ಕೊಪ್ಪಳ: ಕೇಂದ್ರ ಪುರಸ್ಕೃತ ದೀನದಯಾಳ್ ಅಂತ್ಯೋದಯ ಯೋಜನೆ (ಡೇ-ನಲ್ಮ್) ಯ ಸನ್ 2023-24ನೇ ಸಾಲಿನ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಕುಕನೂರು ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ವ್ಯಕ್ತಿಗತ ಉದ್ಯೋಗ ಹಾಗೂ ಗುಂಪು ಉದ್ದಿಮೆ ಸ್ಥಾಪಿಸಲು ಬಡ್ಡಿ ಸಹಾಯಧನದಡಿ ಸಾಲ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕಾಗಿ 4 ಜನ ಫಲಾನುಭವಿಗಳಿಗೆ (ಪ.ಜಾತಿ-01, ಅಲ್ಪಸಂಖ್ಯಾತರು-01, ಮಹಿಳೆ-01 ಇತರೆ-01 ಒಟ್ಟು 04), ಸ್ವಸಹಾಯ ಗುಂಪು ರಚನೆಗೆ 09, 4 ಸ್ವ ಸಹಾಯ ಗುಂಪುಗಳಿಗೆ (ಡೇ-ನಲ್ಮ್) ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ (ಕ್ರೆಡಿಟ್ ಲಿಂಕೇಜ್) ಗುರಿಯನ್ನು ನಿಗದಿಪಡಿಸಲಾಗಿದೆ.
18 ರಿಂದ 45 ವರ್ಷದೊಳಗಿನ ಅರ್ಹ ಫಲಾನುಭವಿಗಳು ಚಾಲ್ತಿ ವರ್ಷದ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಝೆರಾಕ್ಸ ಪ್ರತಿ ಹಾಗೂ ಇತ್ತೀಚಿನ 2 ಭಾವಚಿತ್ರ (ಪಾಸ್ ಪೋಟ್ ಸೈಜ್) ಗಳೊಂದಿಗೆ ದ್ವಿಪ್ರತಿಯಲ್ಲಿ ಕುಕನೂರು ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ನವೆಂಬರ್ 24 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪ.ಪಂ. ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




