ಹಾಸನ: ಹಾಸನದ ಮಾಣಿಕ್ಯ ಪ್ರಕಾಶನ ನೀಡುವ ರಾಜ್ಯ ಮಟ್ಟದ ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ ಸಂಶೋಧನಾ ಮಾಣಿಕ್ಯ ಪ್ರಶಸ್ತಿಯನ್ನು ನಿವೃತ್ತ ಪ್ರಾಧ್ಯಾಪಕ, ಜಾನಪದ ವಿದ್ವಾಂಸ, ಶಿಕ್ಷಣ ತಜ್ಞ, ಸಾಹಿತಿ ಡಾ.ಹಂಪನಹಳ್ಳಿ ತಿಮ್ಮೇಗೌಡ ಅವರ ದಾಸೊಕ್ಕಲಿಗರು ಕೃತಿಗೆ ನೀಡಿರುವುದಾಗಿ ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಡಾ.ಹಂಪನಹಳ್ಳಿ ತಿಮ್ಮೇಗೌಡ ಅವರು ಇದುವರೆಗೆ ಸ್ವರಚಿತ ಮತ್ತು ಸಂಪಾದನೆಯ ನಲವತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಷ್ಟç ಹಾಗೂ ರಾಜ್ಯ ಮಟ್ಟದ ಹದಿನೆಂಟು ಪ್ರಶಸ್ತಿಗಳು ಇದುವರೆಗೆ ದೊರಕಿದ್ದು ಇದು ಹತ್ತೊಂಬತ್ತನೆಯ ಪ್ರಶಸ್ತಿಯಾಗಿದೆ. ನವೆಂಬರ್ ಎರಡರಂದು ಹಾಸನದ ಸಂಸ್ಕೃತ ಭವನದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಪ್ರಕಾಶಕರು ತಿಳಿಸಿದ್ದಾರೆ.




