ಬೆಂಗಳೂರು: ಬಿ.ಬಿ.ಎಂ.ಪಿ. ಚುನಾವಣೆ ವಾರ್ಡ್ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯವಿಲ್ಲ, ರಾಜಕೀಯ ಸೇಡು ತೀರಿಸಲು ಮೀಸಲಾತಿ ಮಾಡಿದ್ದಾರೆ. 2 ವರ್ಷದಿಂದ ಬಿ.ಬಿ.ಎಂ.ಪಿ.ಚುನಾವಣೆ ನಡೆದಿಲ್ಲ, ಚುನಾವಣೆ ನಿಲ್ಲಿಸಲಾಗುವುದಿಲ್ಲ ನಡೆದೆ ನಡೆಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ:ಜೈ ದುರ್ಗ ಕಲ್ಯಾಣ ಮಂಟಪದಲ್ಲಿ ಸ್ವಾತಂತ್ಯ್ರ ಅಮೃತ ಮಹೋತ್ಸವ ಮತ್ತು ಬಿ.ಬಿ.ಎಂ.ಪಿ.ಚುನಾವಣೆ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಮಾತಾಡಿದ ಅವರು, ಸ್ವಾತಂತ್ಯ್ರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪುಣ್ಯದ ಕೆಲಸ ಎಂದರು.
ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ನಮ್ಮ ನಡಿಗೆ, ದೇಶದ ಕೊಡುಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ನ್ಯಾಷನಲ್ ಕಾಲೇಜು ಆಟದ ಮೈದಾನದವರಗೆ 7.5ಕಿಲೋ ಮೀಟರ್ ನಡಿಗೆ ಜಾಥ ಕಾರ್ಯಕ್ರಮ ಮತ್ತು 3 ಕಿಲೋ ಮೀಟರ್ ವರೆಗೆ ತ್ರಿರ್ವಣ ಧ್ವಜ ಹಾರಲಿದೆ 1.50 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದರು.
ಎಮ್.ಶಿವರಾಜು ಮಾತನಾಡಿ ಕೊರೋನ ಸಾಂಕ್ರಮಿಕ ರೋಗ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಜನರ ಸೇವೆ ಮಾಡಲಿಲ್ಲ. ಕಾಂಗ್ರೆಸ್ ಪಕ್ಷ ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಬಡವರ ಪರ ನಿಂತು ಕೆಲಸ ಮಾಡಿದರು ಎಂದರು.
ವಾರ್ಡ್ ಮೀಸಲಾತಿಯಲ್ಲಿ ಸೇಡಿನ ರಾಜಕಾರಣ ಮಾಡಿ ವಾರ್ಡ್ ವಿಂಗಡನೆ ಮಾಡಿದ್ದಾರೆ. ಬಿ.ಜೆ.ಪಿ.ಪಕ್ಷದ ಸೇಡಿನ ರಾಜಕಾರಣಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಎಸ್.ಕೇಶವಮೂರ್ತಿ ಮಾತನಾಡಿ, ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ಸಹಕಾರದಿಂದ ಎರಡು ಬಾರಿ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ದ್ವೇಷ ರಾಜಕಾರಣ ಮಾಡಿ ವಾರ್ಡ್ ಮೀಸಲಾತಿ ಮಾಡಿದ್ದಾರೆ ಎಂದರು.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ 9ವಾರ್ಡ್ ಗಳಲ್ಲಿ 5 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಮುಂಬರುವ ವಿಧಾನಸಭಾ ಚುನಾವಣೆ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನ ಆಯ್ಕೆ ಮಾಡುವುದು ಖಚಿತ ಎಂದು ಹೇಳಿದರು.
ಕುರುಬರಹಳ್ಳಿ ಸರ್ಕಲ್ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಎದುರಿನಿಂದ ಡಿ.ಕೆ.ಶಿವಕುಮಾರ್ ಅವರನ್ನು ಬೃಹತ್ ಕ್ರೆನ್ ಮೂಲಕ ಹೂವಿನ ಸುರಿಮಳೆ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಕರೆತರಲಾಯಿತು.
ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಉಸ್ತುವಾರಿ ಮಂಜುನಾಥ್ ಬಂಡಾರಿ, ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ರಾಜ್ ಕುಮಾರ್, ಎನ್.ಎಸ್.ಯು.ಐ. ಮಾಜಿ ಅಧ್ಯಕ್ಷಹೆಚ್.ಮಂಜುನಾಥಗೌಡ ಮೊದಲಾದ ಹಲವರು ಹಾಜರಿದ್ದರು.



