ತಂದೆಯ ಮಾತಿನಂತೆ ವನವಾಸದ ಶಿಕ್ಷೆಯನ್ನು ಅನುಭವಿಸಿದ ಪಿತೃವಾಕ್ಯ ಪರಿಪಾಲಕ ಶ್ರೀರಾಮಚಂದ್ರ ಪ್ರತಿಷ್ಠಾಪನೆಯ ನಂತರವಾದರು ಹೆತ್ತವರನ್ನು ಆಶ್ರಮಗಳಿಗೆ ಸೇರಿಸುವ ಮನಸ್ಸುಗಳು ಬದಲಾಗಲಿ.
ಸಕಲರಿಗೂ ನ್ಯಾಯವನ್ನು ನೀಡಿದಂತಹ ಶ್ರೀರಾಮಚಂದ್ರ ಪ್ರತಿಷ್ಠಾಪನೆಯ ನಂತರ ಸಕಲ ಜೀವರಾಶಿಗಳನ್ನು, ಅದರಲ್ಲಿಯೂ ಎಲ್ಲ ಮಾನವ ಜೀವಿಗಳು ಒಂದೇ ಎಂಬ ಭಾವದಿಂದ ನೋಟದಲ್ಲಿ ಮತ್ತು ಊಟದಲ್ಲಿ ಭೇದ ಮಾಡದೆ ಸಮಾನತೆಯ ಭಾವದೊಂದಿಗೆ ಬದುಕುವಂತೆ ಹಲವರ ಮನಸ್ಸುಗಳು ಬದಲಾಗಲಿ.
ತನ್ನ ಸಹೋದರರ ಪ್ರೀತಿಸುತ್ತಾ, ಅವರನ್ನು ಸಮಾನತೆಯಿಂದ ಕಂಡಂತಹ ಸೋದರ ಭಾವವನ್ನ ಮೆರೆದಂತಹ ಶ್ರೀರಾಮರ ಪ್ರತಿಷ್ಠಾಪನೆಯ ನಂತರದ ಮನಸ್ಸುಗಳು ಬದಲಾಗಿ ಸಹೋದರ ಭಾವ ಮೂಡಲಿ.
ಸೀತಾಮಾತೆಯನ್ನು ಕಾಪಾಡುವ ಸಲುವಾಗಿ ರಾವಣನೊಂದಿಗೆ ಯುದ್ಧವನ್ನೇ ಮಾಡಿ, ತನ್ನ ಪತ್ನಿಯ ಗೌರವವನ್ನು ಕಾಯುವುದರ ಜೊತೆಗೆ ಮಹಿಳೆಯರನ್ನು ರಕ್ಷಿಸುವ ಸಂದೇಶವನ್ನು ಸಾರಿದ ಶ್ರೀರಾಮರ ಪ್ರತಿಷ್ಠಾಪನೆಯ ನಂತರ ಮಹಿಳೆಯರ ಮೇಲಿನ ದಬ್ಬಾಳಿಕೆ ದೌರ್ಜನ್ಯಗಳು ಕೊನೆಗೊಂಡು ರಾವಣ ಮನಸ್ಥಿತಿಗಳು ಬದಲಾಗಲಿ.
- ಕೆ.ಎಸ್.ನಾಗರಾಜ್, ಬೆಂಗಳೂರು




