ನಟ, ರಾಜಕಾರಣಿ ವಿಜಯಕಾಂತ್ ಕಾಲವಶ

2 years ago

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು DMDK ಸಂಸ್ಥಾಪಕ ವಿಜಯಕಾಂತ್ (71) ಇಂದು ಮುಂಜಾನೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕಾಲವಶರಾಗಿದ್ದಾರೆ.

ನ್ಯೂಮೋನಿಯಾ ಜ್ವರ ಮತ್ತು ಕೊರೊನಾ ಸೋಂಕಿನಿಂಗೆ ಚಿಕಿತ್ಸೆ ಪಡೆಯಲು ಅವರು ಚೆನ್ನೈನ ಎಂಐಒಟಿ ಇಂಟರ್ನ್ಯಾಷನಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸುಧಾರಿಸಿದೆ ನಿನ್ನೆ ರಾತ್ರಿಯಿಂದ ಅವರಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು.

ಕ್ಯಾಪ್ಟನ್ ವಿಜಯಕಾಂತ್ ಅವರು ನ್ಯುಮೋನಿಯಾ ರೋಗದ ಚಿಕಿತ್ಸೆಗೆ ದಾಖಲಾದ ನಂತರ ವೆಂಟಿಲೇಟರ್ ನೆರವಿನಿಂದ ಇದ್ದರು. ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿ ಕೂಡ ಇಂದು ಬೆಳಗ್ಗೆ ನಿಧನರಾದರು ಎಂದು ಆಸ್ಪತ್ರೆಯ ಬುಲೆಟಿನ್ ಬಿಡುಗಡೆಯಲ್ಲಿ ತಿಳಿಸಲಾಗಿದೆ.

ವಿಜಯ್ ಕಾಂತ್ ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಮತ್ತು ಅವರ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. 3 ವಾರಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Leave a Reply