ಆಕಸ್ಮಿಕವಾಗಿ ಶೂಟ್ ಮಾಡಿಕೊಂಡ ನಟ
ಮುಂಬೈ: ಬಾಲಿವುಡ್ ನಟ ಮತ್ತು ಮಾಜಿ ಸಂಸದ ಗೋವಿಂದ ಅವರು ಇಂದು ಮುಂಜಾನೆ ತಮ್ಮ ಸ್ವಂತ ಪರವಾನಗಿ ಹೊಂದಿರುವ ರಿವಾಲ್ವರ್‌ನಿಂದ ಆಕಸ್ಮಿಕವಾಗಿ ಕಾಲಿಗೆ ಗುಂಡು ಹಾರಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
- ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು: ಸಿದ್ದರಾಮಯ್ಯ
ಮುಂಜಾನೆ ಸುಮಾರು 4:45ಕ್ಕೆ ತಮ್ಮ ಪಿಸ್ತೂಲ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮುಂಬೈನ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ದಾಖಲಿಸಲಾಗಿದ್ದು, ಗುಂಡು ಅವರ ಮೊಣಕಾಲಿಗೆ ತಗುಲಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ, ಗೋವಿಂದ ಅವರ ಕುಟುಂಬ ಮತ್ತು ತಂಡ ಅವರ ಸ್ಥಿತಿಯ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.
ಮೂಲಗಳ ಪ್ರಕಾರ, ನಟ ಕೋಲ್ಕತ್ತಾಗೆ ಮುಂಜಾನೆ ವಿಮಾನದಲ್ಲಿ ತೆರಳಬೇಕಿತ್ತು. ಗೋವಿಂದ ಅವರನ್ನು ಬೆಳಗ್ಗೆ 5.15ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೋವಿಂದ ಅವರಿಗೆ ಸೇರಿದ ರಿವಾಲ್ವರ್ ಅನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಅವರು ಗೋವಿಂದ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಗೋವಿಂದ ಕೋಲ್ಕತ್ತಾಗೆ ತೆರಳಲು ತಯಾರಾಗುತ್ತಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಪರವಾನಗಿ ಹೊಂದಿರುವ ರಿವಾಲ್ವರ್ ಅನ್ನು ಇಟ್ಟುಕೊಂಡಿದ್ದರು, ಅದು ಅವರ ಕೈಯಿಂದ ಬಿದ್ದು ಗುಂಡು ಅವರ ಕಾಲಿಗೆ ತಗುಲಿದೆ. ವೈದ್ಯರು ಗುಂಡನ್ನು ಹೊರತೆಗೆದಿದ್ದು, ಅವರ ಸ್ಥಿತಿ ಉತ್ತಮವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಗೋವಿಂದ ಅವರು ಕೂಲಿ ನಂ. 1, ಹಸೀನಾ ಮಾನ್ ಜಾಯೇಗಿ, ಸ್ವರ್ಗ, ಸಾಜನ್ ಚಲೇ ಸಸುರಲ್, ರಾಜಾ ಬಾಬು, ರಾಜಾಜಿ, ಪಾರ್ಟ್ ನರ್ ಮತ್ತು ಇತರ ಹಾಸ್ಯಮಯ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಪ್ರಖ್ಯಾತರಾಗಿದ್ದಾರೆ. ಪಹ್ಲಾಜ್ ನಿಹಲಾನಿ ನಿರ್ದೇಶನದ 2019ರ ಚಲನಚಿತ್ರ ರಂಗೀಲಾ ರಾಜದಲ್ಲಿ ಗೋವಿಂದ ಅವರ ಇತ್ತೀಚಿನ ಚಿತ್ರವಾಗಿದೆ. ಆದರೆ ಇದು ಗಲ್ಲಾಪೆಟ್ಟಿಗೆಯಲ್ಲಿ ಸೋಲನುಭವಿಸಿತು. ನಂತರ ಗೋವಿಂದ ನಟನೆಯಿಂದ ದೂರವಿದ್ದಾರೆ.
80, 90ರ ದಶಕದಲ್ಲಿ ಅವರು ಬಾಲಿವುಡ್‌ನ ಪ್ರಮುಖ ಸ್ಟಾರ್ ಆಗಿ ಮಿಂಚಿದ್ದರು. 2007ರಲ್ಲಿ ತೆರೆಕಂಡ ಪಾರ್ಟ್ ನರ್ ಅವರ ಕಡೆಯ ಯಶಸ್ವಿ ಚಿತ್ರವಾಗಿದೆ. 2007 ರ ನಂತರ, ಗೋವಿಂದ ಮತ್ತೊಂದು ಬಾಕ್ಸ್ ಆಫೀಸ್ ಹಿಟ್ ನೀಡುವಲ್ಲಿ ಯಶಸ್ವಿಯಾಗಿಲ್ಲ. ಪಾರ್ಟ್ ನರ್ ಸೇರಿದಂತೆ 13 ಚಿತ್ರಗಳಲ್ಲಿ ಅಭಿನಯಿಸಿದರು. ಕಡಿಮೆ ಬಜೆಟ್ ಚಿತ್ರಗಳು ಸೇರಿದಂತೆ ಬಾಕ್ಸ್ ಆಫೀಸ್ ನಲ್ಲಿ ಸೋಲುಂಡಿವೆ.
ಫ್ರೈಡೇ, ಆ ಗಯಾ ಹೀರೋ, ಹ್ಯಾಪಿ ಎಂಡಿಂಗ್, ಕಿಲ್ ದಿಲ್, ದೀವಾನಾ ಮೈ ದೀವಾನಾ, ಲೂಟ್, ನಾಟಿ @40, ರಾವಣ್, ಡು ನಾಟ್ ಡಿಸ್ಟರ್ಬ್, ಲೈಫ್ ಪಾರ್ಟ್ನರ್, ಚಲಾ ತಾಲಾ ಚಲ್ ಮತ್ತು ಮನಿ ಹೈ ತೊ ಹನಿ ಹೈ ಮೊದಲಾದ ಚಿತ್ರಗಳು ಸೋತಿವೆ.




