ದಾವಣಗೆರೆ: ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ಅವರ ಶ್ರೇಯೋಭಿವೃದ್ಧಿ ಹಾಗೂ ಅವರ ವ್ಯಾಪಾರ, ವ್ಯವಹಾರ ಸುಧಾರಿಸುವ ನಿಟ್ಟಿನಲ್ಲಿ ಕಿರು ಸಾಲ, ಬಡ್ಡಿ ಸಹಾಯಧನ ಮತ್ತು ವಿವಿಧ ಭದ್ರತಾ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಆತ್ಮ ನಿರ್ಭರ್ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರು ಮೂರು ಹಂತಗಳಲ್ಲಿ ಸಾಲ ಮತ್ತು ಬಡ್ಡಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ರೂ.15 ಸಾವಿರ, ರೂ.25 ಸಾವಿರ ಮತ್ತು ರೂ.50 ಸಾವಿರ ರೂಪಾಯಿ ಕ್ರಮವಾಗಿ ಮೂರು ಹಂತಗಳಲ್ಲಿ ಬ್ಯಾಂಕ್ಗೂಳ ಮೂಲಕ ಪಡೆಯಬಹುದಾಗಿದೆ. ಆಸಕ್ತ ಬೀದಿ ಬದಿ ವ್ಯಾಪಾರಿಗಳು ವೆಬ್ಸೈಲಟ್ https://pmsvanidhi.mohua.gov.in/ ಈಗಾಗಲೇ ಖಾತೆ ಹೊಂದಿರುವ ಬ್ಯಾಂಕ್ಗಗಳನ್ನು ಆಯ್ಕೆ ಮಾಡಿಕೊಂಡು ಕೂಡಲೇ ಅರ್ಜಿ ಸಲ್ಲಿಸಲು ಸೂಚಿಸಿದೆ.
ಅಷ್ಟೇ ಅಲ್ಲದೇ ಮೊದಲ ಎರಡು ಕಂತುಗಳಲ್ಲಿ ಸಾಲ ಪಡೆದು ನಿಯಮಿತವಾಗಿ ಮರುಪಾವತಿ ಮಾಡಿದ ಫಲಾನುಭವಿಗಳಿಗೆ ರೂ.30 ಸಾವಿರದವರೆಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸಲಾಗುತ್ತದೆ. ಆನ್ಲೈ0ನ್ ಅಥವಾ ಡಿಜಿಟಲ್ ವ್ಯಾಪಾರ ನಡೆಸುವ ಚಿಲ್ಲರೆ ವಹಿವಾಟುಗಳಿಗೆ ರೂ.1200 ಮತ್ತು ಸಗಟು ವ್ಯಾಪಾರಿಗಳಿಗೆ ರೂ.400 ಕ್ಯಾಶ್ ಬ್ಯಾಕ್ ಸೌಲಭ್ಯ ಒದಗಿಸಲಾಗಿದೆ.
ಅರ್ಹ ಬೀದಿ ಬದಿ ವ್ಯಾಪಾರಸ್ಥರಿಗೆ ಪಿಎಂ ಸುರಕ್ಷಾ, ಪಿಎಂ ಜೀವನ್ ಜ್ಯೋತಿ ಭೀಮಾ ಯೋಜನೆ, ಪಿಎಂ ಶ್ರಮ ಯೋಗಿ ಮಾನಧನ್ ಯೋಜನೆ, ಒನ್ ನೇಷನ್, ಒನ್ ರೇಷನ್ ಕಾರ್ಡ್ ಸೇರಿದಂತೆ ವಿವಿಧ 8 ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಯ ಅರ್ಹ ಬೀದಿ ಬದಿ ವ್ಯಾಪಾರಸ್ಥರ ಕಾರ್ಡ್ ಹೊಂದದೆ ಇರುವವರು, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ, ಹರಿಹರ ನಗರಸಭೆಯಲ್ಲಿ, ಮಲೆಬೆನ್ನೂರು ಚನ್ನಗಿರಿ ಮತ್ತು ಹೊನ್ನಾಳಿ ಪುರಸಭೆ ಹಾಗೂ ಜಗಳೂರು ನ್ಯಾಮತಿ ತಾಲ್ಲೂಕಿನ ಪಟ್ಟಣ ಪಂಚಾಯತಿಗಳಲ್ಲಿ ಕಾರ್ಡ್ ಅಥವಾ ಪ್ರಮಾಣ ಪತ್ರ ಪಡೆಯಲು ಅವಕಾಶ ಕಲ್ಪಿಸಿದೆ.
ಅರ್ಹ ಬೀದಿ ಬದಿ ವ್ಯಾಪಾರಿ ಫಲಾನುಭವಿಗಳು ಪಿಎಂ ಸ್ವ-ನಿಧಿ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬಹುದು.




