ಬಿಜೆಪಿ ಕಾರ್ಯಕರ್ತರೇ, ಆರ್.ಎಸ್.ಎಸ್ ಕಾರ್ಯಕರ್ತರೇ, ನಿಮ್ಮ ಪ್ರಧಾನಿಯ ಕಣ್ಣುಗಳಲ್ಲಿ ನೋಡಿ, ನಿಮಗೆ ಭಯ ಕಾಣುತ್ತದೆ. ಸಂಸತ್ತಿಗೆ ಬರಲು ಅವರಿಗೆ ಸಾಧ್ಯವಾಗಲಿಲ್ಲ, ಮತ್ತು ಅದಕ್ಕೆ ಕಾರಣ ನರವಾಣೆ ಅಲ್ಲ, ಕಾರಣ ಎಪ್ಸ್ಟೀನ್ ಆಗಿತ್ತು,ಜೊತೆಗೆ ಅದಾನಿ ಮೇಲಿನ ಪ್ರಕರಣ ಕಾರಣವಾಗಿತ್ತು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ನರೇಂದ್ರ ಮೋದಿ ಅವರೇ, ಅಹಿಂಸೆ ಮತ್ತು ಪ್ರಜಾಸತ್ತಾತ್ಮಕ ವಿರೋಧವು ದೇಶದ ಬುನಾದಿಯಾಗಿದೆ. ಗಾಂಧೀಜಿ ಮತ್ತು ಭಗತ್ ಸಿಂಗ್ ಈ ಮಾರ್ಗವನ್ನು ತೋರಿಸಿದ್ದಾರೆ, ಇದಕ್ಕೆ ನೀವು ಏಕೆ ಇಷ್ಟೊಂದು ಹೆದರುತ್ತೀರಿ?
ನೀವು ನಾಚಿಕೆಗೇಡಿನ ಬಗ್ಗೆ ಮಾತನಾಡುತ್ತೀರಿ, ನಾಚಿಕೆಗೇಡಿನ ವಿಷಯವೇನೆಂದು ನಾನು ನಿಮಗೆ ಹೇಳುತ್ತೇನೆ. ಅಮೆರಿಕದೊಂದಿಗೆ ನೀವು ಮಾಡಿದ್ದು ನಾಚಿಕೆಗೇಡಿನ ಸಂಗತಿ, ನೀವು ದೇಶವನ್ನು ಮಾರಿದ್ದೀರಿ.
ಮೊದಲನೇ ನಾಚಿಕೆಗೇಡಿನ ಸಂಗತಿಯೆಂದರೆ, ಅಮೆರಿಕದ ಜೊತೆ ನೀವು ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿ, ಭಾರತಕ್ಕೆ ಏನೇನೂ ಸಿಕ್ಕಿಲ್ಲ, ಮತ್ತು ನೀವು ನಮ್ಮ ಇಡೀ ದೇಶವನ್ನು ಅಮೆರಿಕಕ್ಕೆ ಮಾರಿದ್ದೀರಿ. ನಮ್ಮ ದೇಶದ ಡೇಟಾವನ್ನು ನೀಡಿದ್ದೀರಿ, ರೈತರನ್ನು ಮುಗಿಸಿದ್ದೀರಿ, ಜವಳಿ ಉದ್ಯಮವನ್ನು (Textile industry) ನಾಶಮಾಡಿದ್ದೀರಿ, ಇದು ನಾಚಿಕೆಗೇಡಿನ ಸಂಗತಿ.
ಎರಡನೇ ನಾಚಿಕೆಗೇಡಿನ ಸಂಗತಿಯೆಂದರೆ, ಎಪ್ಸ್ಟೀನ್ ಎಂಬ ಪೀಡೋಫೈಲ್ (ವಿಕೃತ ಶಿಶುಕಾಮಿ) ನ ಫೈಲ್‌ಗಳಲ್ಲಿ, ಆತನ ಇಮೇಲ್‌ನಲ್ಲಿ ನಿಮ್ಮ ಹೆಸರು, ನಿಮ್ಮ ಮಂತ್ರಿಗಳ ಹೆಸರು ಮತ್ತು ನಿಮ್ಮ ಸ್ನೇಹಿತರ ಹೆಸರು, ಈ ಮೂವರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ, ಇದು ಎರಡನೇ ನಾಚಿಕೆಗೇಡಿನ ಸಂಗತಿ.
ಮೂರನೇ ನಾಚಿಕೆಗೇಡಿನ ಸಂಗತಿಯೆಂದರೆ, ಅದಾನಿ ಮೇಲೆ ನಡೆಯುತ್ತಿರುವ ಪ್ರಕರಣ ಇಡೀ ದೇಶಕ್ಕೆ ತಿಳಿದಿದೆ, ಅದು ಕೇವಲ ಅದಾನಿ ಮೇಲಿನ ಪ್ರಕರಣವಲ್ಲ, ಬದಲಾಗಿ ಬಿಜೆಪಿ ಮತ್ತು ನಿಮ್ಮ ಹಣಕಾಸಿನ ವ್ಯವಸ್ಥೆಯ ಮೇಲಿನ ಪ್ರಕರಣವಾಗಿದೆ. ಅದಾನಿ ಪ್ರಕರಣ ಏನಾಗುವುದೋ ಎಂದು ಯೋಚಿಸುತ್ತಾ ನಿಮಗೆ ಇಡೀ ರಾತ್ರಿ ನಿದ್ರೆ ಬರುವುದಿಲ್ಲ ಎಂಬುದು ಇಡೀ ದೇಶಕ್ಕೆ ತಿಳಿದಿದೆ.
ಮೋದಿ ಅವರೇ, ನಿಮ್ಮ ಸ್ನೇಹಿತರಾದ ಅನಿಲ್ ಅಂಬಾನಿ, ಅದಾನಿ ಮತ್ತು ನಿಮಗೆ ಯಾವುದು ಸರಿ ಎಂದು ಅನಿಸುತ್ತದೋ ಅದನ್ನು ನೀವು ಮಾಡಿ. ನಾವು ದೇಶವನ್ನು ರಕ್ಷಿಸುತ್ತೇವೆ, ನಾವು ರೈತರನ್ನು ರಕ್ಷಿಸುತ್ತೇವೆ, ನಾವು ಕಾರ್ಮಿಕರನ್ನು ರಕ್ಷಿಸುತ್ತೇವೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ರಕ್ಷಿಸುತ್ತೇವೆ ಮತ್ತು ದೇಶದ ಡೇಟಾವನ್ನು ರಕ್ಷಿಸುತ್ತೇವೆ.
ನಾವು ಸಂವಿಧಾನಕ್ಕಾಗಿ ಹೋರಾಡುತ್ತಿದ್ದೇವೆ, ಕಾಂಗ್ರೆಸ್ ಪಕ್ಷದ ಸಿಂಹಗಳೇ ಮತ್ತು ಕಾರ್ಯಕರ್ತರೇ, ನೀವು ಭಯಪಡುವ ಅಗತ್ಯವಿಲ್ಲ, ಒಂದು ಹೆಜ್ಜೆಯೂ ಹಿಂದೆ ಸರಿಯಬಾರದು. ಧನ್ಯವಾದಗಳು.
– ರಾಹುಲ್ ಗಾಂಧಿ, ಲೋಕಸಭೆ ವಿಪಕ್ಷ ನಾಯಕ


