ಸಚಿವ ದಿನೇಶ್ ಗುಂಡೂರಾವ್ ರವರ ಮಾರ್ಗದರ್ಶನ
ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ದತ್ತಾತ್ರೇಯ ದೇವಸ್ಥಾನ ವಾರ್ಡ್ ಕಛೇರಿಯಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪಕ್ಷದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕೆ ಆಸ್ತಿ ಖಾತೆ ನೋಂದಾಣಿ ಇ-ಖಾತಾ ಶಿಬಿರ ಆಯೋಜಿಸಿದ್ದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಗಾಂಧಿನಗರ ವಿಧಾನಸಭಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸರವಣನ್, ಬಿಬಿಎಂಪಿ ಮಾಜಿ ಸದಸ್ಯ ಸತ್ಯನಾರಾಯಣ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಶೇಷಾದ್ರೀ, ಜಿ.ಗಿರೀಶ್, ಲಕ್ಷ್ಮಿಕಾಂತ್, ಅನಿಲ್ ಕುಮಾರ್, ಕಿಲಾರಿರೋಡ್ ಮಧು, ಗಾಂಧಿನಗರ ವಿಧಾನಸಭೆ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್, ಗಾಂಧಿನಗರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದರ್ಶನ್, ದತ್ತಾತ್ರೇಯ ದೇವಸ್ಥಾನ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಂದ್ರ ಇ-ಖಾತಾ ಶಿಬಿರಕ್ಕೆ ಚಾಲನೆ ನೀಡಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ರವರ ಮಾರ್ಗದರ್ಶನದಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಜನರಿಗೆ ತಮ್ಮ ಆಸ್ತಿ ಇ-ಖಾತಾ ಮಾಡಿಕೊಳ್ಳಲು ಬೆಂಗಳೂರು ಓನ್ ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕ್ಷೇತ್ರದಲ್ಲಿ ಬಡವರು, ಮಧ್ಯಮವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಅವರು ಬೇರೆ ಕಡೆ ತೆರಳಿ ಇ-ಖಾತಾ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಪ್ರತಿ ವಾರ್ಡ್ ನಲ್ಲಿ ಇ-ಖಾತಾ ಅಭಿಯಾನ ಶಿಬಿರ ಆಯೋಜಿಸಲಾಗಿದೆ.
ಇ-ಖಾತಾಗೆ ಬೇಕಾದ ದಾಖಲೆಗಳಾದ ನೋಂದಾಯಿತ ಆಸ್ತಿ ಪತ್ರ, ಆಸ್ತಿ ತೆರಿಗೆ ರಸೀದಿ, ಬೆಸ್ಕಾಂ ಮೀಟರ್ ಸಂಖ್ಯೆ, ಆಸ್ತಿಯ ಜಿಪಿಎಸ್ ಮತ್ತು ಪೋಟೋ, ಇ.ಸಿ. ಮತ್ತು ಖಾತಾ ತಂದರೆ ಸಾಕು ಇ-ಖಾತಾ ಮಾಡಿಕೊಡಲಾಗುವುದು.









