ಗಾಂಧಿನಗರದಲ್ಲಿ ಜೆಡಿಎಸ್ ಪಕ್ಷ ಕಾರ್ಯಕರ್ತರ ನೋಂದಣಿ ಕಾರ್ಯಕ್ರಮ

1 year ago

ಬೆಂಗಳೂರು: ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ವಿಧಾನಪರಿಷತ್ ಸದಸ್ಯ, ನಗರ ಜಿಲ್ಲಾ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆರ್.ಎಲ್.ಎನ್.ಮೂರ್ತಿ, ಮಾಜಿ ಶಾಸಕ ಕೆ.ಎ.ತಿಪ್ಪೇಸ್ವಾಮಿ, ಉಸ್ತುವಾರಿ ಜಗದೀಶ್ ಗೌಡ, ಕಾರ್ಯಾಧ್ಯಕ್ಷರುಗಳಾದ ಕೆ.ಮಂಜು, ಕೆ.ವಿ.ನಾರಾಯಣಸ್ವಾಮಿ, ಮಹಾಪ್ರಧಾನ ಕಾರ್ಯದರ್ಶಿ ಎಸ್.ರಮೇಶ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ನಾಗೇಶ್ವರರಾವ್ .ವಿ. ಮತ್ತು ಮಹಿಳಾ ವಿಭಾಗದ ಅಧ್ಯಕ್ಷರಾದ ಶೈಲ ಸಂತೋಷ್ ರಾವ್ ಭಾಗವಹಿಸಿದ್ದರು.

ಇದೇ ವೇಳೆ ಮಾತನಾಡಿದ ಟಿ.ಎ.ಶರವಣ, 2018ರ ಚುನಾವಣೆಯಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ಬಂದಿದ್ದೀವೆ. ನಮ್ಮ ಪಕ್ಷಕ್ಕೆ ಜನ ಓಟ್ ಕೊಡಲು ಮುಂದೆ ಬರುತ್ತಾರೆ ಅವರ ಬಳಿ ನಾವು ಹೋಗಬೇಕು ಎಂದರು.

ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಮೂರು ವಾರ್ಡ್ ಗಳಲ್ಲಿ ಜಯಭೇರಿ ಬಾರಿಸಲು ಬೂತ್ ಗಳಲ್ಲಿ ಬೂತ್ ಕಮಿಟಿಗಳನ್ನು ಭದ್ರ ಮಾಡಿಕೊಳ್ಳಬೇಕು. ಚುನಾವಣೆ ಬಂದಾಗ ಹೋಗುವ ಬದಲು ಪ್ರತಿ ದಿನ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬೆಂಗಳೂರು ನಗರ 5 ವಿಭಾಗಗಳಾಗಿ ಕಾರ್ಪೋರೇಶನ್ ರಚನೆಯಾಗಲಿದೆ ಎಂದರು.

ಈ ಹಿಂದೆ ನಮ್ಮ ಪಕ್ಷದಲ್ಲಿ ಹಲವಾರು ಜನರಿಗೆ ಅಧಿಕಾರದ ಅವಕಾಶ ಸಿಕ್ಕಿದೆ, ಸಾಮಾನ್ಯ ಕಾರ್ಯಕರ್ತರಿಗೆ ಜೆಡಿಎಸ್ ಪಕ್ಷದಲ್ಲಿ ಅಧಿಕಾರ ಸಿಗಲಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿರವರ ನೇತೃತ್ವದಲ್ಲಿ ಸಂಘಟನೆ ಮಾಡಲಾಗುವುದು ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ. ಆಹಾರ ಪದಾರ್ಥ ಮತ್ತು ಮದ್ಯಪಾನ ಎಲ್ಲದರ ಬೆಲೆ ಹೆಚ್ಚಳವಾಗಿದೆ. ಅಭಿವೃದ್ದಿಯಾಗುತ್ತ ಇಲ್ಲ. ಕಾಂಗ್ರೆಸ್ ಪಕ್ಷದ ಶಾಸಕರೆ ಬಂಡಾಯವೆದ್ದಿದಾರೆ. ಭ್ರಷ್ಟ ಕಾಂಗ್ರೆಸ್ ಪಕ್ಷದ ವಿರುದ್ಧ ಸಂಘಟಿತ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಹೆಚ್.ಎಂ.ರಮೇಶ್ ಗೌಡ ಮಾತನಾಡಿ, ನಿಷ್ಠಾವಂತ ಕಾರ್ಯಕರ್ತರು ಜೆಡಿಎಸ್ ಪಕ್ಷದ ಶಕ್ತಿ ಎಂದು ಕುಮಾರಣ್ಣರವರು ಹೇಳಿದ್ದಾರೆ. ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರದ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿದೆ. ಆದರೆ ಸಂಘಟನೆಯಲ್ಲಿ ಸ್ವಲ್ಪ ಹಿಂದುಳಿದಿದ್ದೇವೆ ಅದನ್ನ ಸರಿಪಡಿಸಬೇಕು ಎಂದರು.

ಜೆಡಿಎಸ್ ಪಕ್ಷ ಬಿಟ್ಟು ಹೋದವರನ್ನು ಮೊದಲ ವಾರ ಚನ್ನಾಗಿ ನೋಡಿಕೊಳ್ಳುತ್ತಾರೆ. ನಂತರ ಅವರನ್ನು ಯಾರೂ ಕೇರ್ ಮಾಡುವುದಿಲ್ಲ. ಅದರೆ ಜೆಡಿಎಸ್ ಪಕ್ಷ ಕಾರ್ಯಕರ್ತರ ಪಕ್ಷ. ಇಲ್ಲಿ ಎಲ್ಲರಿಗೂ ಗೌರವ ಸಿಗುತ್ತದೆ ಎಂದರು.

ಹೆಚ್.ಡಿ.ಕುಮಾರಸ್ವಾಮಿರವರು ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿ ಮಾಡಲು ಹಲವಾರು ಕಂಪನಿ ಸ್ಥಾಪನೆಗೆ ಕ್ರಮ ಮತ್ತು ಉದ್ಯೋಗ ಮೇಳ ಆರಂಭಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವ, ಹೆಚ್.ಡಿ.ಕುಮಾರಣ್ಣರವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಮಾರ್ಚ್ ನಂತರ ರಾಜ್ಯಾದ್ಯಂತ ಪ್ರಚಾರ ಕಾರ್ಯ ದೇವೇಗೌಡರ ನೇತೃತ್ವದಲ್ಲಿ ಜರುಗಲಿದೆ ಎಂದರು.

ಜೆಡಿಎಸ್ ಪಕ್ಷ ಸಂಘಟನೆಗಾಗಿ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ಪ್ರತಿ ಮನೆಗಳಿಗೆ ಭೇಟಿ ನೀಡಿ ಜೆಡಿಎಸ್ ಪಕ್ಷದ ಸಾಧನೆಗಳು, ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಣ್ಣರವರ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ತಿಳಿಸಿ ಸದಸ್ಯತ್ವ ಮಾಡಿ ಎಂದು ಮನವಿ ಮಾಡಿದರು.

ಆರ್.ಎಲ್.ಎನ್.ಮೂರ್ತಿ ಮಾತನಾಡಿ, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಉತ್ತಮ ಸಂಘಟನೆ ಇದೆ. ರಾಷ್ಟ್ರೀಯ ಪಕ್ಷ ಬಿಜೆಪಿ ಜೊತೆಯಲ್ಲಿ ಸಹಕಾರ ನೀಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳಲಿ ಎಂದರು.

ಚುನಾವಣೆ ಯಾವಗ ಬೇಕಾದರು ಬರಲಿ. ನಮ್ಮ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಜನರನ್ನು ಭೇಟಿ ಮಾಡಿ ಸಂಘಟನೆ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಭಿವೃದ್ದಿ ಕೆಲಸ ಮಾಡುತ್ತಿಲ್ಲ, ಟೀಕೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದರು.

ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. ನಗರದ  ಅಭಿವೃದ್ದಿಗೆ ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿರವರ ಕೊಡುಗೆ ಇದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ ಗಳಲ್ಲಿ ಜೆಡಿಎಸ್ ಪಕ್ಷದ ನೋಂದಣಿ ಕಾರ್ಯ ಮಾಡಿ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.

Leave a Reply