ದೇಶದಲ್ಲಿ ಉನ್ನತ ಶಿಕ್ಷಣ ಎಂಬುದು ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತಿದೆ. ಏಕೆಂದರೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳು ಪಾವತಿಸಬೇಕಾಗಿರುವ ಶುಲ್ಕದ ಮೊತ್ತ ಏರಿಕೆಯಾಗುತ್ತದೆ.
ಕೋಚಿಂಗ್ ಸೆಂಟರ್ ಗಳು ದೇಶದ ಸುಮಾರು ನಾಲ್ಕು ಕೋಟಿ ಜನರನ್ನ ಇವುಗಳು ನೋಂದಾಯಿಸಿಕೊಂಡಿರುತ್ತವೆ. ಪ್ರತಿ ವರ್ಷ 24,000 ಕೋಟಿ ರೂಪಾಯಿಗಳ ಆದಾಯವನ್ನು ಪಡೆಯುತ್ತಿವೆ. ಒಟ್ಟಾರೆಯಾಗಿ 58000 ಕೋಟಿ ರೂಪಾಯಿಗಳ ವಹಿವಾಟು ಇವುಗಳಿಂದ ನಡೆಯುತ್ತಿದೆ. 2028ರ ವೇಳೆಗೆ ಕೋಚಿಂಗ್ ಸೆಂಟರ್ ಗಳ ಒಟ್ಟಾರೆ ವಹಿವಾಟಿನ ಮೊತ್ತ ಒಂದು ಲಕ್ಷದ ಹದಿಮೂರು ಸಾವಿರ ಕೋಟಿ ರೂಪಾಯಿಗಳ ತನಕ ಮುಟ್ಟಬಹುದೆಂಬ ಲೆಕ್ಕಾಚಾರವನ್ನು ಹಾಕಲಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಒಂದನೇ ತರಗತಿಯಿಂದ ಹಿಡಿದು ಪ್ರಾಥಮಿಕ ಶಿಕ್ಷಣ ಪ್ರೌಢ ಶಿಕ್ಷಣ ಇವುಗಳಿಗೆ ಪ್ರತ್ಯೇಕ ಪಾಠದ ವ್ಯವಸ್ಥೆಯ ಜೊತೆ ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡಿಸುತ್ತಿದ್ದಾರೆ. ವಿಶೇಷವಾಗಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಗಳ ಮಕ್ಕಳಿಗೆ ವಿವಿಧ ಪ್ರವೇಶ ಪರೀಕ್ಷೆಗಳ ಹೆಸರಿನಲ್ಲಿ ವಿಶೇಷವಾದಂತಹ ತರಬೇತಿ ನೀಡುತ್ತೇವೆ ಎಂದು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ಕೋಚಿಂಗ್ ಸೆಂಟರ್ ಗಳು ಪಡೆದುಕೊಳ್ಳುತ್ತಿವೆ. ಹಣ ಇರುವವರು ಇಂತಹ ಕೋಚಿಂಗ್ ಸೆಂಟರ್ ಗಳಿಗೆ ಯಾವುದೇ ಆತಂಕವಿಲ್ಲದೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇಲ್ಲದವರು ಸಾಲ ಮಾಡಿಯಾದರು ವಿಶೇಷ ತರಬೇತಿಯನ್ನ ಕೊಡಿಸುತ್ತಾರೆ. ಏನೂ ಇಲ್ಲದ ಗ್ರಾಮೀಣ ಪ್ರದೇಶದ ಮಕ್ಕಳು ಸ್ವಂತ ಪ್ರತಿಭೆಯಿಂದ ಸಾಕಷ್ಟು ಸಾಧನೆಯನ್ನು ಮಾಡುತ್ತಿರುವುದನ್ನ ಗಮನಿಸಬೇಕಾಗಿದೆ.
ಕೋಚಿಂಗ್ ಸೆಂಟರ್ ಗಳಿಗೆ ಲಗಾಮು ಹಾಕದಿದ್ದರೆ ಶಾಲೆ ಮತ್ತು ಕಾಲೇಜುಗಳಲ್ಲಿ ನಡೆಯುವಂತಹ ಪಾಠಗಳಿಗಿಂತ ಪಾಠಕ್ಕೆ ಹೆಚ್ಚಿನ ಮಹತ್ವವನ್ನ ನೀಡುವ ಕಾರಣದಿಂದ ಶಾಲಾ ಮತ್ತು ಕಾಲೇಜುಗಳಲ್ಲಿ ಪಾಠ ಮಾಡುವವರಿಗೆ ಬೆಲೆಯೇ ಇಲ್ಲದಂತಾಗುತ್ತದೆ. ನಿಜಕ್ಕೂ ಕೋಚಿಂಗ್ ಸೆಂಟರ್ ಗಳ ಹಾವಳಿಯಿಂದ ಹಲವಾರು ರೀತಿಯ ಅನಾಹುತಗಳು ಅದರಲ್ಲೂ ವಿಶೇಷವಾಗಿ ಪರೀಕ್ಷೆಗಳ ವಿಚಾರದಲ್ಲಿ ನಡೆಯುತ್ತಿರುವುದು ಪ್ರತಿ ಸಂದರ್ಭದಲ್ಲಿ ಬಹಿರಂಗವಾಗುತ್ತಿದೆ.
ಇನ್ನು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿಗಳಿಗೆ ಸಿಇಟಿ ಹಾಗೂ ನೀಟ್ ಪ್ರವೇಶ ಪರೀಕ್ಷೆಗಳಲ್ಲಿ ಆಯ್ಕೆಯಾದವರು ಸಹ ಪಾವತಿಸಬೇಕಾಗಿರುವ ಶುಲ್ಕದ ಮೊತ್ತ ಹೆಚ್ಚಾಗುತ್ತಿದೆ. ಮೆರಿಟ್ ಇಲ್ಲದವರಿಗೆ ಇಂಜಿನಿಯರಿಂಗ್ ಪದವಿಯನ್ನು ಪಡೆಯಲು ಎರಡು ಲಕ್ಷದಿಂದ 10 ಲಕ್ಷದ ತನಕ ಶುಲ್ಕವನ್ನು ಪಾವತಿಸಬೇಕಾಗಿದೆ. ಇನ್ನು ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶವನ್ನ ಪಡೆಯಲು ಒಂದು ಕೋಟಿಯಿಂದ ಎರಡು ಕೋಟಿಯ ತನಕ ಹಣವನ್ನು ನೀಡಬೇಕಾಗಿದೆ. ಈ ರೀತಿಯಲ್ಲಿ ಹಣವನ್ನ ಕೊಟ್ಟು ಪದವಿಗಳನ್ನ ಪಡೆದವರಿಂದ ಸೇವೆಯನ್ನ ನಿರೀಕ್ಷಿಸುವುದಾದರೂ ಹೇಗೆ? ಸಹಜವಾಗಿಯೇ ಅವರು ಬಂಡವಾಳವನ್ನ ಹಿಂತೆಗೆದುಕೊಳ್ಳುವ ರೀತಿಯಲ್ಲಿ ತಮ್ಮ ವೃತ್ತಿಯನ್ನು ವ್ಯಾಪಾರಿ ಮನೋಭಾವದಿಂದ ನೋಡುತ್ತಾರೆ.
ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಈಗ ಶುಲ್ಕದ ಮೊತ್ತ 3,75,000 ರೂ.ಗಳಿಗೆ ಏರಿಕೆಯಾಗಿದೆ. ಇವು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಾಸಾದಂತಹ ವಿದ್ಯಾರ್ಥಿಗಳಿಗ ಅನ್ವಯವಾಗುತ್ತಿರುವುದು. ಈ ಮೊದಲು ಹತ್ತು ವರ್ಷದ ಹಿಂದೆ ಇದ್ದಂತಹ ಶುಲ್ಕಕ್ಕು ಇವತ್ತಿಗೂ ಹಲವಾರು ಪಟ್ಟು ಏರಿಕೆಯಾಗಿದೆ.
ಐಐಎಂಗಳಲ್ಲಿ ಈ ಮೊದಲು ಮೂರುವರೆ ಲಕ್ಷ ರೂಪಾಯಿಗಳಿದ್ದ ಶುಲ್ಕದ ಮೊತ್ತ 13 ವರೆ ಲಕ್ಷದಿಂದ 15 ಲಕ್ಷದ ತನಕ ಮುಟ್ಟಿರುತ್ತದೆ ಇಲ್ಲಿಯೂ ಸಹ ಸಾಮಾನ್ಯ ಮನೆಯ ಮಕ್ಕಳು ಪ್ರವೇಶವನ್ನು ಪಡೆದು ಸೂತ್ರವನ್ನು ಪಾವತಿಸುವುದು ಕಷ್ಟದ ಕೆಲಸವಾಗಿರುತ್ತದೆ. ಇದೇ ರೀತಿಯಲ್ಲಿ ಸಾಮಾನ್ಯ ವರ್ಗದವರಿಗೆ 1,20,000ಗಳ ಶುಲ್ಕದ ಜೊತೆಗೆ ಹಾಸ್ಟೆಲ್ ಫೀಸ್, ಊಟಕ್ಕೆ ಮತ್ತು ಇತರೆ ವಾಪತುಗಳ ಲೆಕ್ಕದಲ್ಲಿ ಮತ್ತಷ್ಟು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಸಹ ಸರಿಸುಮಾರು ಎರಡು ಲಕ್ಷದ ಮಟ್ಟವನ್ನ ಮುಟ್ಟುತ್ತಿದೆ.
ಬೇರೆ ಬೇರೆ ವಿಚಾರಗಳಿಗಾಗಿ ಮತ್ತು ಪ್ರಚಾರಗಳಿಗಾಗಿ ಹಲವಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸರ್ಕಾರಗಳು ಶಿಕ್ಷಣಕ್ಕೆ ಸಂಬಂಧಪಟ್ಟ ಹಾಗೆ ಪ್ರತಿ ವರ್ಷವೂ ಶುಲ್ಕವನ್ನ ಹೆಚ್ಚಿಸುವುದು ಎಷ್ಟರಮಟ್ಟಿಗೆ ಸರಿ? ಉನ್ನತ ಶಿಕ್ಷಣ ಮತ್ತು ಸಂಶೋಧನೆ ದೇಶದ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ರಹದಾರಿಯಾಗಿರುತ್ತದೆ. ಇಲ್ಲಿ ಸರ್ಕಾರಗಳು ಗಂಭೀರವಾಗಿ ಚಿಂತಿಸದೆ ಹೋದರೆ ಉನ್ನತ ಶಿಕ್ಷಣ ಎಂಬುದು ಉಳ್ಳವರ ಪಾಲಾಗುತ್ತದೆ. ಇಲ್ಲದವರ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತದೆ.
ಮತ್ತೊಂದು ಸರದ ಸಂಗತಿ ಏನೆಂದರೆ, ಸರ್ಕಾರದ ಸವಲತ್ತುಗಳನ್ನು ಪಡೆದು ರಿಯಾಯಿತಿಯನ್ನು ಪಡೆದುಕೊಂಡು ಶಿಕ್ಷಣವನ್ನು ಪಡೆದುಕೊಂಡಂತಹ ಬಹಳಷ್ಟು ಪ್ರತಿಭಾವಂತರು ಪ್ರತಿಭಾ ಪಲಾಯನವನ್ನ ಮಾಡಿ ವಿದೇಶಗಳಲ್ಲಿ ನೆಲೆಸಿ ಅಲ್ಲಿನ ಜನರ ಸೇವೆಯನ್ನ ಮಾಡುತ್ತಾ ಆ ದೇಶದ ಉದ್ದಾರವನ್ನ ಮಾಡುತ್ತಾರೆ. ಉನ್ನತ ಶಿಕ್ಷಣವನ್ನ ಪಡೆದವರು ನಮ್ಮ ದೇಶದ ಪ್ರಗತಿಗೆ ಮತ್ತು ನಮ್ಮ ದೇಶದ ಜನರ ಅಭಿವೃದ್ಧಿಗೆ ಕೊಡುಗೆಯನ್ನ ಕೊಡದೆ ಹೋಗುತ್ತಿರುವುದು ಸಹ ನೋವಿನ ಸಂಗತಿ. ಕೆಲವೊಂದು ಸಂದರ್ಭದಲ್ಲಿ ಇವರುಗಳ ಮನಸ್ಥಿತಿ ಬದಲಾಗಬೇಕು ಎಂದು ಬಯಸುವವರು ಬಹಳಷ್ಟು ಮಂದಿ ಇದ್ದಾರೆ.
ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ತನಕ ಶುಲ್ಕದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದು ಶಿಕ್ಷಣವೂ ಸಹ ಆರ್ಥಿಕವಾಗಿ ದುರ್ಬಲರಾದವರ ಪಾಲಿಗೆ ಕನ್ನಡಿ ಒಳಗಿನ ಗಂಟಾಗಿದೆ.
- ಕೆ ಎಸ್ ನಾಗರಾಜ್, ಬೆಂಗಳೂರು




