ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಆರೋಪ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ವೇಳೆ ತಮ್ಮ ಮಗಳು ವೈದ್ಯ ವಿದ್ಯಾರ್ಥಿನಿ ಧರ್ಮಸ್ಥಳದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದ ಮಹಿಳೆ ಇದೀಗ ಪಶ್ಚಾತಾಪ ಪಡುತ್ತಿದ್ದಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ನಾನು ತಪ್ಪು ಮಾಡಿದ್ದೇನೆ. ಮಂಜುನಾಥ ಸ್ವಾಮಿ ಬಳಿ ನಾನು ಕ್ಷಮಾಪಣೆ ಕೇಳುತ್ತೇನೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಕೈ ಮುಗಿದು ಕ್ಷಮೆ ಕೇಳುತ್ತೇನೆ ಎಂದು ವಿವಾದ ಸೃಷ್ಟಿಸಿದ ಮಹಿಳೆ ಸುಜಾತ ಭಟ್ ಹೇಳಿದ್ದಾರೆ.
ಬುರುಡೆ ಗ್ಯಾಂಗ್ ಜೊತೆ ಹೋಗಿ ನಾನು ತಪ್ಪು ಮಾಡಿದೆ. ಆಗ ಮಾಡಿರುವ ತಪ್ಪಿಗಾಗಿ ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ. ಹಾಗಾಗಿ ನಾನು ಧರ್ಮಸ್ಥಳಕ್ಕೆ ಹೋಗಿ ನನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖ್ಯಾತ ನಟನ ಸಹೋದರ ತನಗೆ ಸಹಾಯ ಮಾಡಿದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಟನ ಸಹೋದರನಿಗೂ ನನಗೂ ಯಾವುದೇ ಸಂಬಂಧ ಇಲ್ಲ. ವಾಸಂತಿ ಸತ್ತಿಲ್ಲ. ಆಕೆ ಬದುಕಿದ್ದಾಳೆ ಎಂದು ಎಂದು ಎಸ್‌ಐಟಿ ಮುಂದೆ ಹೇಳಿದ್ದೇನೆ. ಹೀಗಾಗಿ ಎಸ್‌ಐಟಿ ಅವರು ತನಿಖೆ ನಡೆಸುತ್ತಿರಬಹದು ಎಂದರು.
ನನಗೆ ಈಗ ಜೀವನ ನಡೆಸುವುದು ಕಷ್ಟವಾಗಿದೆ. ನನಗೆ ಮೊಬೈಲ್ ಭಾಗ್ಯ, ವಾಚ್ ಭಾಗ್ಯ, ದುಡ್ಡಿನ ಭಾಗ್ಯ ಎಂದು ಹೇಳುತ್ತಾರೆ. ಸಹಾಯ ಮಾಡುವುದೇ ತಪ್ಪು ಎನ್ನುವುದಾದರೆ ಮಾನವೀಯತೆ ಎಲ್ಲಿದೆ? ಬುರುಡೆ ಗ್ಯಾಂಗ್ ಎಲ್ಲದಕ್ಕೂ ನಾನು ಫುಲ್ ಸ್ಟಾಪ್ ಇಟ್ಟಿದ್ದೇನೆ ಎಂದರು.
ವಾಸಂತಿ ಪ್ರಕರಣದಲ್ಲಿ ನಟನ ಸಹೋದರ ಇರುವುದು ನಿಜ. ವಾಸಂತಿ ನಾಪತ್ತೆ ಕೇಸಲ್ಲಿ ನಟನ ಸಹೋದರ ಎ2 ಆರೋಪಿ. ವಾರದ ಬಳಿಕ ಕೊಳೆತ ಸ್ಥಿತಿಯಲ್ಲಿ ವಾಸಂತಿ ಶವ ಪತ್ತೆಯಾಗಿದೆ ಎಂಬ ಸುದ್ದಿ ಹರಿದಾಡಿತ್ತು. ವಾಸಂತಿ ಹಾಗೂ ಸ್ಟಾರ್ ನಟನ ಸಹೋದರನ ನಡುವಿನ ಸಂಬಂಧ ಏನು ಎಂದು ಗೊತ್ತಿಲ್ಲ ಎಂದರು.




