ಬೆಂಗಳೂರು: ಕನ್ನಡ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ (52) ಅವರ ಶವ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಶವ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಜಗ್ಗೇಶ್ ಅಭಿನಯದ, ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ಸ್ ಸ್ಪೆಷಲ್, ಎರಡನೇ ಸಲ, ರಂಗನಾಯಕ ಮುಂತಾದ ಚಿತ್ರಗಳು ಅವರ ನಿರ್ದೇಶನದಲ್ಲಿ ಮೂಡಿಬಂದು ಜನಪ್ರಿಯವಾಗಿದ್ದವು.
ಗುರುಪ್ರಸಾದ್ ವಾಸವಾಗಿದ್ದ ಅಪಾರ್ಟ್ ಮೆಂಟ್ ನಿಂದ ದುರ್ವಾಸನೆ ಕಂಡು ಬಂದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಂತರ, ಅಧಿಕಾರಿಗಳು ಗುರುಪ್ರಸಾದ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ನಡೆದು ಕೆಲವು ದಿನಗಳು ಕಳೆದಿವೆ ಎಂದು ಮಾಹಿತಿ ನೀಡಿದ್ದಾರೆ.
ಗುರುಪ್ರಸಾದ್ ಅವರು ಸಾಲಗಾರರಿಂದ ಒತ್ತಡಕ್ಕೆ ಒಳಗಾಗಿರಬಹುದು ಎಂಬ ವರದಿಗಳು ಇದ್ದು, ಇದೇ ಕಾರಣದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಇತ್ತೀಚೆಗೆ ಅವರು ಮರುಮದುವೆಯಾಗಿದ್ದರು. ಅವರ ಎರಡನೇ ಹೆಂಡತಿ ಗರ್ಭಿಣಿಯಾಗಿದ್ದಾರೆ ಎನ್ನಲಾಗಿದೆ. ಇವೆಲ್ಲವುಗಳ ನಡುವೆ ಗುರುಪ್ರಸಾದ್ ಹಣಕಾಸಿನ ಬಿಕ್ಕಟ್ಟಿಗೆ ಗುರಿಯಾಗಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಗುರುಪ್ರಸಾದ್ ನಿರ್ದೇಶನದ ಜೊತೆಗೆ, ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದರು ಮತ್ತು ಅವರ ಇತ್ತೀಚಿಗೆ ಹೊಸ ಚಿತ್ರ ನಿರ್ಮಾಣ ಹಂತದಲ್ಲಿತ್ತು.
ಗುರುಪ್ರಸಾದ್ ಅಭಿನಯಿಸಿದ ಚಿತ್ರಗಳು: ಮಠ, ಎದ್ದೇಳು ಮಂಜುನಾಥ, ಮೈಲಾರಿ, ಕಳ್ ಮಂಜ, ಹುಡುಗರು, ಡೈರೆಕ್ಟರ್ ಸ್ಪೆಷಲ್, ವಿಷಲ್, ಕರೋಡ್ ಪತಿ, ಜಿಗರ್ ಥಂಡ, ಅನಂತು ವರ್ಸಸ್ ನುಸ್ರುತ್, ಕುಷ್ಕಾ, ಬಡವಾ ರ್ಯಾಸ್ಕಲ್, ಬಾಡಿ ಗಾಡ್
ಗುರುಪ್ರಸಾದ್ ಸಂಭಾಷಣೆ ಬರೆದ ಚಿತ್ರಗಳು: ಹುಡುಗರು, ವಿಷಲ್, ಸೂಪರ್ ರಂಗ
ಈಟಿವಿಯ ತಕದಿಮಿತ ಡ್ಯಾನ್ಸಿಂಗ್ ಸ್ಟಾರ್ ಸ್ಟಾರ್ ಸುವರ್ಣದ ಪುಟಾಣಿ ಪಂಟ್ರು ಸೀಸನ್ 1, ಸ್ಟಾರ್ ಸುವರ್ಣದ ಪುಟಾಣಿ ಪಂಟ್ರು ಸೀಸನ್ 2, ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸ್ಟಾರ್ ಸುವರ್ಣದ ಭರ್ಜರಿ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿದ್ದರು. ಬಿಗ್ ಬಾಸ್ ಸೀಸನ್ 2 ಕನ್ನಡ ಅವತರಣಿಕೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. 2010ರಲ್ಲಿ ಎದ್ದೇಳು ಮಂಜುನಾಥ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದರು.




