ಸೌಹಾರ್ದತೆಯ ನಾಡಾಗಿದ್ದ ದ.ಕ.ಜಿಲ್ಲೆ ಒಂದು ಕಾಲಕ್ಕೆ ಮನುಷ್ಯತ್ವದ ಕೋಟೆಯಾಗಿತ್ತು. ಇಂತಹ ನಾಡಿನಲ್ಲಿ ಬಿಜೆಪಿ ಸಂಘಪರಿವಾರ ಜಾತಿ, ಧರ್ಮದ ಹೆಸರಿನಲ್ಲಿ ಮತೀಯ ರಾಜಕಾರಣ ಮಾಡಿ ತನ್ನ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಪರಿವರ್ತಿಸಿದೆ. ಇವರ ಈ ಪ್ರಯತ್ನಕ್ಕೆ ನೂರಾರು ಅಮಾಯಕ ಯುವಕರ ಪ್ರಾಣವನ್ನು ಬಲಿ ಪಡೆದಿದ್ದಲ್ಲದೆ ಧರ್ಮದ ಅಮಲನ್ನು ಹಿಂದುಳಿದ ವರ್ಗದ ಯುವಕರ ತಲೆಗೇರಿಸಿ ಅಲ್ಪಸಂಖ್ಯಾತರ ವಿರುದ್ದ ಪರಸ್ಪರ ಎತ್ತಿಕಟ್ಟಿ ನಡೆಸಿದ ಕೋಮು ರಾಜಕಾರಣವನ್ನು ಬಯಲಿಗೆಳೆಯಬೇಕಾಗಿದೆ. ಆ ಮೂಲಕ ದೇಶದ ಜನರ ಬದುಕು ಗೆಲ್ಲಬೇಕಾದರೆ ಬಿಜೆಪಿ ಈ ಬಾರಿ ಸೋಲಲೇ ಬೇಕಾಗಿದೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ಅವರು ಹೇಳಿದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಬಜಾಲ್ ಪಕ್ಕಲಡ್ಕದಲ್ಲಿ ಬಿಜೆಪಿಯನ್ನು ಸೋಲಿಸಿ ಜಾತ್ಯಾತೀತ ಇಂಡಿಯಾ ಕೂಟದ ಅಭ್ಯರ್ಥಿಯನ್ನು ಬೆಂಬಲಿಸಲು ಒತ್ತಾಯಿಸಿ CPIM ಪಕ್ಷದ ನೇತೃತ್ವದಲ್ಲಿ ಜರುಗಿದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮುಂದುವರಿಸುತ್ತಾ ಅವರು, ಕಳೆದ 10 ವರ್ಷಗಳಲ್ಲಿ ದೇಶವನ್ನು ಲೂಟಿಗೈದ ಬಿಜೆಪಿ ನೇತ್ರತ್ವದ NDA ಕೂಟವನ್ನು ಸೋಲಿಸುವುದೇ ನಿಜವಾದ ದೇಶಪ್ರೇಮಿ ಕೆಲಸವಾಗಿದೆ.ಇದಕ್ಕೆ ಎಲ್ಲಾ ವಿಭಾಗದ ಜನತೆ ಕೈಜೋಡಿಸಬೇಕೆಂದು ಹೇಳಿದರು.
CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿ ಅವರು ಮಾತನಾಡುತ್ತಾ, ಹಸಿಹಸಿ ಸುಳ್ಳುಗಳನ್ನು ಹೇಳುವ ಮೂಲಕ ದೇಶದ ಜನತೆಗೆ ಮಂಕುಬೂದಿ ಎರಚಿ ದೇಶದ ಸಂಪತ್ತನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡಿದ ನರೇಂದ್ರ ಮೋದಿ ಸರಕಾರ ದೇಶಕ್ಕೆ ಆಪತ್ತು. ಬಿಜೆಪಿ ದೇಶದ ಅರ್ಥ ವ್ಯವಸ್ಥೆಯನ್ನು ನಾಶ ಮಾಡಿ, ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ CPIM ಯುವನಾಯಕರಾದ ಸಂತೋಷ್ ಬಜಾಲ್ ಅವರು ಮಾತನಾಡಿ, ಬಿಜೆಪಿ ಕಳೆದ 33 ವರುಷಗಳಿಂದ ಈ ಜಿಲ್ಲೆಯ ಅಭಿವೃದ್ಧಿಗೆ ಯಾವೊಂದು ಕೊಡುಗೆಯೂ ನೀಡಿಲ್ಲ. ಜಿಲ್ಲೆಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸಂಪೂರ್ಣ ವ್ಯಾಪಾರಿಕರಣಗೊಂಡಿದೆ. ಜಿಲ್ಲೆಗೊಂದು ಪರಿಸರ ಪೂರಕವಾದ ಉದ್ಯೋಗವನ್ನು ಸೃಷ್ಟಿಸುವ ಕೈಗಾರಿಕೆಯನ್ನಾಗಲಿ, ಮೀನುಗಾರಿಕಾ ಮತ್ತು ಪ್ರವಾಸೋಧ್ಯಗಳಿಗೆ ಉತ್ತೇಜನ ನಿಡುವ ಅಭಿವೃದ್ಧಿ ಕಾರ್ಯಗಳನ್ನು ನಡೆಸದೆ ಕೇವಲ ಮತೀಯ ರಾಜಕಾರಣಕ್ಕೆ ಜಿಲ್ಲೆಯ ಯುವಜನರನ್ನು ದಾರಿ ತಪ್ಪಿಸಿರುವುದೇ ಬಿಜೆಪಿಯ ಸಾಧನೆ ಎಂದರು.
ವೇದಿಕೆಯಲ್ಲಿ CPIM ಮಂಗಳೂರು ನಗರ ಮುಖಂಡರಾದ ಜಯಂತಿ ಬಿ ಶೆಟ್ಟಿ, ದೀಪಕ್ ಬಜಾಲ್, ಲೋಕೇಶ್ ಎಂ, ಜಗದೀಶ್ ಬಜಾಲ್ ಉಪಸ್ಥಿತರಿದ್ದರು.



