ಕಳೆದ ಒಂದು ತಿಂಗಳಲ್ಲಿ ಬಿಹಾರ, ಬದ್ಲಾಪುರ, ರತ್ನಗಿರಿ, ಅಸ್ಸಾಂ, ಯುಪಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಹಲ್ಲೆ ನಡೆದಿದೆ. ಒಂದು ಪ್ರಕರಣದಲ್ಲಿ ಒಬ್ಬರ ಕೊಲೆಯಾಗಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಗಾಯದ ಮೇಲೆ ಬರೆಯಿಟ್ಟಂತೆ ಮೊನ್ನೆ ಉತ್ತರ ಪ್ರದೇಶದಲ್ಲಿ 15 ಮತ್ತು 18 ವಯಸ್ಸಿನ ಇಬ್ಬರು ದಲಿತ ಯುವತಿಯರು ನೇಣಿನಲ್ಲಿ ಬಿಗಿದು ಸಾವಿಗೀಡಾದ ದುರಂತ ಘಟನೆ ನಡೆದಿದೆ. ಸಂತ್ರಸ್ತರ ಮೈಮೇಲೆ ಗಾಯದ ಗುರುತುಗಳಿದ್ದರೂ ಅಲ್ಲಿನ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ಆತ್ಮಹತ್ಯೆ ಎಂದು ಮರೆಮಾಚುತ್ತಿರುವುದು ಸ್ಥಳೀಯರು, ಪೋಷಕರಲ್ಲಿ ಆಕ್ರೋಶ ಮೂಡಿಸಿದೆ.
ಸರಿಯಾಗಿ ಹತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಕತ್ರಾ ಸದತ್ ಗಂಜ್ ಹಳ್ಳಿಯಲ್ಲಿ ಇಬ್ಬರು ದಲಿತ ಯುವತಿಯ ಮೇಲೆ ಅತ್ಯಾಚಾರ, ಕೊಲೆ ನಡೆಸಿ ನೇಣು ಹಾಕಿದ ಬರ್ಬರ ಘಟನೆ ಮತ್ತೆ ನೆನಪಾಗುತ್ತದೆ (ಆರ್ಟಿಕಲ್ 15 ಸಿನಿಮಾ ಈ ಘಟನೆ ಆಧರಿಸಿತ್ತು).
ಕೊಲ್ಕತ್ತಾದ ಆರ್.ಜಿ.ಖರ್ ಆಸ್ಪತ್ರೆಯ ಮಹಿಳಾ ವೈದ್ಯರ ಮೇಲಿನ ಅತ್ಯಾಚಾರ, ಹತ್ಯೆ ಕುರಿತಾದ ಪ್ರತಿಭಟನೆ ನಡೆಸುವ ಇಲ್ಲಿನ ನಾಗರಿಕ ಸಮಾಜ ಮೇಲೆ ಪ್ರಸ್ತಾಪಿಸಿದ ದುರ್ಘಟನೆಗಳ ಕುರಿತು ಮಾತನಾಡುತ್ತಿಲ್ಲ, ಆಕ್ರೋಶ ವ್ಯಕ್ತಪಡಿಸುತ್ತಿಲ್ಲ. ಪ್ರತಿಭಟನೆ ನಡೆಸುತ್ತಿಲ್ಲ. ಇವರ ಈ selectiveness ಗುಣದ ಕುರಿತು ಏನು ಹೇಳುವುದು? ಈ ಹಿಂದೆ ಹತ್ರಾಸ್, ಉನ್ನಾವ್ ನ ಅತ್ಯಾಚಾರ, ಕೊಲೆ ಕುರಿತು ಇದೇ ರೀತಿ ಮೌನವಾಗಿದ್ದರು. ಈಗಲೂ ಸಹ… ಇದೆಂತಹ ಹಿಪೊಕ್ರೆಟಿಕ್ ಸಮಾಜ?
– ಬಿ.ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು



