ಕನ್ನಡಕ್ಕೆ ಆಸ್ಕರ್ ತಂದೇ ತರ್ತೀನಿ ಅಂತೆಲ್ಲಾ ಪ್ರತೀ ಸಂದರ್ಶನದಲ್ಲೂ ಮಾತನಾಡುತ್ತಿದ್ದ ಗುರುಪ್ರಸಾದ್ ಬದುಕಿಗೆ ದುರಂತ ಅಂತ್ಯ ತಂದುಕೊಂಡಿದ್ದಾರೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
2020 ರ ಹೊತ್ತಿಗೆ ಕಾಫಿಡೇಯ ಸರಣಿಯನ್ನು ಐದುಸಾವಿರಕ್ಕೇರಿಸುತ್ತೇನೆ ಅಂತ ಐಐಟಿ ಕರಗಪುರದಲ್ಲಿ 2015 ರಲ್ಲಿ ಮಾತನಾಡಿದ್ದ ಸಿದ್ದಾರ್ಥ ಹೆಗ್ಡೆಯವರು 2019 ರ ಹೊತ್ತಿಗೆ ತಾವೇ ಇಲ್ಲವಾದರು. ಮನುಷ್ಯನ ಅತಿಯಾದ ಆತ್ಮವಿಶ್ವಾಸ, ಹುಂಬತನವೇ ಆತನ ಅದಃಪತನಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಮಹತ್ವಾಕಾಂಕ್ಷೆಯು ಮಿತಿಮೀರಿದಾಗ, ಅದನ್ನು ಮೀರಲು ಸಾಧ್ಯವಾಗದೇ ಹೋದಾಗ ಎಂತಹುದೇ ಮನುಷ್ಯನೂ ವಿಚಲಿತನಾಗುತ್ತಾನೆ. ಆಗ ತಲೆಗೆ ಬರುವ ಮೊದಲ ಆಲೋಚನೆಯೇ ಜೀವಾಂತ್ಯದ್ದು.
ಈ ನಡುವೆ ಒಬ್ಬನ ಸಾಲವನ್ನು, ಸಂಕಷ್ಟವನ್ನು, ಅಂತ್ಯವನ್ನು ಸಮಾಜ ಸಲೀಸಾಗಿ ಟೀಕೆಗೆ, ವಿಮರ್ಶೆಗೊಡ್ಡುತ್ತದೆ.
ಒಬ್ಬ ವ್ಯಕ್ತಿ ಅಂತ್ಯವಾದ ನಂತರ ಆತನ ಕುರಿತು ಸಹಾನುಭೂತಿ ವ್ಯಕ್ತಪಡಿಸುವ, ಕೇಳಿದ್ದರೆ ನಾವು ಸಹಾಯ ಮಾಡುತ್ತಿರಲಿಲ್ಲವಾ !? ಎಂಬೆಲ್ಲಾ ಪುಗಸಟ್ಟೆ ಕರುಣೆ ತೋರುವ ಬದಲಾಗಿ ಇದ್ದಾಗ ನಮ್ಮ ಕೈಲಾದಷ್ಟು ಹೆಗಲು ಕೊಡುವುದರಲ್ಲಿ ನಂಬಿಕೆ ನನಗೆ.
In between ‘ಮಠ’ ಭಾರತದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾ. ಅದು ಹೇಳುವ ಹಲವು ಕಥೆಗಳು ಪ್ರತಿಯೊಬ್ಬ ಪ್ರೇಕ್ಷಕನ ಬದುಕಿನೊಂದಿಗೆ ಎಲ್ಲೋ ಒಂದುಕಡೆ ಬೆಸೆದುಕೊಂಡಿರುವಂತದ್ದು .
ಸಿನಿಮಾವಾಗಲಿ, ಕಥೆ-ಕಾದಂಬರಿಯನ್ನಾಗಲಿ ಭೋದನೆಯ ರೀತಿ ಕೊರೆಯದೆ ವಿಂಡಂಬನಾತ್ಮಕವಾಗಿ ಹೇಳುವುದು ಜನರನ್ನು ಬಹುಬೇಗ ತಲುಪುತ್ತದೆ. ಅದರಲ್ಲಿ ಗುರು ಮೊದಲೆರಡು ಸಿನಿಮಾಗಳಲ್ಲಿ ಯಶಸ್ವಿಯಾಗಿದ್ದರು. ಕಲಾವಿದರ, ಸಾಹಿತಿಗಳ ದೊಡ್ಡ ಕಷ್ಟವೇನೆಂದರೆ, ಬಹುತೇಕ ಸಂದರ್ಭಗಳಲ್ಲಿ ಅವರು ಬೋಧಿಸಿದಂತೆ ಬದುಕುವುದು ಅವರಿಗೇ ದುಸ್ತರ! ಗುರುಪ್ರಸಾದ್ ಕೂಡಾ ಇದಕ್ಕೆ ಹೊರತಲ್ಲ.
ಆತ ಹೊರಟುಹೋಗಾಗಿದೆ. ಇನ್ನೇನಿದ್ದರೂ ಆತನ ಸರ್ವಶ್ರೇಷ್ಠ ಕೃತಿಗಳಾದ ಮಠ ಹಾಗೂ ಎದ್ದೇಳು ಮಂಜುನಾಥ ಎಂಬೆರಡು ಸಿನಿಮಾಗಳು ಮಾತ್ರ ಆತನ ಗುರುತಾಗಿ ಉಳಿದುಕೊಳ್ಳಲಿವೆ.
ಹುಂಬ ಪ್ರತಿಭೆ ಗುರುಪ್ರಸಾದ್ ಗೆ ಅಂತಿಮ ನಮನಗಳು.
– ರವಿಕೃಷ್ಣಾ ರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ




