ಇತ್ತೀಚಿಗೆ ಟಿಪ್ಪುವಿನ ಜನನ ದಿನಾಂಕವನ್ನು ನಿಖರವಾಗಿ ಗುರುತಿಸಿದ, ಟಿಪ್ಪುವಿನ ಕುರಿತಾಗಿ ದೀರ್ಘಕಾಲ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಸ್ವತಂತ್ರ ಇತಿಹಾಸಕಾರ Nidhin George Olikara ಅವರು ಹೀಗೆ ಹೇಳುತ್ತಾರೆ . ನಿಧಿನ್ toshkhana.wordpress.com ಎಂಬ ಜಾಲತಾಣದಲ್ಲಿ ಟಿಪ್ಪು ಮತ್ತು ಮೈಸೂರು ಸಂಸ್ಥಾನದ ಸುತ್ತಲಿನ ಸ್ವಾರಸ್ಯಕರ ವಿಷಯಗಳನ್ನು ಬರೆಯುತ್ತಾರೆ . ಆಸಕ್ತರು ಓದಬಹುದು
1. ಟಿಪ್ಪುವನ್ನು ಬ್ರಿಟಿಷ್ ಸೈನಿಕರು ಕೊಂದರು ಎಂಬುದಕ್ಕೆ ಸ್ಪಷ್ಟವಾದ, ನಿರ್ವಿವಾದದ ಪುರಾವೆಗಳಿವೆ – ಅದು 12 ನೇ Light Infantry ದಳದ ಸೈನಿಕನೆಂದು ಸಹ ನಮಗೆ ತಿಳಿದಿದೆ. ಆತನ ಹೆಸರು ನಮಗೆ ತಿಳಿದಿಲ್ಲ ಏಕೆಂದರೆ ಸೈನಿಕರು ಲೂಟಿ ಮಾಡಿದ ಎಲ್ಲಾ ವಸ್ತುಗಳನ್ನು (ಟಿಪ್ಪುವಿನ ರತ್ನಖಚಿತ ಕತ್ತಿ ಬೆಲ್ಟ್) ಬಹುಮಾನ ಸಮಿತಿಗೆ ಒಪ್ಪಿಸುವಂತೆ ಮಾಡಲಾಯಿತು, ಅಲ್ಲಿ ಅದನ್ನು ಹರಾಜು ಹಾಕಿ ಹಣವನ್ನು ಹಂಚಿಕೊಳ್ಳಲಾಯಿತು
2.ಬ್ರಿಟಿಷ್ ಸಾಕ್ಷಿಗಳು (ಕರ್ನಲ್ ಅಲೆನ್), ಟಿಪ್ಪುವಿನ ಜೊತೆ ಕೊನೆಯ ತನಕ ಇದ್ದ ಆತನ ಕಾರ್ಯದರ್ಶಿ (ರಾಜಾ ಖಾನ್), ಪರ್ಷಿಯನ್ ಮೂಲಗಳು (ಕಿರ್ಮಾನಿ) ಮತ್ತು ಮರಾಠಿ ಮೂಲಗಳು (ರಾಮಚಂದ್ರ ಪುಂಗನೂರಿ) ಆ ಸಮಯದಲ್ಲಿ ಇವರೆಲ್ಲ 4 ಮೇ 1799 ರಲ್ಲಿ ಬ್ರಿಟಿಷ್ ಸೈನಿಕನ ಕೈಯಲ್ಲಾದ ಟಿಪ್ಪುವಿನ ಮರಣವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ.
3. ಟಿಪ್ಪುವನ್ನು ಭಾರತೀಯರೇ ಕೊಂದರು ಎಂದು ಹೇಳುವ ಸಣ್ಣ ಅವಕಾಶವನ್ನು ಬ್ರಿಟಿಷರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಇದು ಟಿಪ್ಪುವನ್ನು ನಿರಂಕುಶವಾದಿ ಎಂದು ಸಾರುವ ಅವರ ವಾದಕ್ಕೆ ಸಮರ್ಥನೆಯಂತಾಗುತ್ತದೆ. ಅವರು ಹಾಗೆ ಹೇಳದೇ ಇರುವುದು ಅಂತಹ ಯಾವುದೇ ವದಂತಿ ಅಥವಾ ಘಟನೆ ಆಗ ಸಂಭವಿಸಿಲ್ಲ ಎಂಬುದಕ್ಕೆ ಇದು ಸ್ವತಃ ಪುರಾವೆಯಾಗಿದೆ.
4.ಉರಿಗೌಡ ಮತ್ತು ದೊಡ್ಡ ನಂಜೇಗೌಡರು ನಿಜವೇ ಅಥವಾ ಕಾಲ್ಪನಿಕರೇ? ನಮಗೆ ಗೊತ್ತಿಲ್ಲ. ಬಹುಶಃ ಅವರು ಇದ್ದರು ಅಥವಾ ಇಲ್ಲದೆಯೂ ಇರಬಹುದು. ಇವು ಸಾಮಾನ್ಯ ಕನ್ನಡಿಗ ಹೆಸರುಗಳು. ಅವು ನಿಜವಾಗಿದ್ದರೂ ಟಿಪ್ಪು ಸಾವಿಗೆ ಯಾವುದೇ ಸಂಬಂಧವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
-ಶಿವರಾಮ್ ಪಡಿಕಲ್, ಸಂಶೋಧಕರು



