ಬೆಂಗಳೂರು: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಸಚಿವರಿಗೆ ಅಪಪ್ರಚಾರ ಮಾಡುವ ಟಾಸ್ಕ್ ಕೊಟ್ಟಂತೆ ಕಾಣುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಸಿ ಟಿ ರವಿ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿ ಟಿ ರವಿ, ಕಾಂಗ್ರೆಸ್‌ನವರು ಸಿಂಧೂರ ಕಾರ್ಯಾಚರಣೆ ಬಗ್ಗೆ ಅಪಸ್ವರದ ಮಾತನಾಡುತ್ತಿದ್ದಾರೆ. ಯಾಕೆ ಕದನ ನಿಲ್ಲಿಸಿದರು ಎಂದು ಪ್ರಶ್ನಿಸುತ್ತಿದ್ದಾರೆ ಎಂದರು.
ಕೆಲವರು ಕೇವಲ ನಾಲ್ಕು ವಿಮಾನ ಹಾರಿಸಿದರು ಎನ್ನುತ್ತಿದ್ದಾರೆ. ಸಚಿವರಾದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ದಿನೇಶ್, ಶಾಸಕ ಕೊತ್ತೂರು ಮಂಜುನಾಥ್ ಇವರೆಲ್ಲರಿಗೆ ಆಪರೇಷನ್ ಸಿಂದೂರ್ ಬಗ್ಗೆ ಅಪಪ್ರಚಾರ ಮಾಡುವ ಟಾಸ್ಕ್ ಕೊಟ್ಟಂತೆ ಕಾಣುತ್ತಿದೆ ಎಂದರು.
ಕಾಂಗ್ರೆಸ್‌ನವರಲ್ಲೇ ಸಿಂಧೂರ ಬಗ್ಗೆ ದ್ವಂದ್ವ ಕಾಣುತ್ತಿದೆ. ದೇಶವಿಡೀ ಯುದ್ಧ ಮಾಡಬೇಕು ಎಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ಬೇಡ ಎಂದರು. ನಂತರ ಸಿದ್ದರಾಮಯ್ಯ ಹಣೆ ಮೇಲೆ ದೊಡ್ಡ ಕುಂಕುಮ. ಹಾಕಿಕೊಂಡು ಸುದ್ದಿಗೋಷ್ಠಿ ಮಾಡಿ ಸೈನಿಕರನ್ನು ಶ್ಲಾಘಿಸಿದರು ಎಂದರು.
ಕಾಂಗ್ರೆಸ್‌ನವರಿಗೆ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಅನಿಸಿರಲಿಲ್ಲ. ಈಗ ಅನಿಸುತ್ತಿರುವುದರ ಹಿಂದಿನ ಕಾರಣವೇನು? ಎಂದು ಕೇಳಿದರು.
ಭಯೋತ್ಪಾದನೆಯ ಮೂಲ ಡಿಎನ್‌ನಲ್ಲೇ ಇದೆ. ಆ ಡಿಎನ್ಎ ಕಿತ್ತು ಹಾಕಬೇಕು. ಇಥಿಯೋಪಿಯಾ, ಸೂಡಾನ್, ಹಮಾಸ್ ಭಯೋತ್ಪಾದನೆ, ಆಫ್ಘಾನಿಸ್ತಾನ, ಇರಾಕ್, ಇರಾನ್, ಟ್ವಿನ್ ಟವರ್ ಸ್ಫೋಟ ಇದಕ್ಕೆಲ್ಲ ಯಾವ ಭಯೋತ್ಪಾದನೆಯ ಡಿಎನ್ಎ ಕಾರಣ? ಎಂದು ಪ್ರಶ್ನಿಸಿದರು.




