“ಸುಳ್ಳಿಗೆ ಪ್ರಚಾರದ ಹುಚ್ಚಿರುತ್ತದೆ ಆದರೆ ಸತ್ಯಕ್ಕೆ ಮಾತ್ರ ಶಕ್ತಿ ಹೆಚ್ಚಿರುತ್ತೆ” ಅನ್ನೋದಕ್ಕೆ “ಆಪರೇಷನ್ ಸಿಂಧೂರ” ಬಗ್ಗೆ ಹೊರಬೀಳುತ್ತಿರುವ ಘಟನೆಗಳೇ ಸಾಕ್ಷಿ. ಪಾಕಿಸ್ತಾನಿ ಉಗ್ರರನ್ನ ಹುಟ್ಟಗಡಿಸಿದ ನಮ್ಮ ಸೈನ್ಯದ ಪರಾಕ್ರಮದ ಬಗ್ಗೆ ಹಾಗೂ ಆಪರೇಷನ್ ಸಿಂಧೂರದ ಯಶಸ್ಸಿನ ಬಗ್ಗೆ ದೇಶ ಹೆಮ್ಮೆ ಪಟ್ಟಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕಾಂಗ್ರೆಸ್ ಪಕ್ಷ ಹಾಗೂ ನಮ್ಮ ನಾಯಕರು, ವಿರೋಧ ಪಕ್ಷದ ನಾಯಕರಾದ ಶ್ರೀ Rahul Gandhi ಅವರು ಸೇನಾಪಡೆಯ ಸಾಹಸ ಹಾಗೂ ದಿಟ್ಟತನವನ್ನು ಪ್ರಶಂಸಿಸುತ್ತಲೇ, ಸೈನ್ಯಕ್ಕಾದ ಹಾನಿ ಹಾಗೂ ನಷ್ಟದ ಬಗ್ಗೆ ದೇಶದ ಜನರೆದುರು ವಾಸ್ತವ ತೆರೆದಿಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಸತ್ಯವನ್ನು ಮರೆಮಾಚುವ ಉದ್ದೇಶದಿಂದ ಮೋದಿ ಸರ್ಕಾರ ಶ್ರೀ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಉತ್ತರಿಸದೆ, ಮೊಂಡುವಾದ ಮಾಡುತ್ತಾ, ಹೀಯಾಳಿಸುತ್ತಾ, ನಿಂದಿಸುತ್ತಾ, ಕಾಲ ಹರಣ ಮಾಡಿತು.
ದೇಶದ ರಕ್ಷಣಾಪಡೆಗಳ ಮುಖ್ಯಸ್ಥರಾದ ಅನಿಲ್ ಚೌಹಾಣ್ ಅವರೇ ಈಗ ದೇಶದ ಎದುರು ವಾಸ್ತವನ್ನ ಒಪ್ಪಿಕೊಂಡಿದ್ದಾರೆ. ಯುದ್ದ ವಿಮಾನಗಳನ್ನ ಕಳೆದುಕೊಂಡಿರುವ ಸತ್ಯವೂ ಸೇರಿದಂತೆ “ಆಪರೇಷನ್ ಸಿಂಧೂರ”ದ ಸಮಯದಲ್ಲಿ ಆಗಿರುವ ಲೋಪಗಳ ಬಗ್ಗೆಯೂ ಮಾತಾಡಿದ್ದಾರೆ. ಆದರೆ ಸುಳ್ಳು ಪ್ರಚಾರವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿರುವ ಪ್ರಧಾನಿ Narendra Modi ಹಾಗೂ ರಕ್ಷಣಾ ಸಚಿವ Rajnath Singh ಅವರು ಮೌನವಹಿಸಿದ್ದು ಯಾಕೆ?
ದೇಶಕ್ಕೆ ಈಗಲಾದರೂ ಉತ್ತರದಾಯಿಗಳಾಗಿ, ಆಪರೇಷನ್ ಸಿಂಧೂರದ ಸ್ಪಷ್ಟ ಚಿತ್ರಣವನ್ನು ತೆರೆದಿಡಿ.
– ಬಿ ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ



