ದುಡಿಯುವ ಸಮಾಜವನ್ನು ಚಪ್ಪಲಿಯಂತೆ ನೋಡುತ್ತಿದ್ದಾರೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ 10ನೇ ರಾಜ್ಯ ಮಟ್ಟದ ಮಹಾಧಿವೇಶನ
ಬೆಂಗಳೂರು: ನಯನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕನ್ನಡ ಕ್ರಿಯಾ ಸಮಿತಿ 10ನೇ ರಾಜ್ಯ ಮಟ್ಟದ ಮಹಾಧಿವೇಶನ ನಡೆಯಿತು.
ನಿವೃತ್ತ ಅಧಿಕಾರಿ ಮನು ಬಳಿಗಾರ್ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಸದಸ್ಯರು ಸ್ವಾಭಿಮಾನಿಗಳು, ಹೋರಾಟಗಾರರು. ಕನ್ನಡ ಪರ ಹೋರಾಟದಲ್ಲಿ ಮಂಚೂಣಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ ತೊಡಗಿಸಿಕೊಂಡಿದೆ. ಸಮಾಜ ಸೇವೆಯಲ್ಲಿ ಮತ್ತು ಜನ ಸೇವೆಯಲ್ಲಿ ಪ್ರಾಂಜಲ ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಕನ್ನಡ ತಾಯಿ ಸೇವೆ ಮಾಡುತ್ತಿರುವ ಕ.ರ.ರ.ಸಾ.ಸ. ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸಮಸ್ಯೆಗಳಿಗೆ ಸರ್ಕಾರ ಜೊತೆಯಲ್ಲಿ ಚರ್ಚಿಸಲಾಗುವುದು ಎಂದರು.
ಡಾ.ಮಲ್ಲಿಕಾ ಘಂಟಿ ಮಾತನಾಡಿ, ಕೆ.ಎಸ್.ಆರ್.ಟಿ.ಸಿ.ಯಲ್ಲಿ ನಾನು ನೌಕರಳಾಗಿ ಕೆಲಸ ಮಾಡುತ್ತಿದ್ದೆ. ಅಂದು ಹೋರಾಟಕ್ಕೆ ಸರ್ಕಾರ ಮಣಿಯುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಮುಖ್ಯಮಂತ್ರಿಗಳು ಸಮಾಜ ಮೇಲೆ ಬೆಳಕು ಚೆಲ್ಲುವ ಮಾತುಗಳನ್ನು ಹೇಳಿ ಕೇಸ್ ದಾಖಲಿಸುವುದಿಲ್ಲ ಎಂದು ಹೇಳಿದ್ದಾರೆ. ಅದರಿಂದ ನಾನು ಮಾತನಾಡುತ್ತಿದ್ದೇನೆ. ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕು ಎಂದರು.
ನನ್ನ ಜೊತೆಯಲ್ಲಿ ನನ್ನ ಸಮಾಜ ಇರಬೇಕು ಎಂಬ ಭಾವನೆ ನನ್ನದು. ದುಡಿಯುವ ಸಮಾಜವನ್ನು ಚಪ್ಪಲಿ ರೀತಿಯಲ್ಲಿ ನೋಡುತ್ತಿದ್ದಾರೆ. ಜ್ಯೋತಿ ಕೆಲಸವೆಂದರೆ ಜ್ಞಾನ ಸಂಕೇತ ಅದರಿಂದ ನಾನು ದೀಪ ಬೆಳಗಿಸುವ ಸಮಯದಲ್ಲಿ ನಾನು ಚಪ್ಪಲಿ ಧರಿಸಿಕೊಂಡು ದೀಪ ಬೆಳಗಿಸುತ್ತೇನೆ. ಇದನ್ನು ನೋಡಿದರೆ ಉದ್ಧಟತನ ಎಂದು ಹೇಳುತ್ತಾರೆ. ಆದರೆ ಶೋಷಿತರ ಪರ ನಾನು ಧ್ವನಿಯಾಗಿ ಧರಿಸುತ್ತೇನೆ ಯಾವುದೇ ದುರಂಹಾರ ನಾನಗಿಲ್ಲ ಎಂದರು.
ನಾಮಫಲಕಗಳಲ್ಲಿ ಶೇಕಡ 60ರಷ್ಟು ಹೆಸರು ಕನ್ನಡದಲ್ಲಿ ಬರೆಯಬೇಕು ಎಂದು ಸರ್ಕಾರ ಆದೇಶ ಮಾಡಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು. ಕನ್ನಡ ನೆಲದಲ್ಲಿ ನೆಲೆಸಿರುವ ಹೊರಭಾಷಿಕರು ಕನ್ನಡ ಭಾಷೆಯನ್ನು ಕಲಿಯಬೇಕು. ಕನ್ನಡವೆ ನಮ್ಮ ತಾಯಿ, ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದರು.
ಕನ್ನಡಿಗರಿಗೆ ರಾಜ್ಯದಲ್ಲಿ ಸರಿಸಮಾನವಾಗಿ ಬದುಕುವ ಅವಕಾಶ ಸಿಗಬೇಕು. ಕನ್ನಡ ಬಾಷೆಯ ಮೇಲೆ ಹಿಂದಿ ಹೇರಿಕೆ ನಡೆಯುತ್ತಿದೆ. ಕನ್ನಡ ಭಾಷೆಯಲ್ಲಿ ತಮ್ಮ ಜ್ಞಾನ ಬೆಳಸಿಕೊಳ್ಳಿ, ಕನ್ನಡ ಕಂಪನ್ನ ಪಸರಿಸಲು ಇಂಗ್ಲೀಷ್ ಭಾಷೆ ಕಲಿಯಿರಿ. ಸಾಹಿತಿ ಸಿದ್ದಯ್ಯ ಪುರಾಣಿಕ ಕನ್ನಡ ಬಳಸದ, ಬೆಳಸದ ರಾಜ್ಯ ಸರ್ಕಾರ, ವಿಶ್ವವಿದ್ಯಾಲಯ ಮತ್ತು ನ್ಯಾಯಲಯಗಳಿಗೆ ಧಿಕ್ಕಾರ ಎಂದು ಹೇಳಿದ್ದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಜೇಶ್ ಆನೇಕಲ್ ರವರಿಂದ ಸುಗಮ ಸಂಗೀತ ಏರ್ಪಡಿಸಲಾಗಿತ್ತು. ಕ.ರಾ.ರ.ಸಾ.ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪ್ರಭು ಸ್ವಾಮಿ, ಕನ್ನಡ ಕ್ರಿಯಾ ಸಮಿತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಹೆಚ್.ಕೆ ಸುರೇಶ್, ಪ್ರಧಾನ ಕಾರ್ಯದರ್ಶಿ ಎಂ.ಸತ್ಯನಾರಾಯಣ್, ಖಜಾಂಚಿ ರಮೇಶ್ ವಿ. ಮತ್ತು ಕರ್ನಾಟಕ ರಾಜ್ಯ ಸಾರಿಗೆ ನಿಗಮ ಸಮಿತಿಯ ಅಧ್ಯಕ್ಷ ಹುಸೇನ್ ಕೆ.ಎಸ್.ಎಂ , ಪ್ರಧಾನ ಕಾರ್ಯದರ್ಶಿ ಆರ್.ಟಿ.ಶಾಂತರಾಜು, ಖಜಾಂಚಿ ಟಿ.ಎಸ್.ರಂಗೇಗೌಡ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಮಿತಿಯ ಅಧ್ಯಕ್ಷ ಗಂಗಾಧರ್ ಕಮಲದಿನ್ನಿ, ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ್ಯ ಮಟ್ಟಿ, ಖಜಾಂಜಿ ಅಮೃತೇಶ್ ಹೊಸಹಳ್ಳಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಮಿತಿಯ ಅಧ್ಯಕ್ಷ ರೆಹಮಾನ್ ಮಸ್ಕಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಹೊಸಮಠ, ಖಜಾಂಚಿ ರಘುನಾಥ್ ಜಾಯ್ ಮೊದಲಾದವರು ಹಾಜರಿದ್ದರು.



