ. ಮೈಸೂರು ಮಹಾನಗರ ಪಾಲಿಕೆ, ಯೋಜನಾ ಸ್ಥಾಯಿ ಸಮಿತಿ ಮಹತ್ವ ಆದೇಶ ನೀಡಿ ಖಾಸಗಿ ವಾಣಿಜ್ಯ ಕಟ್ಟಡಗಳು, ಮಾಲ್ ಗಳಲ್ಲಿ ಪಾರ್ಕಿಂಗ್ ಫೀ ವಸೂಲಿ ಮಾಡದಂತೆ ಆದೇಶ ನೀಡಿದ್ದಾರೆ. ವಾಣಿಜ್ಯ ಕಟ್ಟಡ ಮತ್ತು ಮಾಲ್ ಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಬಹುತೇಕ ರಸ್ತೆಗಳಲ್ಲಿ ಪುಟ್ ಪಾತ್ ಗಳಲ್ಲಿ ಬೀದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಮನೆ ಮುಂದೆ ನಿಲ್ಲುವ ಕಟ್ಡಡದ ಮಾಲೀಕರಿಗೆ ವಾಹನಕ್ಕೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲು ಮುಂದಾಗಿದೆ. ಸಿ.ಎ.ಜಿ. ವರದಿಯಲ್ಲಿ ನಗರದಲ್ಲಿ ಅಪಾಯಕಾರಿ ರಸ್ತೆ ಮತ್ತು ಪುಟ್ ಪಾತ್ ಗಳಿವೆ ಎಂದು ವರದಿ ನೀಡಿದೆ. ಇದರಿಂದ ಸಹ ವಾಹನ ಸವಾರರು ಪಾರ್ಕಿಂಗ್ ಮಾಡುವ ಸಮಸ್ಯೆ ಇದೆ. ನೂತನ ಪಾರ್ಕಿಂಗ್ ನೀತಿಯಿಂದ ವಾಹನದ ಬೆಲೆಯಷ್ಟು ಪಾರ್ಕಿಂಗ್ ಶುಲ್ಕ ಕಟ್ಟಬೇಕಾಗುತ್ತದೆ ಎಂದರು.

ಇಂತಹ ಪೇ ಅಂಡ್ ಪಾರ್ಕಿಂಗ್ ನಲ್ಲಿ ಹಲವಾರು ಸಮಸ್ಯೆಗಳು ಇದೆ . ನೂತನ ಪಾರ್ಕಿಂಗ್ ನೀತಿಯನ್ನು ರದ್ದುಗೊಳಿಸಬೇಕು ಎಂದು  ಸಿಎಂಗೆ ಮನವಿ ಮಾಡಿದರು.

Leave a Reply