ಮಂಡ್ಯದ ಗೌಡರನ್ನು ಖಳನಾಯಕರನ್ನಾಗಿ ಮಾಡಲು ಮುಂದಾದ ಮತೀಯವಾದಿಗಳು ಮುಂದೆ ದಂಡ ಕಟ್ಟಲೇ ಬೇಕಾಗುತ್ತದೆ: ಮೊಗಳ್ಳಿ ಗಣೇಶ್

3 years ago

ಟಿಪ್ಪು ಸುಲ್ತಾನ್ ಬಗ್ಗೆ ಏನೇ ಅಪಪ್ರಚಾರ ಮಾಡಿದರು ಮಂಡ್ಯದ ಗೌಡರು ಟಿಪ್ಪು ಬಗೆಗಿನ ಪ್ರೀತಿಯನ್ನು ಬಿಟ್ಟು ಕೊಡುವುದಿಲ್ಲ. ಗೌಡರು ಮತೀಯವಾದಿಗಳಾದ ಬಗ್ಗೆ ಚರಿತ್ರೆಯಲ್ಲಿ ಎಲ್ಲೂ ದಾಖಲೆಗಳಿಲ್ಲ.ಈಗ ಕೆಲ ಮೂರ್ಖರ ಮೂಲಕ ಒಂದು ಜನ ಸಮುದಾಯದ ಅನನ್ಯತೆಯನ್ನೆ ಖೂಳಗೊಳಿಸುವ ವಕ್ಕಲಿಗರ ಚಹರೆಯನ್ನೆ ವಿರೂಪಗೊಳಿಸುವ ವಿದ್ವಂಸಕ ವಿಕ್ರುತ ಪ್ರಚಾರವನ್ನು ಮಾಡಲಾಗುತ್ತಿದೆ.

ಇಂತದೇ ಅಪಪ್ರಚಾರದ ಕ್ರುತ್ಯವನ್ನು
ಬಸವಣ್ಣನ ಕೊಂದವರು ವೀರಶೈವ ರ
ರೇವಣಸಿದ್ದೇಶ ಹಾಗು ಮಾದಿಗರ
ಮಾರಯ್ಯ ಎಂದು ಠರಾವು ಹೊರಡಿಸಿದರೆ ಏನು ಮಾಡುವುದು….

ಇದು ಜನಾಂಗೀಯ ದ್ವೇಷದ ಹಳೆಯ ಖಾಯಿಲೆ
ಇದರಿಂದಾಗಿ ರೋಗಿಗಿಂತ ರೋಗಕ್ಕೆ ಮದ್ದು ನೀಡುವೆ ಎಂಬುವವನೆ ಹೆಚ್ಚಿನ ಅಪಾಯಕಾರಿ ಹಾಗೆಯೇ ಅವನೇ ಆ ರೋಗಕ್ಕೆ ಬಲಿ ಆಗುವವನು.

ಟಿಪ್ಪು ಬಗ್ಗೆ ಭಿನ್ನಾಭಿಪ್ರಾಯ ಇರಲಿ,ತಪ್ಪಿಲ್ಲ. ಆ ಕಾಲದ ರಾಜಶಾಹಿಯಲ್ಲಿ ಟಿಪ್ಪು ಆ ಭಾಗದ ವಕ್ಕಲಿಗರನ್ನುವಿಶೇಷವಾಗಿ ಭೂಮಿಯ ಕಾಯಕಕ್ಕೆ ತೊಡಗಿಸಿದ. ಒಂದು ಕಾಲಕ್ಕೆ ಪಶುಪಾಲಕರಾಗಿದ್ದವರನ್ನು ವಕ್ಕಲುತನಕ್ಕೆ ಅಣಿ ಮಾಡಿಸಿದ್ದರಲ್ಲಿ ಅನೇಕ ರಾಜರ ಪ್ರಯತ್ನ ಇತ್ತು.ಟಿಪ್ಪು ಪಶುಪಾಲನೆಯ ಜೊತೆಗೆ ಭೂಮಿಯ ಯಜಮಾನಿಕೆಗೆ ಗೌಡರಿಗೆ ಅವಕಾಶ ಮಾಡಿಕೊಟ್ಟ.ಇದು ಸಾದಾರಣ ಸಂಗತಿ ಅಲ್ಲ.ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಗೌಡರು ಪ್ರಬಲ ಸಮುದಾಯವಾಗಿ ಬೆಳೆಯಲು ದಾರಿ ಮಾಡಿದಂತಾಯಿತು.ಸಹಜವಾಗಿಯೆ ವಕ್ಕಲಿಗರು ಆಳುವ ಊರ ಗೌಡರಾಗಿ ,ಮಾಗಡಿ ಕೆಂಪೇಗೌಡರಾಗಿ ಮೇಲೆ ಬರಲು ಸಾದ್ಯವಾಯಿತು.ಕಲ್ಯಾಣ ಕರ್ನಾಟಕದಲ್ಲಿ ಲಿಂಗಾಯಿತರ ಮೇಲೆ ಬಹಮನಿ ಸುಲ್ತಾನರು ಮಾಡಿದ ಪ್ರಭಾವ ಬೇರೆ.

ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳ ಬೇಕು.
ಪ್ರಬಲವಾದ ವಕ್ಕಲಿಗ ಜಾತಿಯನ್ನೇ ಹೀಗೆ ಅಪರಾದೀಕರಣಗೊಳಿಸುವಲ್ಲಿ ಅನೇಕ ಅಜೆಂಡಾಗಳಿವೆ

ಊಳಿಗಮಾನ್ಯ,ಪಾಳೇಗಾರ ಭೂ ಮಾಲೀಕ
ಗೌಡಿಕೆ ಬಲಾಡ್ಯ ಜಾತಿ… ನಿರ್ಣಾಯಕ ರಾಜಕೀಯ ಜಾತಿ ಇತ್ಯಾದಿ ಆರೋಪಗಳಿಂದ ಬದಲಾಗಲು ಹೊರಟಿರುವ ಸಮುದಾಯವನ್ನು ಮುಸ್ಲಿಂ ಸಮಾಜದ ಮುಂದೆ ಕತ್ತಿ ಹಿಡಿದು ನಿಲ್ಲಿಸಿದರೆ ಏನೇನು ಲಾಭಗಳಿವೆ ಎಂದು ಲೆಕ್ಕ ಹಾಕಿ…ರಾಜಕೀಯದ ಆಚೆಗೂ ಇಲ್ಲಿ ತಂತ್ರಗಳಿವೆ.

ನನ್ನ ಪ್ರೀತಿಯ ಮಂಡ್ಯದ ಜನ ಸೂಕ್ತ ಕ್ರಮಕ್ಕೆ ಮುಂದಾಗಲಿ ಎಂದು ಕೋರುವೆ.

-ಮೊಗಳ್ಳಿ ಗಣೇಶ್, ಸಾಹಿತಿಗಳು

Leave a Reply