ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅನುದಾನ

3 years ago

#Grants #projects #KarnatakaAryaVaishyaCommunityDevelopmentCorporation #krishnabairegowda

ಬೆಂಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಅವರ ಕಚೇರಿಯಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ 13 ನೇ ನಿರ್ದೇಶಕ ಮಂಡಳಿ ಸಭೆ ನಡೆಯಿತು. ಸದರಿ ಸಭೆಯಲ್ಲಿ 2023-24 ನೇ ಸಾಲಿನಲ್ಲಿ ನಿಗಮಕ್ಕೆ ಮಂಜೂರಾದ ಅನುದಾನಕ್ಕೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ನಿಗಮದ ಈ ಕೆಳಕಂಡ ಯೋಜನೆಗಳಿಗೆ ದಿನಾಂಕ 18/08/2023 ರಂದು ಆನ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲು ನಿರ್ದೇಶಕ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

  1. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ : ಈ ಯೋಜನೆಯಡಿಯಲ್ಲಿ ವ್ಯಾಪಾರ ಚಟುವಟಿಕೆ ಕೈಗೊಳ್ಳಲು ಶೇ.4ರ ಬಡ್ಡಿ ದರದಲ್ಲಿ ರೂ.1.00 ಲಕ್ಷಗಳ ಸಾಲ – ಸಹಾಯಧನವನ್ನು ನೀಡಲಾಗುವುದು.
  2. ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ : ಈ ಯೋಜನೆಯಲ್ಲಿ ಆಹಾರ ವಾಹಿನಿ ಪ್ರಾರಂಭಿಸಲು ಬ್ಯಾಂಕ್ ಗಳಿಂದ ಸಾಲ ಪಡೆದಂತಹ ಅಭ್ಯರ್ಥಿಗಳಿಗೆ ನಿಗಮದ ವತಿಯಿಂದ ರೂ. 2.00 ಲಕ್ಷಗಳ ಸಹಾಯಧನ ನೀಡಲಾಗುವುದು.
  3. ವಾಸವಿ ಜಲಶಕ್ತಿ ಯೋಜನೆ: ಈ ಯೋಜನೆಯಲ್ಲಿ ಸಣ್ಣ ರೈತರು ಬೋರ್ ವೆಲ್ ಹಾಗೂ ಪಂಪ್ ಸೆಟ್ ಅಳವಡಿಸಲು ಶೇ. 4ರ ಬಡ್ಡಿ ದರದಲ್ಲಿ ರೂ. 2.00 ಲಕ್ಷಗಳ ಸಾಲ ಹಾಗೂ ವಿದ್ಯುದ್ದೀಕರಣಕ್ಕೆ ರೂ. 50,000/- ಗಳ ಸಹಾಯಧನ ನೀಡಲಾಗುವುದು.
  4. ಅರಿವು ಶೈಕ್ಷಣಿಕ ಸಾಲ ಯೋಜನೆ: ಈ ಯೋಜನೆಯಲ್ಲಿ ಸಿ.ಇ.ಟಿ/ನೀಟ್ ಮುಖಾಂತರ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಶೇ. 2ರ ಬಡ್ಡಿ ದರದಲ್ಲಿ ವಾರ್ಷಿಕ ರೂ.1.00 ಲಕ್ಷಗಳ ಸಾಲವನ್ನು ನೀಡಲಾಗುವುದು. (ಸದರಿ ಯೋಜನೆಗೆ ಸಿ.ಇ.ಟಿ ಕೌನ್ಸಿಲಿಂಗ್ ಮುಗಿದ ನಂತರ ಅರ್ಜಿಗಳನ್ನು ಆಹ್ವಾನಿಸಲಾಗುವುದು)

ಸಭೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ದೀಪಶ್ರೀ.ಕೆ, ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಿನ್.ಡಿ.ಗೌಡ, ಆರ್ಥಿಕ ಇಲಾಕೆ ಜಂಟಿ ಕಾರ್ಯದರ್ಶಿ ಹೆಚ್.ಎ ಶೋಭ, ಕಂದಾಯ ಇಲಾಖೆ ಉಪಕಾರ್ಯದರ್ಶಿ ಎಸ್.ಎನ್ ಕಲಾವತಿ ಉಪಸ್ಥಿತರಿದ್ದರು.

ಸಭೆಗೆ ಮುನ್ನ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ದೀಪಶ್ರೀ.ಕೆ ಅವರು ನಿಗಮದ ಸ್ವಯಂ ಉದ್ಯೋಗ ನೇರ ಸಾಲವನ್ನು ಪಡೆದ ಫಲಾನುಭವಿಗಳೇ ಸ್ವತಃ ಸಿದ್ಧಪಡಿಸಿದ ಚಾಕಲೇಟ್ ಗುಚ್ಛ ಹಾಗೂ ಬಟ್ಟೆಯಿಂದ ತಯಾರಿಸಿದ ಹಾರವನ್ನು ನೀಡಿ ಸಚಿವರನ್ನು ಸಭೆಗೆ ಆಹ್ವಾನಿಸಿದರು.

Leave a Reply