ಲಾಸ್ ಏಂಜಲೀಸ್: ಈಗಾಗಲೇ ಅಲಂಕರಿಸಿರುವ ತನ್ನ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸುವ ಮೂಲಕ ದೀಪಿಕಾ ಪಡುಕೋಣೆ 2023 ರ ಆಸ್ಕರ್ ಪ್ರಶಸ್ತಿಯ ನಿರೂಪಕರಲ್ಲಿ ಒಬ್ಬರಾಗಿದ್ದಾರೆ. ಈ ವರ್ಷ ಪ್ರಶಸ್ತಿಯನ್ನು ನೀಡಿದ ಏಕೈಕ ಭಾರತೀಯ ಸೆಲೆಬ್ರಿಟಿ ಮತ್ತು ಹಾಗೆ ಮಾಡಿದ ಮೂರನೇ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಈ ಪ್ರತಿಷ್ಠಿತ ಈವೆಂಟ್‌ನ ಭಾಗವಾಗಲು ಅವರು ಎಮಿಲಿ ಬ್ಲಂಟ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡ್ವೇನ್ ಜಾನ್ಸನ್, ಮೈಕೆಲ್ ಬಿ ಜೋರ್ಡಾನ್, ಜಾನೆಲ್ಲೆ ಮೊನೆ, ಜೊಯಿ ಸಲ್ಡಾನಾ, ಜೆನ್ನಿಫರ್ ಕೊನ್ನೆಲ್ಲಿ, ರಿಜ್ ಅಹ್ಮದ್ ಮತ್ತು ಮೆಲಿಸ್ಸಾ ಮೆಕಾರ್ಥಿಯಂತ ಧೀಮಂತರ ಸಾಲಿಗೆ ಸೇರಿದ್ದಾರೆ.
95ನೇ ಆಸ್ಕರ್ ಪ್ರಶಸ್ತಿಯ ರೆಡ್ ಕಾರ್ಪೆಟ್ ಮೇಲೆ ಕಪ್ಪು ಉಡುಪಿನಲ್ಲಿ ನಡೆದುಕೊಂಡು ಹೋಗುವಾಗ ದೀಪಿಕಾ ಆತ್ಮವಿಶ್ವಾಸ ದ ಪ್ರತೀಕದಂತೆ ಕಾಣುತ್ತಿದ್ದರು. ತನ್ನ ಮನಮೋಹಕ ನಿಲುವಿನಿಂದ ಎಲ್ಲರ ಗಮನ ಸೆಳೆದಿದ್ದಾಳೆ. 2023ರ ಆಸ್ಕರ್ ಪ್ರಶಸ್ತಿಯನ್ನು ಪಡೆದ ನಾಟು ನಾಟು ಹಾಡಿನ ಬಗ್ಗೆ ನಿರೂಪಿಸಿದ ಏಕೈಕ ಭಾರತೀಯ ಸೆಲೆಬ್ರಿಟಿ ದೀಪಿಕ ಪಡುಕೋಣೆ ಎಂಬ ಹೆಗ್ಗಳಿಕೆ ಅವರದಾಗಿದೆ.




