ಫೇಸ್ ಬುಕ್. ಅದೊಂದು ಚಟವಾಗಿ ಮಾರ್ಪಡುತ್ತಲಿದೆ. ಒಂದು ಆರ್ಟಿಕಲ್ ಬರೆಯುವುದು ಅದಕ್ಕೆ ಬರುವ ಪ್ರತಿಕ್ರಿಯೆಗಳಿಗೆ ಉತ್ತರಿಸುವುದು. ಅದೊಂದು ಕಾಯಕವಾಗುತ್ತಿದೆ. ಯಾರಿಗಾಗಿ ಈ ಕಾಯಕ? ಬರೆದು ಪೋಸ್ಟ್ ಮಾಡಿದ ಅರ್ಧ ಘಂಟೆಯಲ್ಲಿ ಕಾಪಿಯಾಗಿ ಯಾರದೋ ಮುಖಪಟದಲ್ಲಿ ತಮ್ಮದೇ ಲೇಖನ ಎಂಬಂತೆ ಮುಖಕ್ಕೆ ರಾಚುತ್ತದೆ. ಕೃತಿ ಚೋರರಿಗೆ ಏನು ಹೇಳುವುದು? ಸರಸ್ವತಿಯನ್ನು ಕದಿಯಲಾದಿತೆ? ಇರಲಿ. ಬಿಟ್ಟಿರಲು ಮನಸ್ಸಾಗದು. ಮನೆಯವಳಿಗಿಂತ ಪ್ರೇಯಸಿ ಸುಂದರ ಅಲ್ಲವೆ?
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಪ್ರೆಯಸಿಯನ್ನು ಮರೆಯಲು ಪ್ರಯತ್ನಿಸುತ್ತಿದ್ದೇನೆ. ಬರೆಯಲು ಅನೇಕ ವಿಷಯಗಳಿರುತ್ತವೆ. ಪಂಚಮಸಾಲಿ ಗುರುಗಳು ಬಸವಣ್ಣನವರನ್ನು ಹಿಂದೂ ಎಂದದ್ದು ನನ್ನಂತೆ ಅನೇಕರಿಗೆ ಮಾಡಿದ ಗಾಯವಾಗಿದೆ. ಒಬ್ಬ ಸಚಿವರು ಅವರ ವೀಡಿಯೋ ನನಗೆ ಶೇರ್ ಮಾಡಿದ್ದಾರೆ. ಇದನ್ನು ಬರೆಯುವ ಪೂರ್ವದಲ್ಲಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ. “ಯಾವ ಆಧಾರದಲ್ಲಿ ಈ ರೀತಿ ಮಾತಾಡಿದ್ದೀರಿ” ಎಂದು ಪ್ರಶ್ನೆ ಮಾಡಿದೆ. ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ಚರ್ಚಿಸಲು ಮಠಕ್ಕೆ ಬರಹೇಳಿದ್ದಾರೆ. ಆದರೆ ನಾನೇಂದು ಆ ಮಠಕ್ಕೆ ಹೋಗಿಲ್ಲ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಅವರು ತಮ್ಮ ಎಂಟನೆಯ ವರ್ಷದಿಂದ ಇಂದಿನ ವರೆಗೂ ಬಸವ ತತ್ವನ್ನು ಪ್ರಚಾರ ಮಾಡಿದ್ದಾಗಿ ತಿಳಿಸಿದರು. ಆದರೆ ಬದಲಾವಣೆ ಹಿಂದಿರುವ ಕಾರಣ ತಿಳಿಯಲಿಲ್ಲ. ಪಂಚಮಸಾಲಿ ಸಮಾಜ ಲಿಂಗಾಯತ ಧರ್ಮದ ಒಂದು ಪ್ರಮುಖ ಅಂಗ. ಅದನ್ನು ಹೊರಗಿಡಲು ಸಾಧ್ಯವಿಲ್ಲ. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಕಾರಣಗಳನ್ನು ಕೇಳಬೇಕು. ನಿಜ ನಿಲುವನ್ನು ತಿಳಿಸಬೇಕು.
ನಾನೀಗಾಗಲೆ ೩೦೦ ಫೇಜುಗಳ ಒಂದು ಪುಸ್ತಕ ಬರೆದಿರುವೆ. ಮುದ್ರಣಕ್ಕೆ ಸಿದ್ದವಾಗಿದೆ. ಅದರಲ್ಲಿ ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಇದೆ.
ನನ್ನದೆ ಯಾಕೆ, ಓದುವ ಮನಸ್ಸಿದ್ದಲ್ಲಿ ಸಾವಿರಾರು ಪುಸ್ತಕಗಳಿವೆ. ಅವುಗಳಲ್ಲಿ ಲಿಂಗಾಯತದ ಸ್ಪಷ್ಟ ಸಿದ್ಧಾಂತ ಇದೆ. ಓದುವರ್ಯಾರು?
ಸಮಯ ಕಳೆಯಲು ಓಲಂಪಿಕ್ ನೋಡುವೆ. ಕ್ರಿಕೆಟ್ ನೋಡುವೆ. ನಾಲ್ಕಾರು ಘಂಟೆ ಓದುವೆ. ಬರೆಯುವೆ. ನೀವೂ ನನ್ನ ಬರಹದ ಜೀವಾಳ, ಬರೆಯಲು ಪ್ರೆರೇಪಿಸಿದ್ದು ನೀವೆ ಅಲ್ಲವೆ? ನೀವೇ ರೂಪಿಸಿದ ಬರಹಗಾರ ನಾನು.
ಸಾಕಿಷ್ಟು…. ಶರಣು.
– ಜಿ.ಬಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ