ಬಳ್ಳಾರಿ: ಕುಡತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2024-25ನೇ ಸಾಲಿಗೆ ಡೇ-ನಲ್ಮ್ ಯೋಜನೆಯ ಉಪಘಟಕಗಳ ಅಡಿ ವ್ಯಕ್ತಿಗತ ಉದ್ದಿಮೆಶೀಲತೆ ಹಾಗೂ ಗುಂಪು ಚಟುವಟಿಕೆ ಕೈಗೊಳ್ಳಲು ಸ್ವ-ಸಹಾಯ ಗುಂಪುಗಳು ಮತ್ತು ಎಸ್ಹೆಚ್ಜಿ ಗುಂಪುಗಳಿಗೆ ಕ್ರೆಡಿಟ್ ಲಿಂಕೇಜ್ ಬ್ಯಾಂಕ್ಗಳಿಂದ ಸಾಲ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕುಡುತಿನಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
- ಪೆರಿಯಾರ್ ಹೋರಾಟ ಸ್ವಾಭಿಮಾನದ ಪ್ರತೀಕ: ಅಪ್ಸರ್ ಕೊಡ್ಲಿಪೇಟೆ
ಅರ್ಜಿ ಸಲ್ಲಿಸಲು ಜುಲೈ 06 ಕೊನೆಯ ದಿನವಾಗಿರುತ್ತದೆ.
ಬೇಕಾದ ದಾಖಲೆಗಳು:
1. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ
2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3. ವಿದ್ಯಾರ್ಹತೆಯ ಪ್ರಮಾಣ ಪತ್ರ
4. ಭಾವಚಿತ್ರ
5. ನಿರ್ವಹಿಸುತ್ತಿರುವ ಉದ್ಯೋಗದ ಛಾಯಚಿತ್ರ
6. ಬ್ಯಾಂಕ್ ಪಾಸ್ಪುಸ್ತಕ
7. ವಿಕಲಚೇತನರಿದ್ದಲ್ಲಿ, ವಿಕಲಚೇತನರ ಪ್ರಮಾಣ ಪತ್ರ ದಾಖಲೆಗಳನ್ನು ದ್ವಿ ಪ್ರತಿಯಲ್ಲಿ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ಕಚೇರಿಗೆ ಸಂಪರ್ಕಿಸಬಹುದು.




