70ನೇ ಕನ್ನಡ ರಾಜ್ಯೋತ್ಸವ, ವಿದ್ಯಾಶ್ರೀ ಮತ್ತು ಕನ್ನಡ ಶ್ರೀ ಪ್ರಶಸ್ತಿ, ಪ್ರಧಾನ
ಬೆಂಗಳೂರುಮಹಾನಗರ ಸಾರಿಗೆ ಸಂಸ್ಥೆ
ಕೆಂಪು ಬಸ್ ನನಗೆ ಬಹಳ ಇಷ್ಟ, ಕನ್ನಡಿಗರನ್ನ ಬದುಕಿಸಿ, ಕನ್ನಡ ಭಾಷೆ ಬದುಕುತ್ತದೆ: ನಾಡೋಜ ಬರಗೂರು ರಾಮಚಂದ್ರಪ್ಪ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆವರಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಮತ್ತು ಸಾಹಿತ್ಯಶ್ರೀ, ವಿದ್ಯಾಶ್ರೀ, ಕನ್ನಡಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ, ಖ್ಯಾತ ಸಾಹಿತಿ ರಾಜಶೇಖರ್ ಜಿ.ಮಠಪತಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಆರಾಧ್ಯ, ನಿರ್ದೇಶಕಿ ಶಿಲ್ಪ ಎಂ. ಮತ್ತು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕಿ ಡಾ.ಸ್ಮಿತಾ ರೆಡ್ಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ರಾಜ್ಯ ಗೌರವಾಧ್ಯಕ್ಷ ವ.ಚ.ಚನ್ನೇಗೌಡ, ಅಧ್ಯಕ್ಷ ಕೆ.ಎಸ್.ಪ್ರಭುಸ್ವಾಮಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಸಾಮಾಜಿಕ ಜಾಲತಾಣ, ಕಂಪ್ಯೂಟರ್ ಬಳಕೆಯಿಂದ ಕೈಯಿಂದ ಬರೆಯುವ ಅಭ್ಯಾಸ ಕಡಿಮೆಯಾಗಿದೆ. ಬಿಎಂಟಿಸಿ ದತ್ತಿನಿಧಿ ಇಟ್ಟಿರುವ ನೃಪತುಂಗ ಪ್ರಶಸ್ತಿ ನನಗೆ ಲಭಿಸಿದೆ. ಇದರ ಋಣ ನನ್ನ ಮೇಲಿದೆ. ನನಗೂ ಸಹ ಸರ್ಕಾರಿ ಡೈವರ್ ಆಗಬೇಕು ಎಂಬ ಬಯಕೆ ಇತ್ತು, ಕೆಂಪು ಬಸ್ ಅಂದರೆ ನನಗೆ ಬಹಳ ಇಷ್ಟ. ಸರ್ಕಾರಿ ವಲಯ ಗೆಲ್ಲಬೇಕು, ಖಾಸಗಿ ವಲಯದ ಪರ ನಾನು ಇಲ್ಲ ಎಂದರು.
ಕರ್ನಾಟಕ ಏಕೀಕರಣ ಸ್ಮರಣೆಯಲ್ಲಿ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಭಾಷವಾರು ಪ್ರಾಂತ್ಯವಾಗಿದ್ದು ಮೊದಲು ಆಂಧ್ರಪ್ರದೇಶವಾಗಿತ್ತು. ಪ್ರಧಾನಿ ಜವಹಾರ್ ಲಾಲ್ ನೆಹರೂ ರವರು ಸಮಿತಿ ಮಾಡಿ ಭಾಷವಾರು ಪ್ರಾಂತ್ಯ ಮಾಡಲು ಆದೇಶ ನೀಡಿದರು. ಏಕೀಕರಣ ಹೋರಾಟದಲ್ಲಿ ಪೊಟ್ಟಿ ಶ್ರೀರಾಮಲು, ರಂಜಾನ್ ಸಾಬ್ ಹುತಾತ್ಮರಾದರು ಎಂದರು.
ನಾಮಫಲಕಗಳು ಕನ್ನಡ ಭಾಷೆಯಲ್ಲಿ ಇರಬೇಕು, ಕನ್ನಡಿಗರನ್ನ ಬದುಕಿಸಿ, ಅಮೇಲೆ ಕನ್ನಡ ಭಾಷೆ ಬದುಕುತ್ತದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಆಡಳಿತದಲ್ಲಿ ಸಂಪೂರ್ಣ ಕನ್ನಡ ಭಾಷೆ ಬಳಕೆಯಾಗಬೇಕು. ಕನ್ನಡದ ಮೇಲೆ ನಂಬಿಕೆ ಇಟ್ಟಿರುವವರರಿಗೆ ಇಲ್ಲಿ ಬದುಕುಲು ಅವಕಾಶ ಕಲ್ಪಿಸಬೇಕು. ಕರುಳಿನ ಕನ್ನಡಭಿಮಾನ ಇರಬೇಕು. ನಾಡಗೀತೆ ಹಾಡುತ್ತೇವೆ, ಎಷ್ಟು ಅನುಕರಣೆ ಮಾಡುತ್ತೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸರ್ವ ಜನಾಂಗದ ಶಾಂತಿ ತೋಟವಾಗಿ ಉಳಿದಿದೆಯಾ ಎಂಬ ಚಿಂತನೆ ಮಾಡಬೇಕು, ಧರ್ಮ, ಜಾತಿ ತಿಕ್ಕಾಟಗಳು ಇವೆ. ಕನ್ನಡ ಕಟ್ಟಿದವರು ಎಲ್ಲ ಜಾತಿ, ಧರ್ಮದವರು ಇದ್ದಾರೆ. ಕಿಟಲ್, ರೈಸ್, ವಿಲಿಯಂ ರವರು ಕನ್ನಡ ಸಾಹಿತ್ಯ ಸಂಗ್ರಹ ಮಾಡಿದರು. ತಳಸಮುದಾಯ, ಲಿಂಗಾಯಿತ, ಬ್ರಾಹ್ಮಣರು ಎಲ್ಲರು ಕನ್ನಡ ಕಟ್ಟಿದ ಕಾರಣದಿಂದ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಎಲ್ಲರು ಒಟ್ಟಾಗಿ ಬದುಕುವುದು ಕನ್ನಡಿಗರ ಧರ್ಮವಾಗಿದೆ. ಸೌಹರ್ದತೆ, ಸ್ನೇಹದಿಂದ ಬದುಕು ಎಂದು ಹೇಳಿಕೊಟ್ಟಿದ್ದು ಕನ್ನಡ ಎಂದರು.
ದೈವ ಮತ್ತು ಭಕ್ತ ನಡುವೆ ಯಾವುದೇ ತಾರತಮ್ಯವಿರಬಾರದು. ಆದರೆ ಇಂದು ಭಕ್ತಿ ಬಂಡವಾಳವಾಗಿದೆ. ಸಾಹಿತಿಗಳು ಕನ್ನಡ ಉಳಿಸುತ್ತೇವೆ ಎಂಬ ಭ್ರಮೆಯಲ್ಲಿ ಇರಬಾರದು. ಕನ್ನಡ ಜನಗಳ ಭಾಷೆಯಾಗಿರುವುದರಿಂದ ಕನ್ನಡ ಭಾಷೆ ನಶಿಸಿಹೋಗುವುದಿಲ್ಲ. ಅನ್ಯ ಭಾಷೆ ಬಳಕೆ ಇಲ್ಲದೇ ಕನ್ನಡ ಭಾಷೆ ಮಾತನಾಡಲು ಸಾಧ್ಯವಿಲ್ಲ. ಬಸ್, ಡೈವರ್, ಕಾರ್ ಅವುಗಳಿಗೆ ಕೊಂಬು ಕೊಟ್ಟರೆ ಕನ್ನಡ ಭಾಷೆಗೆ ಒಗ್ಗುತ್ತದೆ. ರೊಕ್ಕ, ದಾವಖಾನೆ ಮರಾಠಿ ಭಾಷೆಯಿಂದ ಬಂತು. ಜನಸಾಮಾನ್ಯರ ಬಳಕೆ ಮಾಡುವ ಭಾಷೆಯನ್ನು ಆಳಿಸಿಹಾಕಬಾರದು. ಕನ್ನಡ ಬಳಸಿದರೆ ಬೆಳಸುವುದಕ್ಕೆ ಸಾಧ್ಯ ಎಂದರು.
ಶಿಕ್ಷಣ, ಉದ್ಯೋಗದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದವರಿಗೆ ಶೇಕಡ 5ರಷ್ಟು ಮೀಸಲಾತಿ ನೀಡಬೇಕು ಎಂದು ಆದೇಶ ನೀಡಿದ ಕಾರಣದಿಂದ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಕ್ಕಿತ್ತು. ಕನ್ನಡ ಭಾಷೆಗೆ ಸವಾಲುಗಳು ಇವೆ, ಸಾವಿಲ್ಲ ಎಂದರು.
ವ.ಚ.ಚನ್ನೇಗೌಡ ಮಾತನಾಡಿ ಕನ್ನಡ ಸಾಂಸ್ಕೃತಿಕ ಲೋಕದ ಮುಖ್ಯಮಂತ್ರಿಯೆಂದರೆ ಬರಗೂರು ರಾಮಚಂದ್ರಪ್ಪರವರು. ಕನ್ನಡ ಅನ್ನದ ಭಾಷೆಯಾಗಬೇಕು, ಆಗ ಕನ್ನಡ ಭಾಷೆ ಉಳಿಯಲು ಸಾಧ್ಯ. ಬಿಎಂಟಿಸಿ ವತಿಯಿಂದ ಕರ್ನಾಟಕ ಏಕೀಕರಣ 50 ವರ್ಷ ತುಂಬಿದ ಸಂದರ್ಭದಲ್ಲಿ ನೃಪತುಂಗ ಪ್ರಶಸ್ತಿ 5 ಲಕ್ಷದ 1ರೂಪಾಯಿ ನೀಡಲಾಗುತ್ತಿದೆ. ಗೋಕಾಕ್ ಚಳುವಳಿಯಲ್ಲಿ ಡಾ.ರಾಜ್ ಕುಮಾರ್, ಬರಗೂರು ರಾಮಚಂದ್ರಪ್ಪ ಹೋರಾಟದಲ್ಲಿ ಮಂಚೂಣಿಯಲ್ಲಿ ಇದ್ದರು. ಪ್ರತಿದಿನ ಕನ್ನಡ ಬಳಸಬೇಕು, ಬರೆಯಬೇಕು, ಮಾತನಾಡಬೇಕು ಆಗ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದರು.
ಪ್ರಭುಸ್ವಾಮಿ ಮಾತನಾಡಿ, 1956ರಲ್ಲಿಏಕೀಕರಣವಾದ ನಂತರ ನವೆಂಬರ್ 1ರಾಜ್ಯೋತ್ಸವ ಆಚರಿಸಿಕೊಂಡು ಬರರಲಾಗುತ್ತಿದೆ. ನೌಕರರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾಶ್ರೀ, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಬಳಸಿದವರಿಗೆ ಕನ್ನಡ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕನ್ನಡತನ ಉಳಿಸಿಕೊಳ್ಳಬೇಕು, ಕನ್ನಡ ಭಾಷೆಯನ್ನು ಪ್ರತಿದಿನ ಬಳಸಬೇಕು. ಕನ್ನಡಿಗರಿಗೆ ಉದ್ಯೋಗ ಲಭಿಸಬೇಕು ಎಂಬ ಹೋರಾಟದ ಫಲದಿಂದ ಇಂದು ನಮ್ಮ ಸಂಸ್ಥೆಯಲ್ಲಿ ಕನ್ನಡಿಗರು ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗದಲ್ಲಿ ಇದ್ದಾರೆ. ನಾಡು, ನುಡಿ ಹೋರಾಟಕ್ಕೆ, ಸಾಮಾಜಿಕ ಹೋರಾಟದಲ್ಲಿ ಕನ್ನಡ ಕ್ರಿಯಾ ಸಮಿತಿ ಸಕ್ರಿಯವಾಗಿ ತೊಡಗಿಕೊಂಡಿದೆ ಎಂದರು.
ಹಿರಿಯ ಸಾಹಿತಿ ಡಾ.ರಾಜಶೇಖರಯ್ಯ ಜಿ ಮಠಪತಿ ಅವರಿಗೆ ಸಾಹಿತ್ಯಶ್ರೀ, ಕಾರ್ಮಿಕರ ಕುಟುಂಬದ ಮಕ್ಕಳು ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಗಳಿಸಿದವರಿಗೆ ವಿದ್ಯಾಶ್ರೀ ಪ್ರಶಸ್ತಿ ಪ್ರಧಾನ ಮತ್ತು ಕಾರ್ಮಿಕರಿಗೆ ಕನ್ನಡ ಶ್ರೀ ಪ್ರದಾನ ಮಾಡಲಾಯಿತು.
ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ರಮೇಶ್ ವಿ., ಸುರೇಶ್ ಹೆಚ್.ಕೆ., ಶಿವಕುಮಾರ್ ಆರ್, ತಿಮ್ಮರಾಯಿಗೌಡ, ನವೀನ್ ವಿ, ಗೌರಮ್ಮ, ಅನಿಲ್ ಕುಮಾರ್ ಎನ್. ಬಿಎಂಟಿಸಿಯ ಸಂಸ್ಥೆಯ ನೂರಾರು ಕಾರ್ಮಿಕರು ಭಾಗವಹಿಸಿದ್ದರು.







