ಬಳ್ಳಾರಿ: ಕುರುಗೋಡು ಪುರಸಭೆ ವತಿಯಿಂದ 2024-25ನೇ ಸಾಲಿಗೆ ಡೇ-ನಲ್ಮ್ ಯೋಜನೆಯ ಉಪಘಟಕಗಳ ಅಡಿ ವ್ಯಕ್ತಿಗತ ಉದ್ದಿಮೆಶೀಲತೆ ಹಾಗೂ ಗುಂಪು ಚಟುವಟಿಕೆ ಕೈಗೊಳ್ಳಲು ಸ್ವ-ಸಹಾಯ ಗುಂಪುಗಳು ಮತ್ತು ಎಸ್ಹೆಚ್ಜಿ ಗುಂಪುಗಳಿಗೆ ಕ್ರೆಡಿಟ್ ಲಿಂಕೇಜ್ ಬ್ಯಾಂಕ್ಗಳಿಂದ ಸಾಲ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
- ಟಿಪ್ಪು ಸುಲ್ತಾನ್ ಶಹೀದ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ
- ಕನ್ನಡ ಪತ್ರಿಕೋದ್ಯಮಕ್ಕೆ ಮತ್ತೊಂದು ಹೊಸ ಗರಿ
- ರಾಜಕೀಯ, ಸಾಮಾಜಿಕ, ಆರ್ಥಿಕ ಬದುಕು ಕಟ್ಟಿಕೊಟ್ಟ ಕಾಂಗ್ರೆಸ್ ಹಿಂದೂ ವಿರೋಧಿ!
- ಪುಟ್ಟ ‘ಒಡೆಯ’ನನ್ನು ಪರಿಚಯಿಸಿದ ಡಾಲಿ ಧನಂಜಯ
- ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಹೊರಗಿಡಬೇಕು: ಆರ್ ಅಶೋಕ್
ಅರ್ಜಿ ಸಲ್ಲಿಸಲು ಜುಲೈ 06 ಕೊನೆಯ ದಿನವಾಗಿರುತ್ತದೆ.
ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ\
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿದ್ಯಾರ್ಹತೆಯ ಪ್ರಮಾಣ ಪತ್ರ
- ಭಾವಚಿತ್ರ
- ನಿರ್ವಹಿಸುತ್ತಿರುವ ಉದ್ಯೋಗದ ಛಾಯಚಿತ್ರ
- ಬ್ಯಾಂಕ್ ಪಾಸ್ಪುಸ್ತಕ
- ವಿಕಲಚೇತನರಿದ್ದಲ್ಲಿ, ವಿಕಲಚೇತನರ ಪ್ರಮಾಣ ಪತ್ರ ದಾಖಲೆಗಳನ್ನು ದ್ವಿ ಪ್ರತಿಯಲ್ಲಿ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕುರುಗೋಡು ಪುರಸಭೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದು.




