ತ್ರಿವರ್ಣ ಧ್ವಜ ಹಸ್ತಾಂತರಿಸಿದ ನಳಿನ್ ಕುಮಾರ್ ಕಟೀಲ್

4 years ago

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ನಡೆಯಲಿರುವ ಹರ್ ಫರ್ ತಿರಂಗ ಕಾರ್ಯಕ್ರಮದ ಪ್ರಯುಕ್ತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಂಗಳೂರು ಕೇಂದ್ರ ಜಿಲ್ಲೆಯ ಜಗಜೀವನ್ ರಾಮ್ ನಗರದಲ್ಲಿ ಮಾಜಿ ಶಾಸಕ, ದಲಿತ ನಾಯಕ ಐಪಿಡಿ ಸಾಲಪ್ಪ ಇವರ ನಿವಾಸಕ್ಕೆ ತೆರಳಿ, ಅವರ ಪುತ್ರ ಅಶೋಕ್ ಸಾಲಪ್ಪ ಇವರಿಗೆ ತ್ರಿವರ್ಣ ಧ್ವಜವನ್ನು ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ ವಿ, ಬೆಂಗಳೂರು ಕೇಂದ್ರ ಸಂಸದ ಪಿ ಸಿ ಮೋಹನ್, ರಾಜ್ಯಸಭಾ ಸಂಸದ ಜಗ್ಗೇಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್ ಆರ್ ರಮೇಶ್ ಮತ್ತು ಇತರರು ಹಾಜರಿದ್ದರು.

Leave a Reply